Home ಕ್ರೈಂ ನ್ಯೂಸ್ ರಸ್ತೆ ಸರಿಯಿಲ್ಲವೆಂದು ಘೇರಾವ್ ಹಾಕ್ತೀರಾ. ದುರಸ್ತಿಪಡಿಸುವಾಗ ಕೇಜ್‌ವ್ಹೀಲ್ ಇಳಿಸ್ತೀರಾ: ರೈತನಿಗೆ ಶಾಸಕ ಕೆ. ಎಸ್. ಬಸವಂತಪ್ಪ ಬುದ್ಧಿವಾದ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ರಸ್ತೆ ಸರಿಯಿಲ್ಲವೆಂದು ಘೇರಾವ್ ಹಾಕ್ತೀರಾ. ದುರಸ್ತಿಪಡಿಸುವಾಗ ಕೇಜ್‌ವ್ಹೀಲ್ ಇಳಿಸ್ತೀರಾ: ರೈತನಿಗೆ ಶಾಸಕ ಕೆ. ಎಸ್. ಬಸವಂತಪ್ಪ ಬುದ್ಧಿವಾದ!

Share
ಕೆ.ಎಸ್. ಬಸವಂತಪ್ಪ
Share

ದಾವಣಗೆರೆ: ಡಾಂಬರು ರಸ್ತೆ ಅಭಿವೃದ್ಧಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅಭಿವೃದ್ಧಿ ಮಾಡಿದ ರಸ್ತೆ ಹಾಳು ಮಾಡಿದರೆ ಹೇಗೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ರೈತನನ್ನು ಪ್ರಶ್ನಿಸಿದರು.

ತಾಲೂಕಿನ ಲೋಕಿಕೆರೆ ರಸ್ತೆಯಲ್ಲಿ ರೈತನೊಬ್ಬ ಭತ್ತದ ಗದ್ದೆಯಲ್ಲಿ ಮಣ್ಣಿನ ರಂಟೆ ಹೊಡೆಯುವ ಕೇಜ್ ವ್ಹೀಲ್ ಹಾಕಿದ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಮತ್ತು ಮಳೆಗೋಜ್ (ಮುಳ್ಳು ಗೋಜ್)ನ್ನು ರಸ್ತೆ ತಾಗಿಸಿಕೊಂಡು ಹೋಗುತ್ತಿದ್ದ. ಇದೇ ರಸ್ತೆಯಲ್ಲಿ ಪ್ರಯಾಣ ಬೆಳೆಸಿದ್ದ ಶಾಸಕರು, ರಸ್ತೆ ಹಾಳಾಗುವುದನ್ನು ಕಂಡು ಕೂಡಲೇ ರೈತನನ್ನು ತಡೆದರು.

ಈ ರೀತಿ ಕೇಜ್‌ವ್ಹೀಲ್ ಹಾಕಿದ ಟ್ರ್ಯಾಲಿಯಲಿ ಮತ್ತು ಮಳೆಗೋಜ್ ಹಾಕಿಕೊಂಡು ರಸ್ತೆಯಲ್ಲಿ ಓಡಾಡಿದರೆ ರಸ್ತೆ ಹಾಳಾಗುವುದಿಲ್ಲೇ. ರಸ್ತೆ ಅಭಿವೃದ್ಧಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈಗಲೇ ರಸ್ತೆ ಹಾಳು ಮಾಡುತ್ತಿದ್ದೀರಿ. ರಸ್ತೆ ದುರಸ್ತಿಗೊಳಿಸುವಂತೆ ಶಾಸಕರಿಗೆ ಘೇರಾವು ಹಾಕ್ತಿರಿ. ರಸ್ತೆ ಅಭಿವೃದ್ಧಿಗೊಳಿಸಿದರೆ ಹಾಳು ಮಾಡ್ತೀರಿ. ರಸ್ತೆ ಹಾಳಾದರೆ ಸಾರ್ವಜನಿಕರಿಗೆ ತೊಂದರೆ ಆಗುವುದಿಲ್ಲವೇ ಎಂದು ರೈತನನ್ನು ಪ್ರಶ್ನಿಸಿದರು.

ಇತ್ತೀಚಿಗಷ್ಟೇ 5 ಕೋಟಿ ರೂ. ವೆಚ್ಚದಲ್ಲಿ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಲೋಕಿಕೆರೆ-ದಾವಣಗೆರೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಜಮೀನಿನಲ್ಲಿ ಉಪಯೋಗಿಸುವ ಕಬ್ಬಿಣದ ಉಪಕರಣಗಳನ್ನು ಹಾಕಿಕೊಂಡು ರಸ್ತೆಗೆ ತಾಗಿಸಿ ಓಡಾಡಿದರೆ ರಸ್ತೆ ಹೆಚ್ಚು ವರ್ಷ ಬಾಳಿಕೆ ಬರುವುದಿಲ್ಲ. ಎಂದು ಟ್ರ್ಯಾಕ್ಟರ್ ಚಾಲಕನನ್ನು ತರಾಟೆಗೆ ತೆಗೆದುಕೊಂಡರು.

ಹಿಂದಿನ ಶಾಸಕರು ರಸ್ತೆ ಅಭಿವೃದ್ಧಿ ಮಾಡದ ಕಾರಣ ವಾಹನ ಸವಾರರು ಈ ರಸ್ತೆಯಲ್ಲಿ ಓಡಾಡಲು ಪರಿತಪಿಸುತ್ತಿದ್ದರು. ನಾನು ಲೋಕೋಪಯೋಗಿ ಇಲಾಖೆ ಸಚಿವರ ಮೇಲೆ ಒತ್ತಡ ಹಾಕಿ 5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗಿದೆ. ರಸ್ತೆಯನ್ನು ನಾವು ಸರಿಯಾಗಿ ಉಪಯೋಗಿಸಿಕೊಳ್ಳದೇ ಈ ರೀತಿ ಹಾಳು ಮಾಡಿದರೆ ನಾವೇ ಏನೇ ಅಭಿವೃದ್ಧಿ ಮಾಡಿದರೂ ಉಪಯೋಗಕ್ಕೆ ಬರುವುದಿಲ್ಲ ಎಂದು ರೈತನಿಗೆ ಬುದ್ಧಿವಾದ ಹೇಳಿದರು.

ರಸ್ತೆ ಕತ್ತರಿಸಿದರೆ ಕ್ರಮ:

ರಸ್ತೆಯ ಅಕ್ಕಪಕ್ಕದಲ್ಲಿರುವ ರೈತರು ಜಮೀನುಗಳಿಗೆ ಬೋರ್‌ವೆಲ್‌ನಿಂದ ಪೈಪ್‌ಲೈನ್ ಸಂಪರ್ಕ ಪಡೆಯಲು ರಸ್ತೆ ಕತ್ತರಿಸುವ ಪ್ರಕರಣಗಳು ಕ್ಷೇತ್ರದಲ್ಲಿ ನಡೆಯುತ್ತಿವೆ. ಪೂರ್ವಾನುಮತಿ ಪಡೆಯದೆ ರಸ್ತೆ ಕತ್ತರಿಸಿದರೆ, ರಸ್ತೆ ಹಾಳು ಮಾಡಿದರೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.

ಒಂದು ವೇಳೆ ರಸ್ತೆ ಕತ್ತರಿಸುವ ಸಂದರ್ಭ ಬಂದರೆ ರೈತರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆದು, ಅದಕ್ಕೆ ತಗಲುವ ವೆಚ್ಚ ಭರಿಸಿ ಯಥಾಸ್ಥಿತಿ ರಸ್ತೆ ನಿರ್ಮಿಸಲು ಆದೇಶ ಹೊರಡಿಸಿದರೆ ಇಂತಹ ಪ್ರಕರಣ ಕಡಿಮೆ ಆಗುತ್ತವೆ. ಈ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದರು.

ಸುಸಜ್ಜಿತ ರಸ್ತೆಯನ್ನು ಹಾಳು ಮಾಡಿದರೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ರಸ್ತೆ ಅಭಿವೃದ್ಧಿ ಮಾಡಿ ಎಂದು ಹೋರಾಟ ಮಾಡುವವರೇ ರಸ್ತೆ ಹಾಳು ಮಾಡಿದರೆ ಹೇಗೆ?. ಸಾರ್ವಜನಿಕರ ಆಸ್ತಿಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ.

-ಕೆ.ಎಸ್.ಬಸವಂತಪ್ಪ, ಶಾಸಕ.

Share

Leave a comment

Leave a Reply

Your email address will not be published. Required fields are marked *

Related Articles