Home ದಾವಣಗೆರೆ ಬಿಜೆಪಿಯ ‘ಅಚ್ಛೇ ದಿನ್’ ಅಂದ್ರೆ ಬೆಲೆ ಏರಿಕೆಯೇ? ವೋಟ್ ಕೇಳಲು ಬರುವವರಿಗೆ ಪ್ರಶ್ನೆ ಮಾಡಿ: ಡಾ. ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆಬೆಂಗಳೂರುವಾಣಿಜ್ಯ

ಬಿಜೆಪಿಯ ‘ಅಚ್ಛೇ ದಿನ್’ ಅಂದ್ರೆ ಬೆಲೆ ಏರಿಕೆಯೇ? ವೋಟ್ ಕೇಳಲು ಬರುವವರಿಗೆ ಪ್ರಶ್ನೆ ಮಾಡಿ: ಡಾ. ಪ್ರಭಾ ಮಲ್ಲಿಕಾರ್ಜುನ್

Share
ಡಾ. ಪ್ರಭಾ ಮಲ್ಲಿಕಾರ್ಜುನ್
Share

ದಾವಣಗೆರೆ: ಬಿಜೆಪಿಯವರದ್ದು ಬೆಲೆ ಏರಿಕೆಯ ಸರ್ಕಾರ. ಬಿಜೆಪಿ ಅಚ್ಚೇದಿನ್ ಎಂದರೆ ಬೆಲೆ ಏರಿಕೆಯೇ? ವೋಟ್ ಕೇಳಲು ಬರುವ ಬಿಜೆಪಿಗರಿಗೆ ಈ ಪ್ರಶ್ನೆ ಮಾಡಬೇಕಲ್ಲವೇ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಪ್ರಶ್ನಿಸಿದ್ದಾರೆ.

ನಗರದ ಎಪಿಎಂಸಿ ಮಾರುಕಟ್ಟೆ ಬಳಿ ಗ್ಯಾರಂಟಿ ಫಲಾನುಭವಿಗಳ ಜೊತೆ ಸಂವಾದ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪ್ರಭಾ ಮಲ್ಲಿಕಾರ್ಜುನ್ ಬಿಜೆಪಿಗರಿಗೆ ಕೇಳಿದ ಪ್ರಶ್ನೆಗಳಿವು:

ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ಸರ್ಕಾರ ದಿವಾಳಿಯಾಗುತ್ತದೆ ಎಂದು ಬಿಜೆಪಿಯವರು ಸತತವಾಗಿ ಆರೋಪಿಸುತ್ತಿದ್ದಾರೆ. ಆದರೆ ಸರ್ಕಾರಆರ್ಥಿಕವಾಗಿ ಸದೃಢವಾಗಿದೆಯಲ್ಲವೇ?

ಕೇಂದ್ರದ ಬಿಜೆಪಿ ಸರ್ಕಾರ ಹೆದ್ದಾರಿ ಟೋಲ್‌ಗಳ ದರಏರಿಕೆ ಮಾಡಿ ನೇರವಾಗಿ ಹೆದ್ದಾರಿ ದರೋಡೆಗಿಳಿದಿದೆ. 2019-20 ರಲ್ಲಿ 1882 ಕೋಟಿರೂ ಇದ್ದ ಟೋಲ್ ಸಂಗ್ರಹ 2025-26 ರಲ್ಲಿ 4600 ಕೋಟಿ ರೂಗೆ ಏರಿದೆ. ಇದನ್ನು ಬಿಜೆಪಿಗರು ಜನರಿಗೆ ತಿಳಿಸಬೇಕಲ್ಲವೇ?

ಕೇಂದ್ರದ ಮೋದಿ ಸರ್ಕಾರ 2026 ರಏಪ್ರಿಲ್ 01 ರಿಂದ 900 ಅಗತ್ಯ ಔಷಧಿಗಳು, ಆ್ಯಂಟಿ ಬಯೋಟಿಕ್‌ಗಳು, ಬಿಪಿ.ಸಕ್ಕರೆ ಖಾಯಿಲೆ ಔಷಧಿಗಳ ಮೇಲೆ ತೆರಿಗೆ ಹಾಕಿ ಬೆಲೆ ಏರಿಕೆ ಮಾಡಿ ಬಡರೋಗಿ ಜೀವಗಳ ಜೊತೆ ಚೆಲ್ಲಾಟವಾಡುತ್ತಿದೆ. ಈ ಬಗ್ಗೆ ಕೇಳಬೇಕಲ್ಲವೇ?

ಎಲ್ಲಾ ಪ್ಲಾಸ್ಟಿಕ್ ವಸ್ತುಗಳ ಮೇಲೆ ಶೇಕಡಾ 50% ರಷ್ಟುತೆರಿಗೆ ಹೆಚ್ಚಿಸಲಾಗಿದೆ. ಸಿಮೆಂಟ್ ಬೆಲೆ ಪ್ರತೀಚೀಲಕ್ಕೆ 50 ರಿಂದ 100 ರೂ ವರೆಗೆ ಹೆಚ್ಚಳವಾಗಿದೆ. ಮನೆ ಕಟ್ಟಲು ಸ್ಟೀಲ್ ಬಳಕೆದಾರರ ಮೇಲೆ ಬೆಲೆ ಏರಿಕೆಯ ಬರೆ ಎಳೆಯಲಾಗಿದೆ.ಟನ್‌ಗೆ 47,000 ರೂಇದ್ದ ಸ್ಟೀಲ್ ಈಗ 56,000 ರೂಗಳಿಗೆ ಏರಿಕೆಯಾಗಿದೆ. ಈ ಬಗ್ಗೆ ಯಾಕೆ ಬಿಜೆಪಿಗರು ಮಾತನಾಡುತ್ತಿಲ್ಲ?

ಸೋಪುಗಳು, ಫ್ರಿಡ್ಜ್, ಎಸಿಗಳು, ವಾಟರ್ ಕೂಲರ್‌ಗಳ ಬೆಲೆ ಶೇಕಡಾ 5 ರಿಂದ 15% ವರೆಗೆ ಏರಿಕೆಯಾಗಿದೆ. ಕೇವಲ 415 ರೂಪಾಯಿಇದ್ದ ಮನೆಬಳಕೆ ಗ್ಯಾಸ್ ಸಿಲೆಂಡರ್ ಬೆಲೆ 913 ರೂಪಾಯಿಗಳಿಗೆ ಏರಿಕೆಯಾಗಿದೆ. ವಾಣಿಜ್ಯ ಸಿಲೆಂಡರ್ 2000 ರೂ ಗೆ ಏರಿದೆ. ಅಂಚೆ ಇಲಾಖೆಯ ಸ್ಪೀಡ್ ಪೋಸ್ಟ್ದರ್ ಶೇಕಡಾ 34 ರಷ್ಟು ಏರಿಕೆಯಾಗಿದೆ . ಬಿಜೆಪಿಯವರ “ಅಚ್ಛೇದಿನ್” ಎಂದರೆ ಇದೇನಾ?? ಪ್ರತಿಯೊಬ್ಬ ಮತದಾರರುತಮ್ಮ ಬಳಿಗೆ ವೋಟು ಕೇಳಲು ಬರುವ ಬಿಜೆಪಿಯವರಿಗೆ ಈ ಬೆಲೆ ಏರಿಕೆಯ ಪ್ರಶ್ನೆ ಮಾಡಲೇಬೇಕಲ್ಲವೇ ಎಂದು ಪ್ರಭಾ ಮಲ್ಲಿಕಾರ್ಜುನ್ ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಉಪಾಧ್ಯಕ್ಷರುಗಳಾದ ದಿನೇಶ್ ಗೂಳಿಗೌಡ, ಮೆಹರೋಜ್ ಖಾನ್, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಗ್ಯಾರಂಟಿ ಸಮಿತಿಯ ಜಿಲ್ಲಾ, ತಾಲೂಕು ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *