Home ಕ್ರೈಂ ನ್ಯೂಸ್ ದಾವಣಗೆರೆ ಜಿಲ್ಲೆಯಲ್ಲಿ ಮೊದಲ ಬಾರಿಗೆ PIT NDPS ಕಾಯ್ದೆ ಪ್ರಯೋಗ: ಸಂತೆಬೆನ್ನೂರಿನ ಕುಖ್ಯಾತ ಡ್ರಗ್ ಪೆಡ್ಲರ್ ಬಳ್ಳಾರಿ ಜೈಲುಪಾಲು!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ದಾವಣಗೆರೆ ಜಿಲ್ಲೆಯಲ್ಲಿ ಮೊದಲ ಬಾರಿಗೆ PIT NDPS ಕಾಯ್ದೆ ಪ್ರಯೋಗ: ಸಂತೆಬೆನ್ನೂರಿನ ಕುಖ್ಯಾತ ಡ್ರಗ್ ಪೆಡ್ಲರ್ ಬಳ್ಳಾರಿ ಜೈಲುಪಾಲು!

Share
ದಾವಣಗೆರೆ
Share

ದಾವಣಗೆರೆ: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಅಕ್ರಮ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ಪೊಲೀಸ್ ಇಲಾಖೆ ಈಗ ಕಠಿಣ ಕಾನೂನು ಅಸ್ತ್ರವನ್ನು ಪ್ರಯೋಗಿಸಿದೆ.

ಸತತವಾಗಿ ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟದಲ್ಲಿ ತೊಡಗಿದ್ದ ಸಂತೆಬೆನ್ನೂರಿನ ಜಾಕೀರ್ (55) ಎಂಬಾತನ ವಿರುದ್ಧ PIT NDPS ಕಾಯ್ದೆ 1988 ರ ಅಡಿಯಲ್ಲಿ ಕ್ರಮ ಜರುಗಿಸಿ, ಆತನನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಅಟ್ಟಲಾಗಿದೆ.

ಹಿನ್ನೆಲೆ:

ಚನ್ನಗಿರಿ ತಾಲ್ಲೂಕಿನ ಸಂತೆಬೆನ್ನೂರು ನಿವಾಸಿಯಾದ ಈತನ ವಿರುದ್ಧ ಈಗಾಗಲೇ ದಾವಣಗೆರೆಯ ವಿವಿಧ ಠಾಣೆಗಳಲ್ಲಿ 6 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ 4 ಪ್ರಕರಣಗಳಲ್ಲಿ ನ್ಯಾಯಾಲಯವು ಶಿಕ್ಷೆ ವಿಧಿಸಿದ್ದರೂ ಸಹ, ಆರೋಪಿಯು ತನ್ನ ಹಳೇ ಪ್ರವೃತ್ತಿಯನ್ನು ಮುಂದುವರಿಸಿದ್ದನು. ಈ ಹಿನ್ನೆಲೆಯಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡಲು ಆತನನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸುವುದು ಅನಿವಾರ್ಯವಾಗಿತ್ತು.

ಪೂರ್ವ ವಲಯದ ಮೊದಲ ಪ್ರಕರಣ:

ಪೂರ್ವ ವಲಯದ ಐಜಿಪಿ ಶ್ರೀ ಬಿ. ಆರ್. ರವಿಕಾಂತೇಗೌಡ, ಐ.ಪಿ.ಎಸ್. ರವರು ಆರೋಪಿಯ ಪೂರ್ವಾಪರಗಳನ್ನು ಪರಿಶೀಲಿಸಿ, PIT NDPS ಕಾಯ್ದೆ 1988 ಕಲಂ 3(1) ರ ಅಡಿಯಲ್ಲಿ ಬಂಧನಕ್ಕೆ ಆದೇಶಿಸಿದ್ದರು. ಪೂರ್ವ ವಲಯದ ಇತಿಹಾಸದಲ್ಲೇ ಈ ಕಾಯ್ದೆಯಡಿ ದಾಖಲಾದ ಮೊದಲ ಪ್ರಕರಣ ಇದಾಗಿದೆ.

ತಂಡಕ್ಕೆ ಪ್ರಶಂಸೆ:

ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಸಂತೆಬೆನ್ನೂರು ಸಿಪಿಐ ಮಲ್ಲಮ್ಮ ಚೌಬೆ, ಪಿಎಸ್ ಐ ಜಗದೀಶ್ ಮತ್ತು ಸಿಬ್ಬಂದಿ ವರ್ಗದವರನ್ನು ದಾವಣಗೆರೆ ಎಸ್ಪಿ ಶ್ರೀ ಶೇಖರ್ ಹೆಚ್.ಟಿ ರವರು ಅಭಿನಂದಿಸಿದ್ದಾರೆ.

“ಮಾದಕ ವಸ್ತುಗಳ ಮಾರಾಟಗಾರರಿಗೆ ಇದೊಂದು ಎಚ್ಚರಿಕೆಯ ಸಂದೇಶ,” ಎಂದು ಪೊಲೀಸ್ ಇಲಾಖೆ ತಿಳಿಸಿದೆ.

Share

Leave a comment

Leave a Reply

Your email address will not be published. Required fields are marked *

Related Articles