Home ದಾವಣಗೆರೆ ದುಗ್ಗಮ್ಮನ ಜಾತ್ರೆಗೆ ಹಳೇ ಭಾಗದ ವೃತ್ತಗಳಿಗೆ ಬಣ್ಣವಿಲ್ಲ: ಪಾಲಿಕೆ ನಿರ್ಲಕ್ಷ್ಯದ ವಿರುದ್ಧ ದಾವಣಗೆರೆ ಮುಖಂಡರ ಆಕ್ರೋಶ!
ದಾವಣಗೆರೆಬೆಂಗಳೂರು

ದುಗ್ಗಮ್ಮನ ಜಾತ್ರೆಗೆ ಹಳೇ ಭಾಗದ ವೃತ್ತಗಳಿಗೆ ಬಣ್ಣವಿಲ್ಲ: ಪಾಲಿಕೆ ನಿರ್ಲಕ್ಷ್ಯದ ವಿರುದ್ಧ ದಾವಣಗೆರೆ ಮುಖಂಡರ ಆಕ್ರೋಶ!

Share
ದಾವಣಗೆರೆ
Share

ದಾವಣಗೆರೆ: ಇತಿಹಾಸ ಪ್ರಸಿದ್ಧ ಗ್ರಾಮದೇವತೆ ಶ್ರೀ ದುರ್ಗಾಂಬಿಕಾ ದೇವಿಯ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಆದರೆ, ಇಡೀ ನಗರವೇ ಸಂಭ್ರಮದಲ್ಲಿರುವಾಗ ಮಹಾನಗರ ಪಾಲಿಕೆ ಮಾತ್ರ ಹಳೆ ಭಾಗವನ್ನು ನಿರ್ಲಕ್ಷಿಸಿದೆ ಎಂದು ಮಾಜಿ ನಗರಸಭೆ ಅಧ್ಯಕ್ಷ ಬಿ. ವೀರಣ್ಣ ಹಾಗೂ ಬಿಜೆಪಿ ಮುಖಂಡ ಯಶವಂತ್ ರಾವ್ ಜಾಧವ್ ಸೇರಿದಂತೆ ಆ ಭಾಗದ ಮುಖಂಡರು ಪಾಲಿಕೆಯ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ನಗರದ ಹಳೆ ಭಾಗದಲ್ಲಿರುವ ಐತಿಹಾಸಿಕ ವೃತ್ತಗಳು ಮತ್ತು ಮಹನೀಯರ ಪ್ರತಿಮೆಗಳಿಗೆ ಕನಿಷ್ಠ ಬಣ್ಣ ಬಳಿಯುವ ಕೆಲಸವನ್ನೂ ಪಾಲಿಕೆ ಮಾಡಿಲ್ಲ. ಅರುಣ ಚಿತ್ರಮಂದಿರ ವೃತ್ತ, ವೀರ ಮದಕರಿ ನಾಯಕ ವೃತ್ತ, ಶಿವಾಜಿ ಮಹಾರಾಜರ ವೃತ್ತ, ಹಗೆದಿಬ್ಬ ವೃತ್ತ ಹಾಗೂ ಕಾಯಿಪೇಟೆ ಬಸವೇಶ್ವರ ವೃತ್ತಗಳು ಹಬ್ಬದ ಸಂದರ್ಭದಲ್ಲೂ ಕಳೆಗುಂದಿವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಉಭಯದ್ವಯರು ದೂರಿದ್ದಾರೆ.

ಹಬ್ಬಕ್ಕೆ ದಿನಗಣೆ: ಪ್ರತಿಮೆ ಶುಚಿಗೊಳಿಸಿಲ್ಲ

ದುರ್ಗಾಂಬಿಕಾ ದೇವಸ್ಥಾನದ ಆವರಣದ ಸಮೀಪವಿರುವ ವೃತ್ತಗಳು ಮತ್ತು ಪ್ರತಿಮೆಗಳ ಶುಚಿಗೊಳಿಸುವಿಕೆ ಹಾಗೂ ಬಣ್ಣ ಬಳಿಯುವ ಜವಾಬ್ದಾರಿ ಮಹಾನಗರ ಪಾಲಿಕೆಯದೆ ಆಗಿದ್ದರೂ ಹಬ್ಬಕ್ಕೆ‌ ದಿನಗಣನೆ ಆರಂಭವಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ದೇವಸ್ಥಾನದ ಧರ್ಮದರ್ಶಿ ಸಮಿತಿಗಳು ದೇವಸ್ಥಾನದ ಒಳಗೆ ಕಾರ್ಯನಿರ್ವಹಿಸುತ್ತಿವೆ, ಆದರೆ ಸಾರ್ವಜನಿಕ ರಸ್ತೆ ಮತ್ತು ವೃತ್ತಗಳ ಅಲಂಕಾರದ ಹೊಣೆಯನ್ನು ಪಾಲಿಕೆಯೇ ಹೊರಬೇಕು ಎಂದು ಒತ್ತಾಯಿಸಿದ್ದಾರೆ.

ಸಭೆಯನ್ನೂ ಕರೆಯದ ಜಿಲ್ಲಾಡಳಿತ ಪಾಲಿಕೆ:

ಜಾತ್ರೆಯ ಹಿನ್ನೆಲೆಯಲ್ಲಿ ಈ ಭಾಗದ ರಾಜಕೀಯ ಮುಖಂಡರು ಇನ್ನಿತರ ಮುಖಂಡರುಗಳನ್ನು ಸೇರಿಸಿ ಸಭೆ ಮಾಡಬೇಕಾಗಿತ್ತು. ಆದರೆ, ಇದ್ಯಾವುದೇ ಕೆಲಸಗಳು ಮಾಡದೆ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ. 30 ವರ್ಷಗಳಿಂದ ಜಾತ್ರಾ ಸಂದರ್ಭಗಳಲ್ಲಿ ದೇವಸ್ಥಾನಗಳಿಗೆ ವೃತ್ತಗಳಿಗೆ ಸುಣ್ಣಬಣ್ಣ ಅಲಂಕಾರಿಕವಾಗಿ ಮಾಡಲಾಗುತ್ತಿತ್ತು. ಹಾಗೂ ಪೂರ್ವಭಾವಿ ಸಭೆಗಳನ್ನು ಮಾಡಲಾಗುತ್ತಿತ್ತು ಈ ಬಾರಿ ಏಕೆ ನಿರ್ಲಕ್ಷ ವಹಿಸಿದ್ದಾರೆ ಎಂಬುದೇ ಯಕ್ಷಪ್ರಶ್ನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐತಿಹಾಸಿಕ ವೃತ್ತಗಳ ಸಿಂಗಾರವಿಲ್ಲವೇಕೆ? 

ಜಾತ್ರೆಗೆ ಲಕ್ಷಾಂತರ ಜನ ಸೇರುವುದರಿಂದ, ಕೂಡಲೇ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡು ಈ ಐತಿಹಾಸಿಕ ವೃತ್ತಗಳನ್ನು ಸಿಂಗರಿಸಬೇಕಿದೆ. ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸ್ವಚ್ಛತೆ ಕಡೆಗೆ ಹೆಚ್ಚು ಗಮನ ನೀಡಬೇಕಾಗಿದೆ

ಪ್ರತಿ ಜಾತ್ರೆಯಲ್ಲೂ ಸಡಗರದಿಂದ ಸಿಂಗಾರಗೊಳ್ಳುತ್ತಿದ್ದ ಈ ವೃತ್ತಗಳು ಇಂದು ಧೂಳು ಹಿಡಿದು ಬಣ್ಣಗೆಟ್ಟಿರುವುದು ಭಕ್ತರ ಮನಸ್ಸಿಗೆ ಬೇಸರ ತಂದಿದೆ. ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಕೂಡಲೇ ಕ್ರಮ ವಹಿಸಬೇಕೆಂದು ಪ್ರಕಟಣೆಯಲ್ಲಿ ಒತ್ತಾಯ ಮಾಡಿದ್ದಾರೆ.

ಮಾಜಿ ದೂಡ ಅಧ್ಯಕ್ಷರಾದ ಮಾಲತೇಶ್ ರಾವ್ ಜಾಧವ್, ಕರಿಗಾರ ಬಸಪ್ಪ, ಮಹಾನಗರ ಪಾಲಿಕೆ ಮಾಜಿ ಸದಸ್ಯರುಗಳಾದ ರಾಕೇಶ್ ಜಾಧವ್, ಲಕ್ಷ್ಮೀದೇವಿ ವೀರಣ್ಣ, ಮಾಜಿ ಮಹಾಪೌರರಾದ ವಿನಾಯಕ ಪೈಲ್ವಾನ್ಮ, ಎಸ್. ಬಸಪ್ಪ, ಹೆಚ್. ಎನ್. ಚಂದ್ರಪ್ಪ, ಮನೋಹರ್ ಪೈಲ್ವಾನ್ ಸೇರಿದಂತೆ ಹಳೆಯ ಭಾಗದ ಮುಖಂಡರು ಪತ್ರಿಕಾ ಹೇಳಿಕೆಯಲ್ಲಿ ಇವರುಗಳು ಒತ್ತಾಯಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *