ಬೆಂಗಳೂರು, ವೈಟ್ಫೀಲ್ಡ್ : ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಪಶ್ಚಿಮ ಬಂಗಾಳದ 26 ವರ್ಷದ ಯುವಕನಿಗೆ ವೈಟ್ಫೀಲ್ಡ್ನ ಮೆಡಿಕವರ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ ನೀಡಲಾಗಿದ್ದು, ಇದೀಗ ಅವರು ಹೊಸ ಜೀವನವನ್ನು ಆರಂಭಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಲಾಗಿದೆ.
ರೋಗಿಗೆ ಮಲ ವಿಸರ್ಜನೆ ಮಾಡುವಾಗ ಕರುಳು ಹೊರಬರುವ ಸಮಸ್ಯೆ ಇತ್ತು. ಕಾಲಕ್ರಮೇಣ ಸಮಸ್ಯೆ ತೀವ್ರಗೊಂಡು, ಕಳೆದ ಮೂರು ತಿಂಗಳಿನಿಂದ ಕರುಳು ಸಂಪೂರ್ಣವಾಗಿ ಹೊರಗಡೆಯೇ ಉಳಿದು ಕೊಳೆತು ಹೋಗಿತ್ತು. ಇದರಿಂದ ತೀವ್ರ ನೋವು, ಅಸಹನೆ ಹಾಗೂ ದೈನಂದಿನ ಚಟುವಟಿಕೆಗಳನ್ನು ನಡೆಸುವುದೇ ಕಷ್ಟಕರವಾಗಿತ್ತು. ಜೊತೆಗೆ ಎರಡೂ ಕಾಲುಗಳಲ್ಲಿ ನೋವು ಹಾಗೂ ಕೈಕಾಲುಗಳಲ್ಲಿ ನಿರಂತರ ಜಗ್ಗುವ ಅನುಭವವೂ ಕಾಣಿಸಿಕೊಂಡಿತ್ತು.
ಹಲವೆಡೆ ಚಿಕಿತ್ಸೆ ಪಡೆದರೂ ಯಾವುದೇ ಪ್ರಯೋಜನವಾಗದೆ, ರೋಗಿಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಲೇ ಇತ್ತು. ದೈಹಿಕ ಮಾತ್ರವಲ್ಲದೆ ಮಾನಸಿಕವಾಗಿಯೂ ಇದು ದೊಡ್ಡ ಸವಾಲಾಗಿ ಪರಿಣಮಿಸಿತ್ತು.
ಕೊನೆಗೆ ಅವರು ಪಶ್ಚಿಮ ಬಂಗಾಳದಿಂದ ಬೆಂಗಳೂರಿನ ವೈಟ್ಫೀಲ್ಡ್ನ ಮೆಡಿಕವರ್ ಆಸ್ಪತ್ರೆಗೆ ಭೇಟಿ ನೀಡಿ, ಕನ್ಸಲ್ಟೆಂಟ್ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಕೌಶಿಕ್ ಸುಬ್ರಮಣಿಯನ್ ಅವರನ್ನು ಸಂಪರ್ಕಿಸಿದರು. ಸಂಪೂರ್ಣ ಪರೀಕ್ಷೆಗಳು ಹಾಗೂ ಅಗತ್ಯ ತನಿಖೆಗಳ ನಂತರ, “ಇನ್ಕಾರ್ಸರೆಟೆಡ್ ರೆಕ್ಟಲ್ ಪ್ರೋಲಾಪ್ಸ್” ಹಾಗೂ ಗ್ಯಾಂಗ್ರಿನಸ್ ಮ್ಯುಕೋಸಾ” ಎಂದು ದೃಢಪಟ್ಟಿದ್ದು, ತುರ್ತು ಶಸ್ತ್ರಚಿಕಿತ್ಸೆ ಅಗತ್ಯವೆಂದು ವೈದ್ಯರು ನಿರ್ಧರಿಸಿದರು.
ಶಸ್ತ್ರಚಿಕಿತ್ಸೆಯ ವೇಳೆ ಎರಡೂ ಗ್ಲೂಟಿಯಲ್ ಭಾಗಗಳಲ್ಲಿ ಪ್ರೆಶರ್ ಸೋರ್ಗಳು ಹಾಗೂ ಕರುಳಿನ ಭಾಗ ಕೊಳೆತು ಹೋಗಿರುವುದು ಕಂಡುಬಂದಿತು. ಅಗತ್ಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಯಿತು.
ಶಸ್ತ್ರಚಿಕಿತ್ಸೆಯ ನಂತರ ರೋಗಿ ಉತ್ತಮವಾಗಿ ಚೇತರಿಸಿಕೊಂಡು, ಈಗ ಸಂಪೂರ್ಣವಾಗಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಕಳೆದ ಒಂದೂವರೆ ವರ್ಷಗಳಿಂದ ನರದ ಸಮಸ್ಯೆಯಿಂದ ಬಳಲುತ್ತಿದ್ದು, ಅದರ ಪರಿಣಾಮವಾಗಿ ಮಲ ವಿಸರ್ಜನೆ ಮಾಡುವಾಗ ಕರುಳು ಹೊರಬರುತ್ತಿತ್ತು ಎಂಬುದು ತಿಳಿದುಬಂದಿದೆ. ಕಳೆದ ಮೂರು ತಿಂಗಳಿನಿಂದ ಸಮಸ್ಯೆ ಗಂಭೀರಗೊಂಡಿತ್ತು. ಈ ವೇಳೆ ನ್ಯೂರೋ ಸರ್ಜನ್ ಡಾ. ದೀಪಕ್ ಅರಸಿಕೆರೆ ಅವರು ನರ ಸಂಬಂಧಿತ ಸಮಸ್ಯೆಗೆ ಚಿಕಿತ್ಸೆ ನೀಡಿದ್ದಾರೆ.
ಈ ಕುರಿತು ಡಾ. ಕೌಶಿಕ್ ಸುಬ್ರಮಣಿಯನ್ ಅವರು ಮಾತನಾಡಿ, “ಇಂತಹ ಕಾಯಿಲೆಗಳನ್ನು ನಿರ್ಲಕ್ಷ್ಯ ಮಾಡಿದರೆ ಜೀವಕ್ಕೆ ಅಪಾಯ ಉಂಟಾಗಬಹುದು. ಸಮಯಕ್ಕೆ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ,” ಎಂದು ಹೇಳಿದರು.
- Best Surgical Gastroenterologist Bangalore
- Dr. Deepak Arasikere
- Dr. Kaushik Subramanian
- Gangrenous Mucosa treatment
- Incarcerated Rectal Prolapse
- Medical success story Bangalore
- Medicover Hospital Whitefield
- Nerve related bowel issues
- Rectal Prolapse Surgery Bangalore
- Rectal surgery recovery.
- ಕರುಳು ಹೊರಬರುವ ಸಮಸ್ಯೆ
- ಗ್ಯಾಂಗ್ರಿನಸ್ ಮ್ಯುಕೋಸಾ ಶಸ್ತ್ರಚಿಕಿತ್ಸೆ
- ಡಾ. ಕೌಶಿಕ್ ಸುಬ್ರಮಣಿಯನ್
- ಡಾ. ದೀಪಕ್ ಅರಸಿಕೆರೆ
- ನರ ಸಂಬಂಧಿತ ಸಮಸ್ಯೆ
- ಬೆಂಗಳೂರಿನ ಅತ್ಯುತ್ತಮ ಗ್ಯಾಸ್ಟ್ರೋಎಂಟರಾಲಜಿಸ್ಟ್
- ಮೆಡಿಕವರ್ ಆಸ್ಪತ್ರೆ ವೈಟ್ಫೀಲ್ಡ್
- ರೆಕ್ಟಲ್ ಪ್ರೋಲಾಪ್ಸ್ ಚಿಕಿತ್ಸೆ
- ವೈದ್ಯಕೀಯ ಸಾಧನೆ ಬೆಂಗಳೂರು.





Leave a comment