ದಾವಣಗೆರೆ: ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಮುನ್ನಡೆ ಮುಂದುವರಿದಿದೆ. 11ನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು 7916 ಮತಗಳ ಭಾರೀ ಮುನ್ನಡೆಯನ್ನು ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪಡೆದಿದ್ದಾರೆ. ಈ ಮೂಲಕ ಮುನ್ನಡೆಯ ನಾಗಾಲೋಟವನ್ನು ಕಾಂಗ್ರೆಸ್ ಮುಂದುವರಿಸಿದೆ.
ಸಮರ್ಥ್ ಶಾಮನೂರು ಅವರು ಆರಂಭದಲ್ಲಿ ಹಿನ್ನೆಡೆ ಸಾಧಿಸಿದ್ದರೂ, ಸದ್ಯಕ್ಕೆ ಬರೋಬ್ಬರಿ ಎಂಟು ಸಾವಿರ ಮತಗಳ ಸನಿಹದಲ್ಲಿ ಲೀಡ್ ಪಡೆದಿದ್ದು, ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಸಂಭ್ರಮ ತಂದಿದೆ.
ಸತತ ಏಳು ಸುತ್ತುಗಳಲ್ಲಿ ಆರಂಭಿಕ ಮುನ್ನಡೆ ಪಡೆದಿದ್ದ ಶ್ರೀನಿವಾಸ್ ದಾಸಕರಿಯಪ್ಪ ಅವರು ಎಂಟನೇ ಸುತ್ತಿನ ಬಳಿಕ ಹಿನ್ನೆಡೆ ಅನುಭವಿಸುತ್ತಿದ್ದಾರೆ. ಆರಂಭದಲ್ಲಿ ಕೇವಲ ಒಂದು ಸಾವಿರ ಮತಗಳ ಅಂತರದಿಂದ ಲೀಡ್ ಪಡೆದಿದ್ದ ಸಮರ್ಥ್ ಶಾಮನೂರು ಸದ್ಯ 7916 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ನ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, 10ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದೆ. ಶಾಮನೂರು ಶಿವಶಂಕರಪ್ಪರ ಮೊಮ್ಮಗ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು 5220 ಮತಗಳ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.
ಈ ಮೂಲಕ ಮತ್ತೆ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಹತ್ತು ಸುತ್ತುಗಳ ಪೈಕಿ ಏಳು ಸುತ್ತುಗಳಲ್ಲಿ ಬಿಜೆಪಿ ಆರಂಭದಲ್ಲಿ ಮುನ್ನಡೆ ಸಾಧಿಸಿತ್ತು. ಎಂಟು, ಒಂಭತ್ತು ಮತ್ತು ಹತ್ತನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಸಮರ್ಥ್ ಶಾಮನೂರು
ಅವರು ಹತ್ತನೇ ಸುತ್ತಿನಲ್ಲಿ 5220 ಮತಗಳಿಂದ ಮುನ್ನಡೆ ಸಾಧಿಸಿದ್ದು, ಫಲಿತಾಂಶ ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಎಂಟನೇ ಸುತ್ತಿನಲ್ಲಿ 1073 ಮತಗಳ ಮುನ್ನಡೆ ಗಳಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು 3945 ಮತಗಳ ಮುನ್ನಡೆ ಸಾಧಿಸಿದ್ದಾರೆ.
9ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, ಆರಂಭದಲ್ಲಿ ಏಳು ಸುತ್ತುಗಳಲ್ಲಿ ಹಿನ್ನೆಡೆಯಲ್ಲಿದ್ದ ಸಮರ್ಥ್ ಶಾಮನೂರು 8 ಮತ್ತು 9 ನೇ ಸುತ್ತಿನಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ ಮತ್ತೆ ಹಾವು ಏಣಿ ಆಟ ಮುಂದುವರಿದಿದೆ. ಅಂಚೆ ಮತಗಳಲ್ಲಿ ಮುನ್ನಡೆ ಸಾಧಿಸಿದ್ದ ಸಮರ್ಥ್ ಶಾಮನೂರು ಬಳಿಕ ಹಿನ್ನೆಡೆ ಅನುಭವಿಸಿದ್ದರು. ಸತತ ಏಳು ಸುತ್ತುಗಳಲ್ಲಿ ಮುನ್ನಡೆ ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪರು ಎಂಟು ಮತ್ತು 9 ನೇ ಸುತ್ತಿನಲ್ಲಿ ಹಿನ್ನೆಡೆ ಅನುಭವಿಸಿದ್ದಾರೆ.





Leave a comment