Home ಕ್ರೈಂ ನ್ಯೂಸ್ ಬಿಲ್ ಪಾಸ್ ಮಾಡಲು ಲಂಚಕ್ಕೆ ಬೇಡಿಕೆ: ದಾವಣಗೆರೆ ಬೆಸ್ಕಾಂ ಅಕೌಂಟ್ ಆಫೀಸರ್ ಲೋಕಾಯುಕ್ತ ಬಲೆಗೆ! 
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಬಿಲ್ ಪಾಸ್ ಮಾಡಲು ಲಂಚಕ್ಕೆ ಬೇಡಿಕೆ: ದಾವಣಗೆರೆ ಬೆಸ್ಕಾಂ ಅಕೌಂಟ್ ಆಫೀಸರ್ ಲೋಕಾಯುಕ್ತ ಬಲೆಗೆ! 

Share
ದಾವಣಗೆರೆ
Share

ದಾವಣಗೆರೆ: ಬಾಕಿ ಇರುವ ವಿದ್ಯುತ್ ಕಾಮಗಾರಿಗಳ ಬಿಲ್ ಆಡಿಟ್ ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಬೆಸ್ಕಾಂ ಕಚೇರಿಯ ಇಂಟರ್ನಲ್ ಆಡಿಟ್ ವಿಭಾಗದ ಅಕೌಂಟ್ಸ್ ಅಧಿಕಾರಿ ಎಂ.ಡಿ. ಮಾಳಪುರ ಅವರು ಶುಕ್ರವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಚನ್ನಗಿರಿ ತಾಲ್ಲೂಕಿನ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರರಾದ ಸಂದೀಪ್ ಎ.ಜಿ. ಅವರು ನೀಡಿದ ದೂರಿನ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ. ದೂರುದಾರರು ವಿವಿಧ ಯೋಜನೆಗಳಡಿ ಅಳವಡಿಸಿದ್ದ ಟಿಸಿಗಳ (ಪರಿವರ್ತಕ) ಬಾಕಿ ಇರುವ ಒಟ್ಟು ಲಕ್ಷಾಂತರ ರೂಪಾಯಿಗಳ ಬಿಲ್ ಮಂಜೂರಾತಿಗಾಗಿ ಬೆಸ್ಕಾಂ ಕಚೇರಿಗೆ ದಾಖಲೆಗಳನ್ನು ಸಲ್ಲಿಸಿದ್ದರು. ಈ ಬಿಲ್‌ಗಳು ಅಕೌಂಟ್ ಸೆಕ್ಷನ್‌ನಲ್ಲಿ ಪಾಸ್ ಆಗಿ ಇಂಟರ್ನಲ್ ಆಡಿಟ್ ವಿಭಾಗಕ್ಕೆ ಬಂದಿದ್ದವು.

ದಿನಾಂಕ 26-03-2026 ರಂದು ಅಧಿಕಾರಿ ಮಾಳಪುರ ಅವರು ಬಿಲ್‌ಗಳ ಆಡಿಟ್ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟು 5,000 ರೂ.ಗಳನ್ನು ಪಡೆದಿದ್ದರು. ನಂತರ ಮತ್ತೊಂದು ಬಿಲ್ ಆಡಿಟ್ ಮಾಡಲು ಹೆಚ್ಚುವರಿ 1,000 ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಲಂಚ ನೀಡಲು ಇಷ್ಟವಿಲ್ಲದ ಸಂದೀಪ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಇಂದು (ಮಾ. 27) ಕಚೇರಿಯಲ್ಲಿ 1,000 ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪೂರೆ ಹಾಗೂ ಡಿವೈಎಸ್ಪಿ ಕಲಾವತಿ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ತಂಡ ಅಧಿಕಾರಿಯನ್ನು ವಶಕ್ಕೆ ಪಡೆದಿದೆ. ದಾಳಿಯಲ್ಲಿ ಲೋಕಾಯುಕ್ತ ನಿರೀಕ್ಷಕರಾದ ಗುರುಬಸವರಾಜ, ಪ್ರಭು ಬ ಸೂರಿನ, ಸರಳ ಪಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Share

Leave a comment

Leave a Reply

Your email address will not be published. Required fields are marked *