Home ದಾವಣಗೆರೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ಯಾಕೆ ಎಂ. ಪಿ. ರೇಣುಕಾಚಾರ್ಯ?
ದಾವಣಗೆರೆಬೆಂಗಳೂರು

ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ಯಾಕೆ ಎಂ. ಪಿ. ರೇಣುಕಾಚಾರ್ಯ?

Share
ಸಿದ್ದರಾಮಯ್ಯ
Share

ಬೆಂಗಳೂರು: ಹೊನ್ನಾಳಿ ನಗರದಲ್ಲಿ ಶ್ರೀ ಚನ್ನ ಮಲ್ಲಿಕಾರ್ಜುನ ಶಿವಾಚಾರ್ಯ ಹಿರೇಕಲ್ಮಠದ ಸಹಯೋಗದೊಂದಿಗೆ ಹಾಗೂ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ ಭಕ್ತರ ಸಹಕಾರದಿಂದ ಫೆಬ್ರವರಿ 27 ರಿಂದ ಮಾರ್ಚ್ 2ರವರೆಗೆ ಹಮ್ಮಿಕೊಳ್ಳಲಾಗಿರುವ ರಾಜ್ಯ ಮಟ್ಟದ ಕೃಷಿ ಮೇಳಕ್ಕೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಯಿತು.

ಹೊನ್ನಾಳಿ ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ನೇತೃತ್ವದ ನಿಯೋಗವು ಬೆಂಗಳೂರಿಗೆ ತೆರಳಿ ಸಿದ್ದರಾಮಯ್ಯರಿಗೆ ಆಹ್ವಾನ ಕೊಡಲಾಯಿತು. ಈ ವೇಳೆ ಸಿದ್ದರಾಮಯ್ಯ ಮತ್ತು ರೇಣುಕಾಚಾರ್ಯ ನಗುತ್ತಲೇ ಫೋಟೋ ಪೋಸ್ ನೀಡಿದರು. ರೇಣುಕಾಚಾರ್ಯ ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದಾಗಲೆಲ್ಲಾ ಸಿದ್ದರಾಮಯ್ಯರ ವಿರುದ್ಧ ವಾಗ್ದಾಳಿ ನಡೆಸಿದರೂ ಎದುರುಗಡೆ ಸಿಕ್ಕಾಗ ಮಾತ್ರ ನಗುನಗುತ್ತಲೇ ಸಿದ್ದರಾಮಯ್ಯರನ್ನು
ಮಾತನಾಡಿಸಿ ಗಮನ ಸೆಳೆದರು.

ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಇಂದು ಡಾ. ಶ್ರೀ ಚನ್ನಪ್ಪಸ್ವಾಮಿ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿತು. ಪ್ರಸ್ತುತ 2026ರ ಬಜೆಟ್ ಪೂರ್ವಭಾವಿ ಸಭೆಗಳಲ್ಲಿ ಮುಖ್ಯಮಂತ್ರಿಗಳು ಕಾರ್ಯನಿರತರಾಗಿರುವ ಕಾರಣ ಮತ್ತು ಸಮಯದ ಅಭಾವದಿಂದಾಗಿ ಕಾರ್ಯಕ್ರಮಕ್ಕೆ ಖುದ್ದಾಗಿ ಬರಲು ಅಡಚಣೆಯಿದ್ದರೂ, ಕೃಷಿ ಮೇಳದ ಯಶಸ್ಸಿಗೆ ಅವರು ಮನಃಪೂರ್ವಕವಾಗಿ ಶುಭ ಕೋರಿದರು.

ಹಿರೇಕಲ್ಮಠದ ಶ್ರೀ ಚನ್ನ ಮಲ್ಲಿಕಾರ್ಜುನ ಶಿವಾಚಾರ್ಯರು ಮತ್ತು ಭಕ್ತ ಮಂಡಳಿಯ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರೈತರ ಅಭಿವೃದ್ಧಿಗೆ ಪೂರಕವಾದ ಈ ಬೃಹತ್ ಮೇಳವು ಹೊನ್ನಾಳಿ ಭಾಗದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *