ದಾವಣಗೆರೆ: ಜನನ ಮತ್ತು ಮರಣ ನೋಂದಣಿಯನ್ನು ನಿಗದಿತ ಅವಧಿಯೊಳಗೆ ಮಾಡದ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಎಚ್ಚರಿಕೆ ನೀಡಿದ್ದಾರೆ.
ನಾಗರಿಕ ನೋಂದಣಿ ಪದ್ಧತಿಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಕೆಳಗಿನ ಪ್ರಮುಖ ಸೂಚನೆಗಳನ್ನು ನೀಡಿದರು.
ಶಿಸ್ತು ಕ್ರಮ:
ನೋಂದಣಿ ವಿಳಂಬ ಮಾಡುತ್ತಿರುವ ಪಿಡಿಒಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ವಿವರವಾದ ವರದಿ ಸಲ್ಲಿಸಲು ಸೂಚನೆ.
ದಾಖಲೆಗಳ ಮಹತ್ವ:
ಜನನ-ಮರಣ ಪ್ರಮಾಣಪತ್ರಗಳು ಗೃಹಲಕ್ಷ್ಮಿ, ವಿಧವಾ ವೇತನ ಮತ್ತು ಪಡಿತರ ಚೀಟಿ ಪರಿಷ್ಕರಣೆಗೆ ಅತ್ಯಗತ್ಯ. ಮರಣ ಹೊಂದಿದವರ ಮಾಹಿತಿ ಅಪ್‌ಡೇಟ್ ಆಗದಿದ್ದರೆ ಸರ್ಕಾರಿ ಹಣ ದುರುಪಯೋಗವಾಗುವ ಸಾಧ್ಯತೆಯಿದೆ.
ಇ-ಜನ್ಮ ತಂತ್ರಾಂಶ:
ಪ್ರತಿಯೊಂದು ನೋಂದಣಿಯ ನಂತರ ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಹೋಗುವಂತೆ ಕ್ರಮ ವಹಿಸಬೇಕು. ನಿರ್ಜೀವ ಜನನಗಳನ್ನೂ ಕಡ್ಡಾಯವಾಗಿ ದಾಖಲಿಸಬೇಕು.
ಬೆಳೆ ಸಮೀಕ್ಷೆ ಲೋಪ:
ಪಾಂಡವರಗೆರೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಬೆಳೆ ಸಮೀಕ್ಷೆಯಲ್ಲಿ ತಪ್ಪು ಮಾಹಿತಿ (ಜೋಳದ ಬದಲು ಅಡಿಕೆ ಎಂದು ನಮೂದು) ನೀಡಿದ ಗ್ರಾಮಲೆಕ್ಕಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶಿಸಲಾಗಿದೆ.
ಸಭೆಯಲ್ಲಿ ಡಿಹೆಚ್‌ಓ ಡಾ. ಷಣ್ಮುಖಪ್ಪ ಮತ್ತು ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.





Leave a comment