ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧದ ಹಿನ್ನೆಲೆಯಲ್ಲಿ ಮುಂದೆ ಸಂಭವಿಸಬಹುದಾದ ಅನಾಹುತ ತಪ್ಪಿಸಲು ಈಗಿನಿಂದಲೇ ಮುಂಜಾಗ್ರತಾ ಕ್ರಮಕ್ಕೆ ಕರೆ ನೀಡಿದ್ದಾರೆ. ಆದರೆ ಕಾಂಗ್ರೆಸ್ಸಿಗರು ಇತಿಹಾಸ ಅರಿಯದೇ ಮಾತನಾಡುತ್ತಿರುವುದು ದುರಂತದ ಸಂಗತಿ ಎಂದು ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಕಿಡಿಕಾರಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪೆಟ್ರೋಲ್, ಡೀಸೆಲ್, ತೈಲ, ಅಡುಗೆ ಅನಿಲ ಸೇರಿದಂತೆ ಇತರೆ ವಸ್ತುಗಳ ಮಿತ ಬಳಕೆಗೆ ಕರೆ ನೀಡಿದ್ದಾರೆ. ಭವಿಷ್ಯದಲ್ಲಿ ಭಾರತ ದೇಶದಲ್ಲಿ ಇಂಧನ ಕೊರತೆ, ಎಲ್ ಪಿಜಿ ಸಿಲಿಂಡರ್, ಅಡುಗೆ ಅನಿಲ ಅಭಾವ ತಪ್ಪಿಸಲು ವರ್ಕ್ ಫ್ರಂ ಹೋಂ, ಅಗತ್ಯಕ್ಕೆ ತಕ್ಕಷ್ಟು ಮಾತ್ರ ವಾಹನಗಳ ಬಳಕೆ, ಚಿನ್ನ ಖರೀದಿ ಮಾಡದಂತೆ ಕರೆ ನೀಡಿದ್ದಾರೆ. ಇದು ಎಚ್ಚರಿಕೆಯ ಹೆಜ್ಜೆ. ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಏರಿಕೆ ಮಾಡಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಚಿನ್ನ ಖರೀದಿ ಮಾಡಬೇಡಿ ಎಂದು ರಾಷ್ಟ್ರಕ್ಕೆ ಕರೆ ಕೊಟ್ಟಿದ್ದರು. 2013ರಲ್ಲಿ ಕೇಂದ್ರ ವಿತ್ತ ಸಚಿವರಾಗಿದ್ದ ಪಿ. ಚಿದಂಬರಂ ಅವರೂ ಇದನ್ನೇ ಹೇಳಿದ್ದರು. ಕೇಂದ್ರ ಪೆಟ್ರೋಲಿಯಂ ಸಚಿವರಾಗಿದ್ದ ವೀರಪ್ಪ ಮೊಯ್ಲಿ ಅವರು ಇಂಧನ ಬಳಕೆ ಕಡಿತ ಮಾಡುವಂತೆ, ರಾತ್ರಿ ವೇಳೆಯಲ್ಲಿ ಪೆಟ್ರೋಲ್, ಡೀಸೆಲ್ ಬಂಕ್ ಮುಚ್ಚುವಂತೆ ಹೇಳಿದ್ದನ್ನು ಕಾಂಗ್ರೆಸ್ಸಿಗರು ಮರೆತಿದ್ದಾರೆ. ರಾಷ್ಟ್ರದ ಹಿತ ದೃಷ್ಟಿಯಿಂದ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ತೆಗೆದುಕೊಳ್ಳುವ ಪ್ರತಿ ನಿರ್ಧಾರವೂ ಸ್ವಾಗತಾರ್ಹ ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಹಣ ಲೂಟಿ ಹೊಡೆದಿದ್ದೇ ದೊಡ್ಡ ಸಾಧನೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಾಚಾರ, ಸಿಎಂ ಕುರ್ಚಿ ಕಾದಾಟ ಸೇರಿದಂತೆ ಜನವಿರೋಧಿ ಕೆಲಸಗಳನ್ನೇ
ಮಾಡಿಕೊಂಡು ಬರುತ್ತಿದೆ. ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವುದು ಖಚಿತ. ದೇಶದಲ್ಲಿ ನೆಲಕಚ್ಚಿರುವ ಕಾಂಗ್ರೆಸ್ ಮುಂದೆಯೂ ಕೇಂದ್ರದಲ್ಲಿ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ ಎಂದು ರಾಜನಹಳ್ಳಿ ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.
- 2028 ವಿಧಾನಸಭಾ ಚುನಾವಣೆ
- Congress vs BJP
- DAVANAGERE NEWS
- Energy Conservation.
- Former DUDA Chairman
- Fuel Crisis
- Guarantee Schemes Corruption.
- Indira Gandhi Gold Policy
- Karnataka Assembly Elections 2028
- Karnataka Politics
- Middle East War Impact
- Petrol Diesel Price Hike India
- PM Narendra Modi
- Rajanahalli Shivakumar
- Veerappa Moily Fuel Saving
- ಇಂದಿರಾ ಗಾಂಧಿ
- ಇಂಧನ ಉಳಿತಾಯ
- ಕರ್ನಾಟಕ ರಾಜಕೀಯ
- ಕಾಂಗ್ರೆಸ್ ಟೀಕೆ
- ಗ್ಯಾರಂಟಿ ಯೋಜನೆಗಳು
- ದಾವಣಗೆರೆ ಸುದ್ದಿ
- ದೂಡಾ ಮಾಜಿ ಅಧ್ಯಕ್ಷ
- ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ
- ಪ್ರಧಾನಿ ನರೇಂದ್ರ ಮೋದಿ
- ಮಧ್ಯಪ್ರಾಚ್ಯ ಯುದ್ಧ
- ರಾಜನಹಳ್ಳಿ ಶಿವಕುಮಾರ್
- ವೀರಪ್ಪ ಮೊಯ್ಲಿ





Leave a comment