Home ಕ್ರೈಂ ನ್ಯೂಸ್ ಸತ್ಯದ ಕನ್ನಡಿ ಹಿಡಿಯುವುದು ಅಪರಾಧವಲ್ಲ, ದೇಶಪ್ರೇಮ: ಉದಯ ಬಾನು ಬಂಧನದ ಬಳಿಕ ಯುವ ಕಾಂಗ್ರೆಸ್ ಪರ ನಿಂತ ರಾಹುಲ್ ಗಾಂಧಿ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಸತ್ಯದ ಕನ್ನಡಿ ಹಿಡಿಯುವುದು ಅಪರಾಧವಲ್ಲ, ದೇಶಪ್ರೇಮ: ಉದಯ ಬಾನು ಬಂಧನದ ಬಳಿಕ ಯುವ ಕಾಂಗ್ರೆಸ್ ಪರ ನಿಂತ ರಾಹುಲ್ ಗಾಂಧಿ

Share
ರಾಹುಲ್ ಗಾಂಧಿ
Share

ನವದೆಹಲಿ: ಭಾರತ್ ಮಂಟಪದಲ್ಲಿ ನಡೆದ ಭಾರತ AI ಪ್ರಭಾವ ಶೃಂಗಸಭೆ 2026ರ ವೇಳೆ ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಅವರನ್ನು ದೆಹಲಿ ಪೊಲೀಸರು ಬಂಧಿಸಿರುವ ಕ್ರಮದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ ಅವರು ಇದು ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿ ಪೊಲೀಸರ ಈ ಕ್ರಮವನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತೀವ್ರವಾಗಿ ಖಂಡಿಸಿದ್ದು, ಇದು ಕೇಂದ್ರ ಸರ್ಕಾರದ ನಾಚಿಕೆಗೇಡಿತನ ವರ್ತನೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಪ್ರತಿಕ್ರಿಯೆ:

ಈ ಬಂಧನವನ್ನು “ಸರ್ವಾಧಿಕಾರಿ ಧೋರಣೆ ಮತ್ತು ಹೇಡಿತನ” ಎಂದು ಕರೆದಿರುವ ರಾಹುಲ್ ಗಾಂಧಿ, “ಸತ್ಯದ ಕನ್ನಡಿ ಹಿಡಿಯುವುದು ಅಪರಾಧವಲ್ಲ, ಅದು ದೇಶಪ್ರೇಮ” ಎಂದು ತಮ್ಮ ಕಾರ್ಯಕರ್ತರ ಪರವಾಗಿ ಬ್ಯಾಟ್ ಬೀಸಿದ್ದಾರೆ.

ರಾಹುಲ್ ಗಾಂಧಿ ಪ್ರತಿಕ್ರಿಯೆ:

“ಶಾಂತಿಯುತ ಪ್ರತಿಭಟನೆ ನಮ್ಮ ಪ್ರಜಾಸತ್ತಾತ್ಮಕ ಹಕ್ಕು. ಸತ್ಯವನ್ನು ಅಧಿಕಾರಕ್ಕೆ ತೋರಿಸುವುದು ಅಪರಾಧವಲ್ಲ, ಅದು ದೇಶಭಕ್ತಿ,” ಎಂದು ರಾಹುಲ್ ಗಾಂಧಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು “ಬಬ್ಬರ್ ಶೇರ್” (ಧೀರ ಸಿಂಹಗಳು) ಎಂದು ಬಣ್ಣಿಸಿದ್ದಾರೆ.

ಭಾರತ್ ಮಂಟಪದಲ್ಲಿ ನಡೆದ ಭಾರತ AI ಪ್ರಭಾವ ಶೃಂಗಸಭೆ 2026ರ ವೇಳೆ ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.

Share

Leave a comment

Leave a Reply

Your email address will not be published. Required fields are marked *