ದಾವಣಗೆರೆ: ನಗರದ ಪ್ರತಿಷ್ಠಿತ ನೃತ್ಯ ಸಂಸ್ಥೆಯಾದ ನಮನ ಅಕಾಡೆಮಿ (ರಿ.) ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಸತತ 6ನೇ ವರ್ಷದ “ಶಿವಸ್ಮರಣೆ ನೃತ್ಯ ಜಾಗರಣೆ” ಕಾರ್ಯಕ್ರಮವನ್ನು ಫೆಬ್ರವರಿ 15ರ ಶಿವರಾತ್ರಿ ಹಬ್ಬದಂದು ಹಮ್ಮಿಕೊಳ್ಳಲಾಗಿದೆ.
ಅಂದು ರಾತ್ರಿ 9 ಗಂಟೆಯಿಂದ ಗಂಟೆಯಿಂದ ಬೆಳಗಿನ ಜಾವ 4 ಗಂಟೆಯವರೆಗೆ ನಗರದ ನಾಲ್ಕು ಪ್ರಮುಖ ದೇವಸ್ಥಾನಗಳಲ್ಲಿ ಸರಣಿ ನೃತ್ಯ ಪ್ರದರ್ಶನಗಳು ನಡೆಯಲಿವೆ. ಮೊದಲಿಗೆ ರಿಂಗ್ ರಸ್ತೆಯ ಶ್ರೀ ಶಾರದಾ ಮಂದಿರದಲ್ಲಿ ಚಾಲನೆ ದೊರೆಯಲಿದ್ದು, ನಂತರ ಶ್ರೀ ಲಿಂಗೇಶ್ವರ ದೇವಸ್ಥಾನ, ಕೂಡಲಿ ಶಂಕರ ಮಠ ಹಾಗೂ ವಿದ್ಯಾನಗರದ ಶಿವ ಪಾರ್ವತಿ ದೇವಸ್ಥಾನದಲ್ಲಿ ನೃತ್ಯ ಸೇವೆ ಜರುಗಲಿದೆ.
ಗಣ್ಯ ಅತಿಥಿಗಳು:
ಉಪಸ್ಥಿತಿ: ಡಾ|| ಬಿ.ಟಿ. ಅಚ್ಯುತ್ ಮತ್ತು ಶ್ರೀಮತಿ ನಳಿನಿ ಅಚ್ಯುತ್.
ಉದ್ಘಾಟಕರು: ಶ್ರೀ ಅಜ್ಜಂಪುರ ಶೆಟ್ರು ಮಂಜುನಾಥ್ (ಅಧ್ಯಕ್ಷರು, ಶ್ರೀ ಲಿಂಗೇಶ್ವರ ದೇವಸ್ಥಾನ).
ಮುಖ್ಯ ಅತಿಥಿಗಳು: ಶ್ರೀ ರವಿಚಂದ್ರ (ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ).
ಗೌರವ ಉಪಸ್ಥಿತಿ: ಶ್ರೀ ದಿನೇಶ್ ಕೆ. ಶೆಟ್ಟಿ ಮತ್ತು ಶ್ರೀ ನಾಗಭೂಷಣ್ ಆರ್.ಹೆಚ್. (ನಮನ ಅಕಾಡೆಮಿ).
ನೃತ್ಯ ಸೇವೆ:
ವಿದುಷಿ ಶ್ರೀಮತಿ ಮಾಧವಿ ಡಿ.ಕೆ. ಹಾಗೂ ನಮನ ಅಕಾಡೆಮಿಯ ಪ್ರತಿಭಾವಂತ ಶಿಷ್ಯವೃಂದದಿಂದ ಭರತನಾಟ್ಯ ಸಮರ್ಪಣೆ.
ವಿದುಷಿ ಶ್ರೀಮತಿ ಮಾಧವಿ ಡಿ.ಕೆ. ಅವರ ನೇತೃತ್ವದಲ್ಲಿ ಅಕಾಡೆಮಿಯ ಸುಮಾರು 18ಕ್ಕೂ ಹೆಚ್ಚು ಶಿಷ್ಯಂದಿರು ಶಿವನಿಗೆ ನೃತ್ಯ ನಮನ ಸಲ್ಲಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅಕಾಡೆಮಿಯ ಅಧ್ಯಕ್ಷರು ತಿಳಿಸಿದ್ದಾರೆ.





Leave a comment