ದಾವಣಗೆರೆ: ವಸತಿ ಸಚಿವ ಜಮೀರ್ ಅಹ್ಮದ್ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ನಡುವೆ ಮುಸುಕಿನ ಗುದ್ದಾಟ ಇದೆ. ಹಾಗಾಗಿ, ಜಮೀರ್ ಅಹ್ಮದ್ ಕೇರಳಕ್ಕೆ ಓಡಿ ಹೋಗಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಡಿಸಿಎಂ ಡಿ. ಕೆ. ಶಿವಕುಮಾರ್ ಅಭ್ಯರ್ಥಿ. ಹಾಗಾಗಿ ಜಮೀರ್ ಅಹ್ಮದ್ ಪ್ರಚಾರಕ್ಕೆ
ಬಂದಿಲ್ಲ ಎಂದು ಹೇಳಿದರು.
ಸಚಿವ ಜಮೀರ್ ಅವರು ಇಲ್ಲಿಂದ ಕಾಲ್ಕಿತ್ತು ಕೇರಳಕ್ಕೆ ಓಡಿಹೋಗಿದ್ದಾರೆ. ಕೇರಳದಲ್ಲಿ ಸ್ಟಾರ್ ಪ್ರಚಾರಕ. ಇಲ್ಲಿಗೆ ನೋ ಸ್ಟಾರ್. ಇಲ್ಲಿ ಗಬ್ಬರ್ ಸಿಂಗ್ ಇದ್ದಂತೆ ಎಂದು ಲೇವಡಿ ಮಾಡಿದರು.
ಮೋದಿ ಅವರು ಮಾಡಿದ ಸಾಲವನ್ನು ಅಭಿವೃದ್ಧಿಗೆ ಬಳಸಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಏನೂ ಮಾಡಲಿಲ್ಲ ಎಂದು ಇದೇ ವೇಳೆ ಆರೋಪಿಸಿದರು.
- BJP Criticism
- Congress Candidate
- Davanagere Byelection
- DAVANAGERE SOUTH
- DK Shivakumar
- Karnataka Politics
- R Ashoka
- Samarth Shamanur
- Siddaramaiah Debt
- SS Mallikarjun
- Zameer Ahmed Khan
- ಆರ್ ಅಶೋಕ್
- ಎಸ್. ಎಸ್. ಮಲ್ಲಿಕಾರ್ಜುನ್
- ಕರ್ನಾಟಕ ರಾಜಕೀಯ
- ಕಾಂಗ್ರೆಸ್ ಅಭ್ಯರ್ಥಿ
- ಜಮೀರ್ ಅಹ್ಮದ್
- ಡಿ. ಕೆ. ಶಿವಕುಮಾರ್
- ದಾವಣಗೆರೆ ಉಪಚುನಾವಣೆ
- ದಾವಣಗೆರೆ ದಕ್ಷಿಣ
- ಬಿಜೆಪಿ ಟೀಕೆ
- ಸಮರ್ಥ್ ಶಾಮನೂರು
- ಸಿದ್ದರಾಮಯ್ಯ ಸಾಲ





Leave a comment