Home ಕ್ರೈಂ ನ್ಯೂಸ್ ದಾವಣಗೆರೆ: ಬ್ಯಾಂಕ್ ಖಾತೆ ನೀಡಿ ಸೈಬರ್ ವಂಚನೆಗೆ ಸಹಕರಿಸುತ್ತಿದ್ದ ಇಬ್ಬರ ಬಂಧನ; ಇಂಜಿನೀಯರಿಂಗ್ ವಿದ್ಯಾರ್ಥಿಯೂ ಭಾಗಿ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ದಾವಣಗೆರೆ: ಬ್ಯಾಂಕ್ ಖಾತೆ ನೀಡಿ ಸೈಬರ್ ವಂಚನೆಗೆ ಸಹಕರಿಸುತ್ತಿದ್ದ ಇಬ್ಬರ ಬಂಧನ; ಇಂಜಿನೀಯರಿಂಗ್ ವಿದ್ಯಾರ್ಥಿಯೂ ಭಾಗಿ!

Share
ದಾವಣಗೆರೆ
Share

ದಾವಣಗೆರೆ: ಸುಳ್ಳು ಮಾಹಿತಿ ನೀಡಿ ಬ್ಯಾಂಕ್‌ಗಳಲ್ಲಿ ‘ಮ್ಯೂಲ್ ಖಾತೆ’ (Mule Accounts) ತೆರೆದು, ಸೈಬರ್ ಅಪರಾಧಿಗಳಿಗೆ ಹಣ ವರ್ಗಾವಣೆ ಮಾಡಲು ಸಹಕರಿಸುತ್ತಿದ್ದ ಇಬ್ಬರು ಆರೋಪಿತರನ್ನು ದಾವಣಗೆರೆ ಸೈಬರ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಲ್ಲಿ ಒಬ್ಬ 19 ವರ್ಷದ ಇಂಜಿನೀಯರಿಂಗ್ ವಿದ್ಯಾರ್ಥಿ ಸೇರಿರುವುದು ಆತಂಕ ಮೂಡಿಸಿದೆ.

ಬಂಧಿತ ಎ-1 ಆರೋಪಿತ ಪರಶುರಾಮ ವೈ (30) ಎಂಬಾತನ ಹೆಸರಿನಲ್ಲಿ 6 ಬ್ಯಾಂಕ್ ಖಾತೆಗಳಿದ್ದು, ಇವುಗಳ ಮೇಲೆ ದೇಶಾದ್ಯಂತ 95 ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿವೆ.

ಎ-2 ಆರೋಪಿತ ಇಂಜಿನೀಯರಿಂಗ್ ವಿದ್ಯಾರ್ಥಿಯ ಹೆಸರಿನ 2 ಖಾತೆಗಳ ಮೇಲೆ 8 ಪ್ರಕರಣಗಳು ದಾಖಲಾಗಿವೆ. ಆರೋಪಿತರಿಂದ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕರ್ನಾಟಕ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಒಟ್ಟು 37ಕ್ಕೂ ಹೆಚ್ಚು ವಂಚನೆ ಪ್ರಕರಣಗಳಲ್ಲಿ ಈ ಖಾತೆಗಳು ಬಳಕೆಯಾಗಿವೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ  ಪರಮೇಶ್ವರ ಹೆಗಡೆ ಮತ್ತು ಸೈಬರ್ ಡಿವೈಎಸ್ಪಿ ಬಂಕಾಳಿ ನಾಗಪ್ಪ ಅವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಪೊಲೀಸ್ ಅಧೀಕ್ಷಕ ಶೇಖರ್ ಹೆಚ್ ಟಿ. ಅವರು ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *