Home ದಾವಣಗೆರೆ EXCLUSIVE: ಮುಸ್ಲಿಂರ ಸಿಟ್ಟು ಶಮನಗೊಳಿಸಿದ್ರಾ ಸಿಎಂ: ಅಲ್ಪಸಂಖ್ಯಾತ ಮುಖಂಡರ ಭೇಟಿ ವೇಳೆ ಗೆಲುವಿನ ನಗೆ ಬೀರಿದ್ರಾ ಸಿದ್ದರಾಮಯ್ಯ?
ದಾವಣಗೆರೆಬೆಂಗಳೂರು

EXCLUSIVE: ಮುಸ್ಲಿಂರ ಸಿಟ್ಟು ಶಮನಗೊಳಿಸಿದ್ರಾ ಸಿಎಂ: ಅಲ್ಪಸಂಖ್ಯಾತ ಮುಖಂಡರ ಭೇಟಿ ವೇಳೆ ಗೆಲುವಿನ ನಗೆ ಬೀರಿದ್ರಾ ಸಿದ್ದರಾಮಯ್ಯ?

Share
ಸಿದ್ದರಾಮಯ್ಯ
Share

ದಾವಣಗೆರೆ: ಕಳೆದ ಎರಡೂ ದಿನಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮೊದಲಿನಿಂದಲೂ ಸಿಎಂ ಸಿದ್ದರಾಮಯ್ಯರನ್ನು ದಾವಣಗೆರೆಯ ಮುಸ್ಲಿಂ ಸಮಾಜ ಬೆಂಬಲಿಸಿಕೊಂಡು ಬಂದಿದೆ. ಮಾತ್ರವಲ್ಲ, ಸಿದ್ದರಾಮಯ್ಯರ ಬಗ್ಗೆ ಅಪಾರ ಪ್ರೀತಿ, ಗೌರವ ಹೊಂದಿದ್ದಾರೆ. ಸಿದ್ದರಾಮಯ್ಯರ ಮಾತು, ಭರವಸೆಯನ್ನು ಮುಸ್ಲಿಂ ಸಮುದಾಯ ಕೇಳುತ್ತದೆ.

ಹೌದು. ಇದಕ್ಕೆ ಕಾರಣ ಇಂದು ಸಿದ್ದರಾಮಯ್ಯರು ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ನಡೆಸಿದ ರೋಡ್ ಶೋ ಮತ್ತು ಬಹಿರಂಗ ಸಭೆ. ಈ ಎರಡೂ ಕಡೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮಾಜದ ಮುಖಂಡರು, ಬಾಂಧವರು ಪಾಲ್ಗೊಂಡಿದ್ದರು. ಸಿದ್ದರಾಮಯ್ಯರ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ ಅವರ ಮಾತು ತದೇಕಚಿತ್ತದಿಂದ ಆಲಿಸಿದರು.

ಸಿದ್ದರಾಮಯ್ಯರು ಬಿಜೆಪಿಯವರ ಕೋಮುವಾದ, ಭ್ರಷ್ಟಾಚಾರ, ಅಲ್ಪಸಂಖ್ಯಾತರ ವಿರೋಧಿ ಧೋರಣೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಮುಸ್ಲಿಂರ ವಿರುದ್ಧ ಬಿಜೆಪಿಗರು ಹೊಂದಿರುವ ಧೋರಣೆ, ತೋರುವ ತಾತ್ಸಾರ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿ ಅರಿವು ಮೂಡಿಸುವ ಪ್ರಯತ್ನ ಮಾಡಿದರು. ಮುಸ್ಲಿಂ ಸಮುದಾಯದ ಮುಖಂಡರನ್ನು ಭೇಟಿ ಮಾಡಿದರು. ಈ ವೇಳೆ ರೋಡ್ ಶೋ, ಬಹಿರಂಗ ಸಭೆ, ಪ್ರಯಾಣದ ಆಯಾಸದ ನಡುವೆಯೂ ಮುಸ್ಲಿಂ ಮುಖಂಡರ ಜೊತೆ ಖುಷಿಖುಷಿಯಾಗಿ ಕಾಣಿಸಿಕೊಂಡಿದ್ದನ್ನು ನೋಡಿ ಮುಸ್ಲಿಂ ಸಮುದಾಯದ ಸಿಟ್ಟು ಶಮನಗೊಳಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ದಾವಣಗೆರೆ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರಾದ ದಾದೂ ಶೇಟ್ ಅವರ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದರು. ಈ ವೇಳೆ ಮುಸ್ಲಿಂ ಸಮುದಾಯದ ಟೋಪಿ ಧರಿಸಿ ಗಮನ ಸೆಳೆದರು. ಕಾಂಗ್ರೆಸ್ ಟಿಕೆಟ್ ಸಿಗದಿದ್ದಕ್ಕೆ
ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಸಂಧಾನದ ಬಳಿಕ ಚುನಾವಣಾ ಕಣದಿಂದ ನಿವೃತ್ತಿಯಾಗಿದ್ದ ಸಾದಿಕ್ ಪೈಲ್ವಾನ್ ಸೇರಿದಂತೆ ಮುಸ್ಲಿಂ ಮುಖಂಡರ ಜೊತೆ ಕಾಣಿಸಿಕೊಂಡರು.

ಸಿದ್ದರಾಮಯ್ಯರು ಮುಸ್ಲಿಂ ಸಮುದಾಯವು ಈ ಬಾರಿ ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ಹಾಕಬಾರದು. ಕೋಮುವಾದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ, ಮುಸ್ಲಿಂ ವಿರೋಧಿಯಾಗಿರುವ ಬಿಜೆಪಿ ಗೆಲುವಿಗೆ ಸಹಕರಿಸುವಂತೆ ಬೆಂಬಲಿಸುತ್ತೇವೆ ಎಂಬ
ಮಾತುಗಳನ್ನು ಮುಸ್ಲಿಂ ಸಮುದಾಯದ ಯುವಕರು ಆಡದಂತೆ ಹಿರಿಯರು ಎಚ್ಚರಿಕೆ ನೀಡಿ. ಅವರಿಗೆ ತಿಳಿ ಹೇಳಿ. ಸಮರ್ಥ್ ಶಾಮನೂರು ಗೆಲುವಿಗೆ ಶ್ರಮಿಸಿ. ಕಾಂಗ್ರೆಸ್ ಗೆದ್ದರೆ ನನಗೆ ಮತ್ತಷ್ಟು ಶಕ್ತಿ ಬರುತ್ತದೆ. ನಿಮ್ಮ ಪರವಾಗಿ ಯಾವಾಗಲೂ ನಾನು
ಇರುತ್ತೇನೆ ಎಂಬ ಮಾತು ಸಿಎಂ ಆಡಿದ್ದಾರೆ ಎಂದು ತಿಳಿದು ಬಂದಿದೆ.

Share

Leave a comment

Leave a Reply

Your email address will not be published. Required fields are marked *