Home ಕ್ರೈಂ ನ್ಯೂಸ್ “ನಿಮ್ಮ ಅಪ್ಪನ ತಾಕತ್ತಿದ್ದರೆ ತಡೆಯಿರಿ”: ಪುತ್ರನ ಥಾರ್ ಅಪಘಾತದ ಬೆನ್ನಲ್ಲೇ ಪೊಲೀಸರಿಗೆ ಬಹಿರಂಗ ಬೆದರಿಕೆ ಹಾಕಿದ ಬಿಜೆಪಿ ಶಾಸಕ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

“ನಿಮ್ಮ ಅಪ್ಪನ ತಾಕತ್ತಿದ್ದರೆ ತಡೆಯಿರಿ”: ಪುತ್ರನ ಥಾರ್ ಅಪಘಾತದ ಬೆನ್ನಲ್ಲೇ ಪೊಲೀಸರಿಗೆ ಬಹಿರಂಗ ಬೆದರಿಕೆ ಹಾಕಿದ ಬಿಜೆಪಿ ಶಾಸಕ!

Share
ಶಾಸಕ
Share

ಮಧ್ಯಪ್ರದೇಶ: ಇಲ್ಲಿನ ಶಿವಪುರಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕ ಪ್ರೀತಂ ಲೋಧಿ ಅವರ ಪುತ್ರ ದಿನೇಶ್ ಲೋಧಿ ಚಲಾಯಿಸುತ್ತಿದ್ದ ಥಾರ್ ಎಸ್‌ಯುವಿ ಐದು ಜನರಿಗೆ ಡಿಕ್ಕಿ ಹೊಡೆದ ಪ್ರಕರಣ ಇದೀಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

ಮೊದಲು “ನ್ಯಾಯ ಸಿಗಲಿ” ಎಂದಿದ್ದ ಶಾಸಕರು, ಈಗ ಏಕಾಏಕಿ ಪೊಲೀಸ್ ಅಧಿಕಾರಿಗಳಿಗೆ “ನಿಮ್ಮ ಅಪ್ಪನ ತಾಕತ್ತಿದ್ದರೆ ತಡೆಯಿರಿ” ಎಂದು ಬಹಿರಂಗವಾಗಿ ಸವಾಲು ಹಾಕಿದ್ದಾರೆ.

ಘಟನೆಯ ವಿವರ:

ಏಪ್ರಿಲ್ 16 ರಂದು ನಡೆದ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐವರು ಗಾಯಗೊಂಡಿದ್ದರು. ಅಪಘಾತದ ನಂತರ ಶಾಸಕ ಪ್ರೀತಂ ಲೋಧಿ ಫೇಸ್‌ಬುಕ್‌ನಲ್ಲಿ “ಸಾರ್ವಜನಿಕರೇ ನಮಗೆ ಮುಖ್ಯ, ಕಾನೂನು ಕ್ರಮ ಜರುಗಲಿ” ಎಂದು ಪೋಸ್ಟ್ ಮಾಡಿದ್ದರು. ಆದರೆ, ತನಿಖೆ ಚುರುಕುಗೊಳ್ಳುತ್ತಿದ್ದಂತೆ ತಮ್ಮ ವರಸೆ ಬದಲಿಸಿದ ಅವರು, ಎಸ್‌ಡಿಒಪಿ (SDOP) ಆಯುಷ್ ಜಖರ್ ಅವರಿಗೆ ನೇರ ಬೆದರಿಕೆ ಹಾಕಿದ್ದಾರೆ.

ಶಾಸಕರ ವಿವಾದಾತ್ಮಕ ಹೇಳಿಕೆ:

“ನನ್ನ ಮಗ ಮತ್ತೆ ಕರೇರಾಕ್ಕೆ ಬರುತ್ತಾನೆ ಮತ್ತು ಚುನಾವಣೆಗೂ ಸ್ಪರ್ಧಿಸುತ್ತಾನೆ. ನಿಮ್ಮ ಅಪ್ಪನ ತಾಕತ್ತಿದ್ದರೆ ತಡೆಯಿರಿ” ಎಂದು ಶಾಸಕರು ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ತನಿಖೆ ನಡೆಸುತ್ತಿರುವ ಅಧಿಕಾರಿಗಳು ತಮ್ಮ ಮಿತಿಯಲ್ಲಿ ಇರಬೇಕು ಎಂದು ಗುಡುಗಿದ್ದಾರೆ.

ಉದ್ಧಟತನದ ಪರಮಾವಧಿ: ವಿಚಿತ್ರವೆಂದರೆ, ತನಿಖೆಗೆ ಹಾಜರಾದ ಶಾಸಕರ ಪುತ್ರ ದಿನೇಶ್ ಲೋಧಿ, ಅಪಘಾತಕ್ಕೆ ಬಳಸಿದ ಅದೇ ನಂಬರ್ ಪ್ಲೇಟ್ ಇಲ್ಲದ, ಕಪ್ಪು ಫಿಲ್ಮ್ ಮತ್ತು ಹೂಟರ್ ಅಳವಡಿಸಿದ್ದ ಥಾರ್ ವಾಹನದಲ್ಲೇ ಪೊಲೀಸ್ ಠಾಣೆಗೆ ಬಂದು ಉದ್ಧಟತನ ಮೆರೆದಿದ್ದಾನೆ. ರಸ್ತೆಯಲ್ಲಿ ಹೋಗುವವರೇ ನಮಗೆ ದಾರಿ ಕೊಡಲಿಲ್ಲ ಎಂದು ಆತ ಪೊಲೀಸರ ಮುಂದೆ ಸಮರ್ಥಿಸಿಕೊಂಡಿದ್ದಾನೆ.

Share

Leave a comment

Leave a Reply

Your email address will not be published. Required fields are marked *