ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಂದಿದೆ. ನಾನು ಅಧಿವೇಶನದಲ್ಲಿ ಸೋಮವಾರ ಭಾಗವಹಿಸಬೇಕು. ಪ್ರಶ್ನೆ ಕೇಳುವ ಸರದಿ ನನ್ನದು ಇದೆ. ವಿಧಾನಸಭೆ ಅಧಿವೇಶನದಲ್ಲಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಆಡಳಿತದಲ್ಲಿ ನಡೆದಿರುವ ಹಗರಣಗಳನ್ನು ಸದನದಲ್ಲಿ ಬಿಚ್ಚಿಡ್ತೀನಿ ಎಂದು ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಬಾಂಬ್ ಸಿಡಿಸಿದ್ದಾರೆ.
ನಗರದ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಸ್. ಎಸ್. ಮಲ್ಲಿಕಾರ್ಜುನ್ ಅವರ ದುರಾಡಳಿತ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಹಗರಣಗಳೂ ಇದ್ದು, ಸದನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುತ್ತೇನೆ ಎಂದು ತಿಳಿಸಿದರು.
ನೀವೆಲ್ಲಾ ಆ ವಿಚಾರವಾಗಿ ಪ್ರಚಾರದ ಅಸ್ತ್ರವನ್ನಾಗಿಸಿ ಉಪಯೋಗಿಸಬಹುದು. ವಿಧಾನಸಭಾ ಅಧಿವೇಶನ ಮುಗಿದ ಕ್ಷಣದಿಂದ ಚುನಾವಣಾ ಮುಗಿಯುವ ತನಕ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತೇನೆ ಎಂದು ಬಿ. ಪಿ. ಹರೀಶ್ ಹೇಳಿದ್ದಾರೆ.





Leave a comment