ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ನಡೆದ ಹೈಡ್ರಾಮಾ ಅಂತ್ಯಗೊಂಡಿದ್ದು, ಮುಖ್ಯಮಂತ್ರಿ ವಿಜಯ್ ಅವರು ವಿಧಾನಸಭೆಯಲ್ಲಿ ಭರ್ಜರಿ ಬಹುಮತ ಸಾಬೀತುಪಡಿಸಿದ್ದಾರೆ. 234 ಸದಸ್ಯರ ಬಲದ ವಿಧಾನಸಭೆಯಲ್ಲಿ ವಿಜಯ್ ಪರವಾಗಿ 144 ಶಾಸಕರು ಮತ ಚಲಾಯಿಸುವ ಮೂಲಕ ಸರ್ಕಾರ ಸುಭದ್ರವಾಗಿದೆ.
ಬಹುಮತ ಸಾಬೀತುಪಡಿಸಿದ ಬಳಿಕ ಮಾತನಾಡಿದ ಸಿಎಂ ವಿಜಯ್ ನಾನು ಪದವಿ, ಅಧಿಕಾರಕ್ಕಾಗಿ, ಹಣ ಮಾಡಲು ಬಂದಿಲ್ಲ. ದ್ವೇಷ ರಾಜಕಾರಣ ಮಾಡಲ್ಲ, ಅಲ್ಪಸಂಖ್ಯಾತರ ವಿರುದ್ದವೂ ಇರುವುದಿಲ್ಲ. ಎಲ್ಲಾ ವರ್ಗದವರು, ಸಮುದಾಯ, ಧರ್ಮದವರ ನಡುವೆ ಶಾಂತಿ ನೆಲೆಸಬೇಕು. ಈ ನಿಟ್ಟಿನಲ್ಲಿ ಆಡಳಿತ ನಡೆಸುತ್ತೇನೆ ಎಂದು ಘೋಷಿಸಿದರು.
ಮುಖ್ಯಾಂಶಗಳು:
ಬಹುಮತದ ಸಂಖ್ಯೆ: ಒಟ್ಟು 234 ಸದಸ್ಯರ ಬಲದ ಸದನದಲ್ಲಿ ಬಹುಮತಕ್ಕೆ 118 ಮತಗಳ ಅಗತ್ಯವಿತ್ತು. ವಿಜಯ್ ಅವರು 144 ಮತಗಳನ್ನು ಪಡೆಯುವ ಮೂಲಕ ಸುಲಭವಾಗಿ ಜಯಗಳಿಸಿದರು.
ವಿರೋಧ ಪಕ್ಷಗಳ ನಡೆ: ವಿಶ್ವಾಸಮತ ಯಾಚನೆ ವೇಳೆ ತೀವ್ರ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಡಿಎಂಕೆ (DMK) ಮತ್ತು ಡಿಎಂಡಿಕೆ (DMDK) ಶಾಸಕರು ಸದನದಿಂದ ಹೊರನಡೆದರು (Walkout).
ತಟಸ್ಥ ಮತಗಳು: ನಾಲ್ವರು ಪಿಎಂಕೆ (PMK) ಶಾಸಕರು ಮತ್ತು ಒಬ್ಬ ಬಿಜೆಪಿ (BJP) ಶಾಸಕ ಮತದಾನದಿಂದ ದೂರ ಉಳಿದರು.
ಎಐಎಡಿಎಂಕೆ ಸೀಳು: ಎಐಎಡಿಎಂಕೆಯ ಷಣ್ಮುಗಂ ಮತ್ತು ಎಸ್‌ಪಿ ವೇಲುಮಣಿ ಬಣದ 30 ಶಾಸಕರಲ್ಲಿ ಕನಿಷ್ಠ 24 ಶಾಸಕರು ವಿಜಯ್ ಸರ್ಕಾರದ ಪರವಾಗಿ ಮತ ಚಲಾಯಿಸಿರುವುದು ಗಮನಾರ್ಹ.





Leave a comment