Home ಕ್ರೈಂ ನ್ಯೂಸ್ ಡೆಟಿಂಗ್ ಆ್ಯಪ್ ಮೂಲಕ 500ಕ್ಕೂ ಹೆಚ್ಚು ಮಹಿಳೆಯರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಕಿಲಾಡಿ ಅರೆಸ್ಟ್
ಕ್ರೈಂ ನ್ಯೂಸ್ದಾವಣಗೆರೆನವದೆಹಲಿವಾಣಿಜ್ಯ

ಡೆಟಿಂಗ್ ಆ್ಯಪ್ ಮೂಲಕ 500ಕ್ಕೂ ಹೆಚ್ಚು ಮಹಿಳೆಯರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಕಿಲಾಡಿ ಅರೆಸ್ಟ್

Share
ಮಹಿಳೆ
Share

ಹೊಸ ದೆಹಲಿ: ವೈದ್ಯ, ವಕೀಲ, ಉದ್ಯಮಿ ಹೀಗೆ ಬೇರೆ ಬೇರೆ ವೇಷ ಧರಿಸಿ ಡೇಟಿಂಗ್ ಆ್ಯಪ್‌ಗಳ ಮೂಲಕ ಸುಮಾರು 500ಕ್ಕೂ ಹೆಚ್ಚು ಮಹಿಳೆಯರಿಗೆ ಬರೋಬ್ಬರಿ 2 ಕೋಟಿ ರೂಪಾಯಿ ವಂಚಿಸಿದ ಮಹಾ ವಂಚಕನನ್ನು ದೆಹಲಿಯ ಸೌತ್ ವೆಸ್ಟ್ ಜಿಲ್ಲೆಯ ಸೈಬರ್ ಪೊಲೀಸ್ ತಂಡ ಬಂಧಿಸಿದೆ.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ನಿವಾಸಿ ಆನಂದ್ ಕುಮಾರ್ (35) ಬಂಧಿತ ಆರೋಪಿ.

ಈತ  ಮ್ಯಾಟ್ರಿಮೋನಿಯಲ್ ಮತ್ತು ಡೇಟಿಂಗ್ ಆ್ಯಪ್‌ಗಳಲ್ಲಿ ಸುಳ್ಳು ಪ್ರೊಫೈಲ್ ಸೃಷ್ಟಿಸಿ ಮಹಿಳೆಯರನ್ನು ಮರುಳು ಮಾಡುತ್ತಿದ್ದ. ‘ವೈಭವ್ ಅರೋರಾ’ ಎಂಬ ನಕಲಿ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಮಹಿಳೆಯೊಬ್ಬರಿಗೆ 7 ಲಕ್ಷ ರೂಪಾಯಿ ವಂಚಿಸಿದ ಪ್ರಕರಣದ ತನಿಖೆ ನಡೆಸಿದ ಪೊಲೀಸರು ತಾಂತ್ರಿಕ ಕಾರ್ಯಾಚರಣೆಯ ಮೂಲಕ ಈತನನ್ನು ಪತ್ತೆಹಚ್ಚಿದ್ದಾರೆ.

ಆರೋಪಿಯು ಕೇವಲ ಹಣವನ್ನಷ್ಟೇ ಕಿತ್ತುಕೊಳ್ಳದೆ, ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಮಹಿಳೆಯರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಬಂಧಿತನಿಂದ 4 ಸ್ಮಾರ್ಟ್‌ಫೋನ್‌ಗಳು, 8 ಸಿಮ್ ಕಾರ್ಡ್‌ಗಳು ಮತ್ತು ವಂಚನೆಯ ಹಣದಿಂದ ಖರೀದಿಸಿದ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles