ದಾವಣಗೆರೆ: ಚಿತ್ರದುರ್ಗದ ವಿಶ್ವಮಾನವ ರೆಸಿಡೆನ್ಸಿ ಸ್ಕೂಲ್ ಶಿಬಾರ ಗುತ್ತಿನಾಡು ವಸತಿ ಶಾಲೆಯಲ್ಲಿ ಮನುಷ್ಯತ್ವ ಮರೆತ ವಾರ್ಡನ್ ಒಬ್ಬ 6ನೇ ತರಗತಿಯ ವಿದ್ಯಾರ್ಥಿಯ ಮೇಲೆ ಪೈಪ್ ಹಾಗೂ ಕಬ್ಬಿಣದ ರಾಡ್‌ನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ವಿದ್ಯಾರ್ಥಿ ದಾವಣಗೆರೆ ಜಿಲ್ಲೆಯ ನ್ಯಾಮತಿಯವನು.
ಘಟನೆಯ ವಿವರ:
ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದ 12 ವರ್ಷದ ಬಾಲಕ ಹಲ್ಲೆಗೊಳಗಾತ. ಶಾಲೆಯ ಆವರಣ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸಣ್ಣ ವಿಷಯಕ್ಕೆ ಹಿರಿಯ ವಿದ್ಯಾರ್ಥಿಯೊಂದಿಗೆ ಮಾತಿನ ಚಕಮಕಿ ನಡೆದಿತ್ತು. ಇದನ್ನೇ ನೆಪವಾಗಿಸಿಕೊಂಡ ವಾರ್ಡನ್ ಧನಂಜಯ, ವಿದ್ಯಾರ್ಥಿ ಅರ್ಜುನನನ್ನು ರಾತ್ರಿ ವೇಳೆ ಶೆಡ್‌ವೊಂದಕ್ಕೆ ಕರೆದೊಯ್ದು ಮೈತುಂಬಾ ರಕ್ತ ಬರುವಂತೆ ಕ್ರೂರವಾಗಿ ಥಳಿಸಿದ್ದಾರೆ. ಮಗು ಕೈಮುಗಿದು ಬೇಡಿಕೊಂಡರೂ ಬಿಡದೆ ಬೆನ್ನು, ಕೈ, ಕಾಲು ಹಾಗೂ ಖಾಸಗಿ ಅಂಗಗಳಿಗೂ ಪೆಟ್ಟು ನೀಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಪ್ರಕರಣ ಮುಚ್ಚಿಹಾಕುವ ಯತ್ನ;
ಹಲ್ಲೆಯಿಂದ ಮಗುವಿಗೆ ತೀವ್ರ ಗಾಯಗಳಾಗಿ ಜ್ವರ ಬಂದರೂ ಆಸ್ಪತ್ರೆಗೆ ಕರೆದೊಯ್ಯದೆ, ಪ್ರಕರಣ ಹೊರಬರುತ್ತದೆ ಎಂಬ ಭಯದಿಂದ ಕೇವಲ ಕೊಬ್ಬರಿ ಎಣ್ಣೆ ಹಚ್ಚಿ ಮಲಗಿಸಲಾಗಿತ್ತು. ಶಿಕ್ಷಕ ಸಾಧಿಕ್ ಎಂಬುವವರು ಈ ವಿಷಯವನ್ನು ಯಾರಿಗೂ ತಿಳಿಸದಂತೆ ವಿದ್ಯಾರ್ಥಿಗೆ ಬೆದರಿಕೆ ಹಾಕಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಪೋಷಕರ ಆಕ್ರೋಶ:
ರಜೆ ನಿಮಿತ್ತ ಊರಿಗೆ ಬಂದ ಮಗ ತನ್ನ ತಾಯಿಯ ಬಳಿ ನೋವು ತೋಡಿಕೊಂಡಾಗ ಈ ದೌರ್ಜನ್ಯ ಬೆಳಕಿಗೆ ಬಂದಿದೆ. ಮಗನ ಮೈಮೇಲಿನ ಗಾಯದ ಗುರುತುಗಳನ್ನು ಕಂಡು ಪೋಷಕರು ಕಣ್ಣೀರು ಹಾಕಿದ್ದಾರೆ. ಹಲ್ಲೆ ಮಾಡಿದ ವಾರ್ಡನ್ ಧನಂಜಯ ಹಾಗೂ ಸಹಕರಿಸಿದ ಶಿಕ್ಷಕ ಸಾಧಿಕ್ ಅವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಿ ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯಿಸಿರುವ ಪೋಷಕರು, ನ್ಯಾಮತಿ ಪೊಲೀಸ್ ಠಾಣೆ ಹಾಗೂ ಮಕ್ಕಳ ಸಹಾಯವಾಣಿಗೆ ದೂರು ನೀಡಲು ಮುಂದಾಗಿದ್ದಾರೆ.
- 1098 Childline India
- Child abuse in schools
- Chitradurga News
- Hostel warden assault
- Juvenile Justice Act Karnataka
- Karnataka regional news.
- Nyamathi Taluk news
- Student assault case
- Surahonne village student
- Vishvamanava Residency School Shibara
- ಕರ್ನಾಟಕ ಸುದ್ದಿ
- ಚಿತ್ರದುರ್ಗ ಸುದ್ದಿ
- ನ್ಯಾಮತಿ ತಾಲೂಕು ಸುದ್ದಿ
- ಬಾಲಾಪರಾಧ ನ್ಯಾಯ ಕಾಯ್ದೆ
- ಮಕ್ಕಳ ಸಹಾಯವಾಣಿ 1098
- ವಸತಿ ಶಾಲೆ ವಿದ್ಯಾರ್ಥಿ ಮೇಲೆ ಹಲ್ಲೆ
- ವಾರ್ಡನ್ ಧನಂಜಯ
- ವಿಶ್ವಮಾನವ ರೆಸಿಡೆನ್ಸಿ ಸ್ಕೂಲ್ ಶಿಬಾರ
- ಶಿಕ್ಷಕ ಸಾಧಿಕ್
- ಸುರಹೊನ್ನೆ ಗ್ರಾಮ





Leave a comment