ದಾವಣಗೆರೆ: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ನಗರದ ಶ್ರೀ ಸಿದ್ಧಗಂಗಾ ಕಾಂಪೋಜಿಟ್ ಹೈಸ್ಕೂಲ್‌ಗೆ 100ಕ್ಕೆ 100 ಫಲಿತಾಂಶ ದೊರಕಿದೆ.
ವಿ. ಮಠದ್ ಮತ್ತು ಮೀನಾ ವಿ. ಮಠದ್ ದಂಪತಿಗಳ ಪುತ್ರಿ ಶ್ರೀ. ವಿ. ಮಠದ್ 625ಕ್ಕೆ 621 ಅಂಕ ಗಳಿಸಿದ್ದಾಳೆ. ಕನ್ನಡ 125, ಇಂಗ್ಲೀಷ್ 100, ಹಿಂದಿ 100, ಗಣಿತ 100, ವಿಜ್ಞಾನ 96, ಸಮಾಜ 100 ಒಟ್ಟು 621 ಅಂಕಗಳನ್ನು ಪಡೆದುಕೊಂಡಿದ್ದಾಳೆ. A+ ಗ್ರೇಡಿನಲ್ಲಿ 49, A ಗ್ರೇಡಿನಲ್ಲಿ 102, B+ ಗ್ರೇಡಿನಲ್ಲಿ 62, B ಗ್ರೇಡಿನಲ್ಲಿ 50, C+ ಗ್ರೇಡಿನಲ್ಲಿ 18, C ಗ್ರೇಡಿನಲ್ಲಿ 6 ಮಕ್ಕಳು ಉತ್ತೀರ್ಣರಾಗಿ ಶಾಲೆಗೆ 100ಕ್ಕೆ 100 ಫಲಿತಾಂಶ ನೀಡಿದ್ದಾರೆ.
ಕನ್ನಡದಲ್ಲಿ 6, ಇಂಗ್ಲೀಷ್‌ನಲ್ಲಿ 1, ಹಿಂದಿಯಲ್ಲಿ 31, ಗಣಿತದಲ್ಲಿ 1, ಸಮಾಜ ವಿಜ್ಞಾನದಲ್ಲಿ 5 ಮಕ್ಕಳು ಒಟ್ಟು 42 ಮಕ್ಕಳು ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
ವಿ. ಮಠದ್ 621, ರಚನಾ ಯು. 616, ಶ್ರೇಯಾ ಎಸ್. ಎಮ್. 608, ಮೊಹಮ್ಮದ್ ರಯಾನ್ ರಜಾ 606, ಆಶಾ ಟಿ. ಹೆಚ್.. 603 ಮತ್ತು ಬಿಬಿ ಜೈನಾಬ್ 601 ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಅತ್ತುತ್ಯಮ ಫಲಿತಾಂಶ ನೀಡಿದ ಎಲ್ಲ ಮಕ್ಕಳಿಗೆ ಮತ್ತು ಬೋಧಕ ವರ್ಗದವರಿಗೆ ಮುಖ್ಯ ಶಿಕ್ಷಕಿ ರೇಖಾರಾಣಿ. ಕೆ. ಎಸ್., ಸಂಸ್ಥೆಯ ಅಧ್ಯಕ್ಷರಾದ ಪ್ರಶಾಂತ್, ಕಾರ್ಯದರ್ಶಿ ಹೇಮಂತ್, ನಿರ್ದೇಶಕರಾದ ಡಾ|| ಜಯಂತ್ ಮತ್ತು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.
ದಾವಣಗೆರೆ ದಕ್ಷಿಣ ವಲಯಕ್ಕೆ ಅತ್ಯುತ್ತಮ ಫಲಿತಾಂಶ ನೀಡಿದ ಸಿದ್ಧಗಂಗಾ ಸಂಸ್ಥೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾರವರು ಅಭಿನಂದಿಸಿದ್ದಾರೆ.
- 100ಕ್ಕೆ 100 ಫಲಿತಾಂಶ
- DAVANAGERE NEWS
- Davanagere school toppers
- Davanagere SSLC Results 2026
- Education news Davanagere.
- Karnataka SSLC results 100 percent
- Shree V Mathad 621 marks
- Siddaganga Composite High School Davanagere
- Siddaganga School Davanagere performance
- SSLC Result news in Kannada.
- SSLC results today Karnataka
- ಕರ್ನಾಟಕ ಎಸ್ಎಸ್ಎಲ್ಸಿ ಟಾಪರ್ಸ್
- ದಾವಣಗೆರೆ ಎಸ್ಎಸ್ಎಲ್ಸಿ ಫಲಿತಾಂಶ 2026
- ದಾವಣಗೆರೆ ಶಿಕ್ಷಣ ಸುದ್ದಿ
- ಶ್ರೀ ವಿ ಮಠದ್ ಸಿದ್ಧಗಂಗಾ ಶಾಲೆ
- ಸಿದ್ಧಗಂಗಾ ಕಾಂಪೋಜಿಟ್ ಹೈಸ್ಕೂಲ್ ದಾವಣಗೆರೆ
- ಸಿದ್ಧಗಂಗಾ ಶಿಕ್ಷಣ ಸಂಸ್ಥೆ ದಾವಣಗೆರೆ






Leave a comment