Home ದಾವಣಗೆರೆ ಕಾರ್ಮಿಕರ ಪಾಲಿಗೆ ಹೊಸ ಲೇಬರ್ ಕೋಡ್‌ಗಳು ‘ಮರಣ ಶಾಸನ’: ದಾವಣಗೆರೆಯಲ್ಲಿ ಬ್ಯಾಂಕ್ ನೌಕರರ ಬೃಹತ್ ಪ್ರತಿಭಟನೆ
ದಾವಣಗೆರೆಬೆಂಗಳೂರು

ಕಾರ್ಮಿಕರ ಪಾಲಿಗೆ ಹೊಸ ಲೇಬರ್ ಕೋಡ್‌ಗಳು ‘ಮರಣ ಶಾಸನ’: ದಾವಣಗೆರೆಯಲ್ಲಿ ಬ್ಯಾಂಕ್ ನೌಕರರ ಬೃಹತ್ ಪ್ರತಿಭಟನೆ

Share
ಬ್ಯಾಂಕ್
Share

ದಾವಣಗೆರೆ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ಹೊಸ ಲೇಬರ್ ಕೋಡ್‌ಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ನಡೆದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ದಾವಣಗೆರೆಯಲ್ಲಿ ಬ್ಯಾಂಕ್ ನೌಕರರು ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದರು.

ನಗರದ ಜಯದೇವ ವೃತ್ತದಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿದ್ದ ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್‌ನ ಜಂಟಿ ಕಾರ್ಯದರ್ಶಿ ಕೆ. ರಾಘವೇಂದ್ರ ನಾಯರಿ ಅವರು ಮಾತನಾಡಿ, “ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಹೊಸ ಲೇಬರ್ ಕೋಡ್‌ಗಳು ಕಾರ್ಮಿಕರ ಪಾಲಿನ ಮರಣ ಶಾಸನವಾಗಿದೆ. ಇದು ಕಾರ್ಮಿಕರನ್ನು ಆಧುನಿಕ ಗುಲಾಮಗಿರಿಗೆ ತಳ್ಳುವ ಬಂಡವಾಳಶಾಹಿಗಳ ಪರವಾದ ಸಂಚು,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖ ಬೇಡಿಕೆಗಳು:

ಕಾರ್ಮಿಕ ಕಾನೂನುಗಳ ರಕ್ಷಣೆ: 29 ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ರೂಪಿಸಲಾದ 4 ಲೇಬರ್ ಕೋಡ್‌ಗಳನ್ನು ಕೂಡಲೇ ರದ್ದುಗೊಳಿಸಬೇಕು.

ಬ್ಯಾಂಕಿಂಗ್ ವಲಯದ ಬೇಡಿಕೆ: ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳ ಖಾಸಗೀಕರಣ ನಿಲ್ಲಿಸಬೇಕು ಮತ್ತು ವಾರಕ್ಕೆ 5 ದಿನಗಳ ಬ್ಯಾಂಕಿಂಗ್ ಪದ್ಧತಿಯನ್ನು ಜಾರಿಗೊಳಿಸಬೇಕು.

ರೈತ ಪರ ಬೇಡಿಕೆ: ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂಸ್ವಾಧೀನ ಕಾಯ್ದೆ ಹಿಂಪಡೆಯಬೇಕು ಮತ್ತು ನರೇಗಾ (MGNREGA) ಯೋಜನೆಯನ್ನು ಮರುಸ್ಥಾಪಿಸಬೇಕು.

ವೇತನ ಮತ್ತು ಭದ್ರತೆ: ದಿನಗೂಲಿ ನೌಕರರ ಖಾಯಂಗಾತಿ, ಹಳೆಯ ಪಿಂಚಣಿ ಯೋಜನೆ (OPS) ಮರುಜಾರಿ ಮತ್ತು ಕನಿಷ್ಠ ವೇತನ ಹೆಚ್ಚಳಕ್ಕೆ ಆಗ್ರಹಿಸಲಾಯಿತು.

ಈ ಮುಷ್ಕರದಲ್ಲಿ AIBEA, AIBOA, BEFI ಸೇರಿದಂತೆ ವಿವಿಧ ಬ್ಯಾಂಕ್ ಸಂಘಟನೆಗಳು, ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಹತ್ತು ಹಲವು ರೈತ-ಕಾರ್ಮಿಕ ಸಂಘಟನೆಗಳ ನೂರಾರು ಪದಾಧಿಕಾರಿಗಳು
ಪಾಲ್ಗೊಂಡಿದ್ದರು.

ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘ ಮತ್ತು ಗ್ರಾಮೀಣ ಬ್ಯಾಂಕ್ ಅಧಿಕಾರಿಗಳು ‌ನೌಕರರ ಸಂಘದ ನಾಯಕರುಗಳಾದ ಕೆ.ರಾಘವೇಂದ್ರ ನಾಯರಿ, ನಾಗರಾಜ ನಾಶಿ, ಕೆ.ವಿಶ್ವನಾಥ ಬಿಲ್ಲವ, ಹೆಚ್.ಎಸ್.ತಿಪ್ಪೇಸ್ವಾಮಿ, ಶ್ರೀಹರ್ಷ, ಪರಶುರಾಮ, ಆಂಜನೇಯ ಆರ್, ಎಂ.ಎಂ.ಸಿದ್ದಲಿಂಗಯ್ಯ, ಅಣ್ಣಪ್ಪ ನಂದಾ, ಸೈಯದ್ ಚಾಂದಬಾಷಾ, ಹೆಚ್.ಜೆ.ಆಶಾ, ಆರ್‌.ಮಂಜಪ್ಪ, ಕೆ.ರವಿಶಂಕರ್, ಶ್ರೀನಿವಾಸ ನಾಡಿಗ್, ಜ್ಞಾನೇಶ್ವರ ಮಾಳವಾಡೆ, ಎಸ್.ಪ್ರಶಾಂತ್, ಆಕನೂರು ತಿಪ್ಪೇಸ್ವಾಮಿ, ಮಂಜಮ್ಮ, ಅಶ್ವಿನಿ ಟಿ, ಗಂಗು ಬಸವರಾಜ್, ರಾಜೇಶ್, ಸುನಂದಮ್ಮ, ಅನಿಲ್, ಯಲ್ಲಪ್ಪ, ರೇಖಾ, ಪವನ್, ಮೇಕಲ ಕೀರ್ತಿ, ಶ್ರೀನಿವಾಸ ಬಾದಷಹ, ನರೇಶ್, ಸೂರ್ಯನಾರಾಯಣ, ಲಕ್ಷ್ಮಿನಾರಾಯಣ, ಅಬ್ರಾರ್ ಅಹಮದ್, ದುರ್ಗಪ್ಪ‌, ಜೋಸೆಪ್ ಮತ್ತಿತರರು ಮುಷ್ಕರದ ನೇತೃತ್ವವನ್ನು ವಹಿಸಿದ್ದರು.

Share

Leave a comment

Leave a Reply

Your email address will not be published. Required fields are marked *