Home ಕ್ರೈಂ ನ್ಯೂಸ್ ಜಗಳೂರು ತಾಲ್ಲೂಕಿನ ಗೋಪಾಲಪುರ-ಸೊಕ್ಕೆ ಸೋಲಾರ್ ವಿದ್ಯುತ್ ಲೈನ್ ಚಾಲನೆ: ಸಾರ್ವಜನಿಕರಿಗೆ ಎಚ್ಚರಿಕೆ
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಜಗಳೂರು ತಾಲ್ಲೂಕಿನ ಗೋಪಾಲಪುರ-ಸೊಕ್ಕೆ ಸೋಲಾರ್ ವಿದ್ಯುತ್ ಲೈನ್ ಚಾಲನೆ: ಸಾರ್ವಜನಿಕರಿಗೆ ಎಚ್ಚರಿಕೆ

Share
ಜಗಳೂರು
Share

ದಾವಣಗೆರೆ: ಜಗಳೂರು ಉಪ ವಿಭಾಗದ ಸೊಕ್ಕೆ ಶಾಖಾ ವ್ಯಾಪ್ತಿಯಲ್ಲಿ ಕುಸುಮ-ಸಿ ಯೋಜನೆಯಡಿಯಲ್ಲಿ ನೂತನವಾಗಿ ಅಳವಡಿಸಲಾದ ಸೋಲಾರ್ ವಿದ್ಯುತ್ ಮಾರ್ಗವು ಚಾಲನೆಗೊಂಡಿದೆ.

ಈ ಯೋಜನೆಯಡಿ ಗೋಪಾಲಪುರ, ಚಿಕ್ಕಬಂಟನಹಳ್ಳಿ ಮತ್ತು ಸೊಕ್ಕೆ ಮಾರ್ಗದಲ್ಲಿ ಒಟ್ಟು 6.5 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಉತ್ಪಾದನಾ ಘಟಕವನ್ನು ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಸ್ಕರಿಸಿ ಚಾಲನೆಗೊಳಿಸಲಾಗಿದೆ.

ಈ ವಿದ್ಯುತ್ ಲೈನ್‌ಗಳು ಈಗ ಕಾರ್ಯನಿರ್ವಹಿಸುತ್ತಿರುವುದರಿಂದ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ವಿದ್ಯುತ್ ಕಂಬಗಳನ್ನು ಮುಟ್ಟಬಾರದು. ವಿದ್ಯುತ್ ಕಂಬಗಳನ್ನು ಹತ್ತುವ ಸಾಹಸಕ್ಕೆ ಕೈಹಾಕಬಾರದು ಎಂದು ಜಗಳೂರು
ಬೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಎಚ್ಚರಿಕೆ:

ಸೋಲಾರ್ ವಿದ್ಯುತ್ ಲೈನ್‌ಗಳು ಈಗ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ (Charged). ಆದ್ದರಿಂದ, ಸಾರ್ವಜನಿಕರ ಜೀವ ರಕ್ಷಣೆಯ ದೃಷ್ಟಿಯಿಂದ ಈ ಕೆಳಗಿನ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಲು ಜಗಳೂರು ಬೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಮನವಿ ಮಾಡಿದ್ದಾರೆ:

  • ವಿದ್ಯುತ್ ಕಂಬಗಳನ್ನು ಅನಗತ್ಯವಾಗಿ ಮುಟ್ಟಬಾರದು.

  • ವಿದ್ಯುತ್ ಕಂಬಗಳನ್ನು ಹತ್ತುವ ಅಪಾಯಕಾರಿ ಸಾಹಸ ಮಾಡಬಾರದು.

  • ಕಂಬಗಳಿಗೆ ಜಾನುವಾರುಗಳನ್ನು ಕಟ್ಟಬಾರದು.

ವಿದ್ಯುತ್ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದಲ್ಲಿ ಜೀವಹಾನಿಯಾಗುವ ಸಂಭವವಿರುವುದರಿಂದ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕೋರಲಾಗಿದೆ

Share

Leave a comment

Leave a Reply

Your email address will not be published. Required fields are marked *