Home ದಾವಣಗೆರೆ ತುರ್ಚಗಟ್ಟದಲ್ಲಿ ಶ್ರೀ ಲಕ್ಷ್ಮಿ ಯಲ್ಲಮ್ಮ ದೇವಸ್ಥಾನ ಲೋಕಾರ್ಪಣೆ: ಭಕ್ತಿಪರವಶತೆಯ ಪೂರ್ಣಕುಂಭ ಮೆರವಣಿಗೆ
ದಾವಣಗೆರೆಬೆಂಗಳೂರು

ತುರ್ಚಗಟ್ಟದಲ್ಲಿ ಶ್ರೀ ಲಕ್ಷ್ಮಿ ಯಲ್ಲಮ್ಮ ದೇವಸ್ಥಾನ ಲೋಕಾರ್ಪಣೆ: ಭಕ್ತಿಪರವಶತೆಯ ಪೂರ್ಣಕುಂಭ ಮೆರವಣಿಗೆ

Share
ದೇವಸ್ಥಾನ
Share

ದಾವಣಗೆರೆ: ತಾಲೂಕಿನ ತುರ್ಚಗಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಲಕ್ಷ್ಮಿ ಯಲ್ಲಮ್ಮ ದೇವಸ್ಥಾನದ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಶಾರೋಹಣ ಮಹೋತ್ಸವವು ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿತು.

ಪೂರ್ಣಕುಂಭದೊಂದಿಗೆ ಭವ್ಯ ಮೆರವಣಿಗೆ: 

ಧಾರ್ಮಿಕ ವಿಧಿವಿಧಾನಗಳ ಅಂಗವಾಗಿ ಗ್ರಾಮದ ಮಹಿಳೆಯರು ಪೂರ್ಣಕುಂಭದೊಂದಿಗೆ ಭವ್ಯ ಮೆರವಣಿಗೆ ನಡೆಸಿ ಗಮನ ಸೆಳೆದರು. ದೇವಸ್ಥಾನಕ್ಕೆ ವಿವಿಧ ಪುಷ್ಪಗಳ ಅಲಂಕಾರ ಮಾಡಲಾಗಿದ್ದು, ಹೋಮ-ಹವನಗಳ ಮೂಲಕ ಮಂತ್ರಘೋಷಗಳು ಮೊಳಗಿದವು.

ಸಾವಿರಾರು ಭಕ್ತಾದಿಗಳಿಗೆ ಅನ್ನದಾಸೋಹ: 

ಕಳೆದ ಎರಡು ದಿನಗಳಿಂದ ದೇವಸ್ಥಾನಕ್ಕೆ ಭೇಟಿ ನೀಡಿದ ಸಾವಿರಾರು ಭಕ್ತಾದಿಗಳಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ದೇವಿ ಕೃಪೆಗೆ ಪಾತ್ರರಾದ ಭಕ್ತರು: 

ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.

Share

Leave a comment

Leave a Reply

Your email address will not be published. Required fields are marked *