ದಾವಣಗೆರೆ: ಬಸವಣ್ಣನವರು ನುಡಿದಂತೆ ಕಾಯಕವೇ ಕೈಲಾಸ ಎಂಬ ಬದ್ದತೆಯಿಂದ ನಾವು ಕೆಲಸ ಮಾಡುತ್ತೇವೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ದಾವಣಗೆರೆಯ ಗಡಿಯಾರ ಕಂಬದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ ಅವರ ಪರವಾಗಿ ಪ್ರಚಾರ ನಡೆಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪಾಜಿ ಅವರು ಒಂದಲ್ಲ ಒಂದು ರೀತಿಯಲ್ಲಿ ಕೊಡುಗೆ ಕೊಟ್ಟಿದ್ದಾರೆ. ಅದು ದೇವಸ್ಥಾನ, ಹಾಸ್ಟೆಲ್, ಸಮುದಾಯ ಭವನ ಹೀಗೆ ಅನೇಕ ಕೆಲಸಗಳನ್ನು ದಕ್ಷಿಣದಲ್ಲಿ ಮಾಡಿಸಿದ್ದಾರೆಂದರು.
ಅಪ್ಪಾಜಿ ಅವರಿಗೆ ಕ್ಷೇತ್ರದ ಜನರು 5 ವರ್ಷಕ್ಕೆ ಆಶೀರ್ವಾದ ಮಾಡಿ ಆಯ್ಕೆ ಮಾಡಿದ್ದೀರಿ, ಅವರ ಅಗಲಿಕೆಯಿಂದ ಆ ಜಾಗ ಖಾಲಿಯಾಗಿದೆ. ನೀವೆಲ್ಲರೂ ಸಮರ್ಥ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿದಾಗ ಅಪ್ಪಾಜಿ ಅವರಿಗೆ ಧನ್ಯವಾದ ಸಲ್ಲಿಸಿದಂತಾಗುತ್ತದೆ ಎಂದರು.
ಎಲ್ಲಾ ಸಮುದಾಯ ಬಾಂಧವರನ್ನು ಅಪ್ಪಾಜಿಯವರು ಸಮಾನವಾಗಿ ಕಂಡಿದ್ದಾರೆ. ಅವರ ಹಾದಿಯಲ್ಲೇ ಸಮರ್ಥ್ ಮುಂದೆ ನಡೆಯಲು ನಿಮ್ಮ ಆಶೀರ್ವಾದ ಬಹಳ ಮುಖ್ಯ. ಅಪ್ಪಾಜಿ ಮತ್ತು ಕಾಂಗ್ರೆಸ್ ಭದ್ರಕೋಟೆಯನ್ನು ಉಳಿಸಿಕೊಳ್ಳುವತ್ತ ನೀವೆಲ್ಲರೂ ಏಪ್ರಿಲ್ 9 ರಂದು ಕ್ರಮ ಸಂಖ್ಯೆ 3 ಹಸ್ತದ ಗುರುತಿಗೆ ಮತ ಹಾಕಿ ಎಂದು ಮನವಿ ಮಾಡಿದರು.
ಪ್ರಚಾರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.
- Congress Campaign
- Congress Symbol
- Davanagere Politics
- Davanagere South Byelection
- Dr. Prabha Mallikarjun
- Kayakave Kailasa
- Samarth Shamanur Mallikarjun
- Shamanur Shivashankarappa
- ಕಾಂಗ್ರೆಸ್ ಪ್ರಚಾರ
- ಕಾಯಕವೇ ಕೈಲಾಸ
- ಡಾ. ಪ್ರಭಾ ಮಲ್ಲಿಕಾರ್ಜುನ
- ದಾವಣಗೆರೆ ದಕ್ಷಿಣ ಉಪಚುನಾವಣೆ
- ದಾವಣಗೆರೆ ರಾಜಕೀಯ
- ಶಾಮನೂರು ಶಿವಶಂಕರಪ್ಪ
- ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್
- ಹಸ್ತದ ಗುರುತು





Leave a comment