Home ನವದೆಹಲಿ ಬಂಡಾಯ ನಾಮಪತ್ರ ವಾಪಸ್ ತೆಗೆಸುತ್ತೇವೆ; ಟಿಕೆಟ್ ಕೇಳುವ ಅಧಿಕಾರ ಎಲ್ಲರಿಗೂ ಇದೆ: ಡಿ. ಕೆ. ಶಿವಕುಮಾರ್
ನವದೆಹಲಿಬೆಂಗಳೂರು

ಬಂಡಾಯ ನಾಮಪತ್ರ ವಾಪಸ್ ತೆಗೆಸುತ್ತೇವೆ; ಟಿಕೆಟ್ ಕೇಳುವ ಅಧಿಕಾರ ಎಲ್ಲರಿಗೂ ಇದೆ: ಡಿ. ಕೆ. ಶಿವಕುಮಾರ್

Share
ಡಿ. ಕೆ. ಶಿವಕುಮಾರ್
Share

ದಾವಣಗೆರೆ:“ರಾಜಕೀಯದಲ್ಲಿ ಎಲ್ಲರಿಗೂ ತಮ್ಮ ಬೇಡಿಕೆ ಕೇಳುವ ಅಧಿಕಾರವಿದೆ. ಅವರು ಕೇಳುವುದರಲ್ಲಿ ತಪ್ಪಿಲ್ಲ. ಪಕ್ಷಕ್ಕೆ ದುಡಿದಿರುತ್ತಾರೆ, ಅವರಿಗೆ ಕೇಳುವ ಹಕ್ಕಿರುತ್ತದೆ. ಇರುವುದು ಒಂದು ಸೀಟು. ನಾವು ಮೊದಲಿನಿಂದಲೂ ಎಲ್ಲರಿಗೂ ಅಧಿಕಾರ ನೀಡುತ್ತಾ ಬಂದಿದ್ದು, ಎಲ್ಲಾ ವಿಚಾರವನ್ನು ಬಗೆಹರಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಗೊಂದಲ ಹಾಗೂ ಬಂಡಾಯವನ್ನು ಯಾವ ರೀತಿ ಬಗೆಹರಿಸುತ್ತೀರಿ ಎಂದು ಕೇಳಿದಾಗ ಈ ಉತ್ತರ ನೀಡಿದರು.

ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಒಬ್ಬರು ಬಂಡಾಯವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅವರು ಶಾಮನೂರು ಶಿವಶಂಕರಪ್ಪ ಅವರ ಆತ್ಮೀಯರು. ಅವರು ಹಾಗೂ ಇತರರ ಜತೆ ನಾವು ಚರ್ಚೆ ಮಾಡುತ್ತಿದ್ದು, ಎಲ್ಲವನ್ನು ಸರಿ ಮಾಡುತ್ತೇವೆ” ಎಂದು ತಿಳಿಸಿದರು.

ಯಾವ ವಿಚಾರದ ಮೇಲೆ ಚುನಾವಣೆ ಮಾಡುತ್ತೀರಿ ಎಂದು ಕೇಳಿದಾಗ, “ನಾವು ಮಾಡುತ್ತಿರುವ ಅಭಿವೃದ್ಧಿ ಕೆಲಸದ ಮೇಲೆ, ಸಾಮಾಜಿಕ ಚಿಂತನೆ, ಎಲ್ಲಾ ಸಮಾಜಕ್ಕೂ ನೀಡುತ್ತಿರುವ ನ್ಯಾಯದ ಮೇಲೆ ಚುನಾವಣೆ ಮಾಡುತ್ತೇವೆ. ಇದೇ ನಮ್ಮ ಪಕ್ಷದ ಮೂಲ ಸಿದ್ಧಾಂತ” ಎಂದು ತಿಳಿಸಿದರು.

Share

Leave a comment

Leave a Reply

Your email address will not be published. Required fields are marked *