Home ಕ್ರೈಂ ನ್ಯೂಸ್ ಆಟೋಚಾಲಕನಾಗಿ ಬಂದವರು “ಕಾನ್ಫಿಡೆಂಟ್” ಸಾಮ್ರಾಜ್ಯದ ಒಡೆಯರಾದ್ರು: ಸಿ. ಜೆ. ರಾಯ್ ಸಾವಿನ ರಹಸ್ಯ ಆ ಕೊಠಡಿಯೊಳಗೆ ಅಡಗಿದೆಯಾ?
ಕ್ರೈಂ ನ್ಯೂಸ್ನವದೆಹಲಿಬೆಂಗಳೂರುವಾಣಿಜ್ಯ

ಆಟೋಚಾಲಕನಾಗಿ ಬಂದವರು “ಕಾನ್ಫಿಡೆಂಟ್” ಸಾಮ್ರಾಜ್ಯದ ಒಡೆಯರಾದ್ರು: ಸಿ. ಜೆ. ರಾಯ್ ಸಾವಿನ ರಹಸ್ಯ ಆ ಕೊಠಡಿಯೊಳಗೆ ಅಡಗಿದೆಯಾ?

Share
ಕಾನ್ಫಿಡೆಂಟ್
Share

ಬೆಂಗಳೂರು: ಬೆಂಗಳೂರಿನಲ್ಲಿ ಎದೆಗೆ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ ಕಾನ್ಫಿಡೆಂಟ್  ಸಿ. ಜೆ. ರಾಯ್ ಆತ್ಮಹತ್ಯೆ ಪ್ರಕರಣವು ಕ್ಷಣ ಕಳೆದಂತೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಇನ್ನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ. ಆದರೆ ಸಾವಿಗೆ ಮಾತ್ರ ಕಾರಣಗಳ ಚರ್ಚೆಗಳು ಶುರುವಾಗಿವೆ.

ಸುಮಾರು 11 ಸಿನಿಮಾಗಳ ನಿರ್ಮಾಪಕರು

ಸುಮಾರು 11 ಸಿನಿಮಾಗಳ ನಿರ್ಮಾಪಕರು, ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ, ಮಾಲೀಕರು, ಸಾವಿರಾರು ಕೋಟಿಗಳ ಒಡೆಯ ಸಿಜೆ ರಾಯ್ ಅವರು ತಮ್ಮ ಎದೆಗೆ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಎಲ್ಲರಿಗೂ ಶಾಕ್ ತಂದಿದೆ. ಪದೇಪದೇ ಐಟಿ ಧಾಳಿ, ಕೃಷ್ಣಪ್ರಸಾದ್ ಎಂಬ ಐಟಿ ಅಧಿಕಾರಿ ಕೊಡುತ್ತಿದ್ದ ಮಾನಸಿಕ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಬ್ಯುಸಿನೆಸ್ ಮನ್ ಆಗುವುದು, ಸ್ಟಾರ್ ಆಗುವುದು, ಕೊಟ್ಯಾಧಿಪತಿಯಾಗುವುದು, ಯಾವುದೋ ಒಂದು ರೂಪದಲ್ಲಿ ದೊಡ್ಡ ಅಚೀವರ್ ಆಗುವುದು ಯಾಕೆ? ನೆಮ್ಮದಿಯಾಗಿ ಬದುಕಲಿಕ್ಕಲ್ಲವೇ? ಎಂಬ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ.

ದೊಡ್ಡ ಸಾಧಕರಿಗೇ ನೆಮ್ಮದಿ ಇಲ್ಲವೆಂದ ಮೇಲೆ, ಜನಸಾಮಾನ್ಯರ ಪಾಡೇನು? ನಮ್ಮ ಸಾಧನೆ, ಗಳಿಸುವ ಖ್ಯಾತಿ, ಫೈನಲಿ ಎನ್ ಕ್ಯಾಶ್ ಮಾಡಿಕೊಳ್ಳಲು. ಹಣ ಗಳಿಸಲು. ಹಣ ಇದ್ದರೆ ನೆಮ್ಮದಿ ಸಿಗುತ್ತದೆ, ಎಂದು ಹಣದ ಹಿಂದೆ ಜನಸಾಮಾನ್ಯನ ಓಟ.ಹಣವೊಂದಿದ್ದರೆ ಸಾಕೆ?! ಎಂಬ ಚರ್ಚೆಗಳು ಶುರುವಾಗಿವೆ.

ಸಿ.ಜೆ. ರಾಯ್ ಅಂತಿಮ ಕ್ಷಣಗಳು

ಬೆಂಗಳೂರಿನ ರಿಯಲ್ ಎಸ್ಟೇಟ್ ಭೂಪಟದಲ್ಲಿ ‘ಕಾನ್ಫಿಡೆಂಟ್ ಗ್ರೂಪ್’ ಎಂಬ ಬೃಹತ್ ಸಾಮ್ರಾಜ್ಯ ಕಟ್ಟಿದ ಸಿ.ಜೆ. ರಾಯ್ ಅವರ ಅಂತಿಮ ಕ್ಷಣಗಳು ನಿಜಕ್ಕೂ ಹತ್ತು ಹಲವು ಅನುಮಾನಗಳನ್ನು ಉಳಿಸಿ ಹೋಗಿದೆ.

ಶೂನ್ಯದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಉದ್ಯಮ ಕಟ್ಟಿದ ಒಬ್ಬ ಯಶಸ್ವಿ ಉದ್ಯಮಿ, ಸಾಮಾನ್ಯವೆನ್ನಬಹುದಾದ ಆದಾಯ ತೆರಿಗೆ ದಾಳಿಯ ಸಂದರ್ಭದಲ್ಲಿ ಇಂತಹ ತೀವ್ರ ನಿರ್ಧಾರಕ್ಕೆ ಬಂದಿದ್ದು ಇಡೀ ಉದ್ಯಮ ವಲಯವನ್ನು ದಿಗ್ಭ್ರಮೆಗೊಳಿಸಿದೆ. ಇದು ಕೇವಲ ತೆರಿಗೆ ಸಂಬಂಧಿತ ತನಿಖೆಯ ಆತಂಕವೇ ಅಥವಾ ಈ ಸಾವಿನ ಹಿಂದೆ ಬಿಚ್ಚಿಡಲಾಗದ ಯಾವುದೋ ನಿಗೂಢ ರಹಸ್ಯವಿದೆಯೇ? ಈ ಪ್ರಶ್ನೆ ಉಳಿದಿದೆ.

ಸಿ.ಜೆ. ರಾಯ್ ಅವರ ಸಾವು ಕೇವಲ ಒಂದು ಆಕಸ್ಮಿಕ ಘಟನೆಯಲ್ಲ; ಅದು ತನಿಖೆಯ ಹಾದಿಯಲ್ಲಿ ಎದುರಾದ ಒಂದು ಬಿಕ್ಕಟ್ಟಿನ ಫಲಶ್ರುತಿ. ಮೂಲಗಳ ಪ್ರಕಾರ, ಐಟಿ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಅವರ ಮನೆ ಮತ್ತು ಕಚೇರಿಯನ್ನು ಜಾಲಾಡುತ್ತಿದ್ದಾಗ, ಒಂದು ನಿರ್ದಿಷ್ಟ ಕೊಠಡಿಯನ್ನು ತೆರೆಯಲು ರಾಯ್ ಸತತವಾಗಿ ನಿರಾಕರಿಸುತ್ತಲೇ ಬಂದಿದ್ದರು. ಈ ಒಂದು ಕೊಠಡಿಯೇ ಈಗ ತನಿಖೆಯ ಮತ್ತು ಅನುಮಾನಗಳ ಕೇಂದ್ರಬಿಂದುವಾಗಿದೆ.

ಕೊಠಡಿಯ ಬಾಗಿಲು ತೆರೆಯಲು ಸಿದ್ಧರಿರಲಿಲ್ಲ

“ಐಟಿ ಅಧಿಕಾರಿಗಳ ತೀವ್ರ ಒತ್ತಡದ ನಡುವೆಯೂ ರಾಯ್ ಆ ಒಂದು ಕೊಠಡಿಯ ಬಾಗಿಲು ತೆರೆಯಲು ಸಿದ್ಧರಿರಲಿಲ್ಲ. ಆ ಕೊಠಡಿಯೊಳಗೆ ರಾಜ್ಯದ ಅತ್ಯಂತ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳಿದ್ದವು ಎಂಬ ದಟ್ಟವಾದ ಶಂಕೆ ವ್ಯಕ್ತವಾಗಿದೆ. ಈ ಮಾಹಿತಿಯನ್ನು ಹೊರಹಾಕಲು ಮನಸ್ಸಿಲ್ಲದೆ, ಅತ್ತ ಅಧಿಕಾರಿಗಳ ಒತ್ತಡವನ್ನು ತಡೆಯಲಾರದೆ ಅವರು ಅಂತಿಮವಾಗಿ ಸಾವಿನ ಹಾದಿ ಹಿಡಿದರು ಎಂಬ ಮಾತುಗಳು ಕೇಳಿಬರುತ್ತಿವೆ.”

ಈ ಇಡೀ ದಾಳಿಯ ಹಿಂದೆ ಇದ್ದದ್ದು ಕೇರಳ ವಿಭಾಗದ ಆದಾಯ ತೆರಿಗೆ ಅಧಿಕಾರಿಗಳು ಎನ್ನುವುದು ಗಮನಾರ್ಹ. ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಖಚಿತಪಡಿಸಿರುವಂತೆ, ರಾಯ್ ಅವರ ವ್ಯವಹಾರದ ವ್ಯಾಪ್ತಿ ಮತ್ತು ರಾಜಕೀಯ ಸಂಪರ್ಕಗಳ ಹಿನ್ನೆಲೆಯಲ್ಲಿ ಕೇರಳದ ಐಟಿ ಅಧಿಕಾರಿಗಳು ಕಳೆದ 72 ಗಂಟೆಗಳಿಂದ ನಿರಂತರವಾಗಿ ಪರಿಶೀಲನೆ ನಡೆಸುತ್ತಿದ್ದರು. ಒಬ್ಬ ಉದ್ಯಮಿಯ ಮೇಲೆ ಮೂರು ದಿನಗಳ ಕಾಲ ಸತತವಾಗಿ ನಡೆಯುವ ಇಂತಹ ಹೈ-ವೋಲ್ಟೇಜ್ ತನಿಖೆಯು ಅವರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಿರಬಹುದು. ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ತನ್ನ ಗೌರವ ಮತ್ತು ಸಾಮ್ರಾಜ್ಯ ಕಣ್ಮುಂದೆಯೇ ಕುಸಿಯುತ್ತಿರುವುದನ್ನು ಕಂಡು ಅವರು ಮಾನಸಿಕವಾಗಿ ಜರ್ಜರಿತರಾಗಿದ್ದರು ಎಂದು ಹೇಳಲಾಗುತ್ತಿದೆ.

ಆಟೋ ರಿಕ್ಷಾ ಚಾಲಕನಿಂದ ಬಿಲಿಯನೇರ್ ಉದ್ಯಮಿಯವರೆಗೆ:

ಸಿ.ಜೆ. ರಾಯ್ ಅವರ ಜೀವನ ಕಥೆ ಸ್ಫೂರ್ತಿದಾಯಕವಾದರೂ ಅದರ ಅಂತ್ಯ ಮಾತ್ರ ಅತ್ಯಂತ ಕರಾಳವಾಗಿದೆ. ಕೇರಳ ಮೂಲದ ಇವರು ಬೆಂಗಳೂರಿಗೆ ಬಂದು ಆಟೋ ರಿಕ್ಷಾ ಚಾಲಕರಾಗಿ ಜೀವನ ಆರಂಭಿಸಿ, ನಂತರ ‘ಕಾನ್ಫಿಡೆಂಟ್ ಗ್ರೂಪ್’ ಎಂಬ
ಬ್ರ್ಯಾಂಡ್ ಕಟ್ಟಿದ್ದು ಸಾಮಾನ್ಯ ಸಾಧನೆಯಲ್ಲ. ಸುಮಾರು 15 ವರ್ಷಗಳ ಹಿಂದೆಯೇ ಸರ್ಜಾಪುರದಂತಹ ಅಂದಿನ ಪಾಳು ಪ್ರದೇಶದ ಭವಿಷ್ಯವನ್ನು ಗುರುತಿಸಿ ಅಲ್ಲಿ ಹೂಡಿಕೆ ಮಾಡಿದ್ದ ಅವರ ದೂರದೃಷ್ಟಿ ಅಚ್ಚರಿ ಮೂಡಿಸುವಂತದ್ದು. ಕೇವಲ ಹಣ
ಗಳಿಕೆಯಷ್ಟೇ ಅಲ್ಲದೆ, ಸಾಮಾಜಿಕವಾಗಿ ಅವರು ಉನ್ನತ ಸಂಬಂಧಗಳನ್ನು ಹೊಂದಿದ್ದರು. ನಟ ಪುನೀತ್ ರಾಜ್‌ಕುಮಾರ್ ಅವರ ಮಗಳಿಗಾಗಿ ಲಾಭದ ಅಪೇಕ್ಷೆಯಿಲ್ಲದೆ ಭೂಮಿ ನೀಡಿದ್ದ ಅವರ ಉದಾರ ಗುಣವನ್ನು ಉದ್ಯಮ ವಲಯ ಇಂದಿಗೂ
ನೆನಪಿಸಿಕೊಳ್ಳುತ್ತದೆ.

‘ಕಾನ್ಫಿಡೆಂಟ್’

‘ಕಾನ್ಫಿಡೆಂಟ್’ (ಹೆಸರಿನಲ್ಲಿ ನೂರಾರು ಜನರಿಗೆ ಆಸರೆ ನೀಡಿದ ವ್ಯಕ್ತಿ, ತನ್ನ ಅಂತಿಮ ಕ್ಷಣಗಳಲ್ಲಿ ಇಷ್ಟೊಂದು ಒಂಟಿಯಾಗಿ ಸೋತುಹೋಗಿದ್ದು ವಿಧಿಯ ಕ್ರೂರ ವ್ಯಂಗ್ಯ.

‘ದಾಖಲೆ ತರುತ್ತೇನೆ’ ಎಂದವರು ಮರಳಿ ಬರಲೇ ಇಲ್ಲ.. ಘಟನೆಯ ದಿನದಂದು ಲ್ಯಾಂಗ್‌ಫರ್ಡ್ ಟೌನ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ರಾಯ್ ಅವರು ಸುಮಾರು ಒಂದು ಗಂಟೆ ಕಾಲ ಐಟಿ ಅಧಿಕಾರಿಗಳ ವಿಚಾರಣೆ ಎದುರಿಸಿದ್ದರು. ಆ ಸಮಯದಲ್ಲಿ ತನಿಖೆಗೆ ಸಹಕರಿಸುವಂತೆ ನಟಿಸುತ್ತಲೇ, “ಇನ್ನೂ ಕೆಲವು ದಾಖಲೆಗಳನ್ನು ತರುತ್ತೇನೆ” ಎಂದು ಹೇಳಿ ಪಕ್ಕದ ಕೊಠಡಿಗೆ ತೆರಳಿದರು. ಆದರೆ ಅಲ್ಲಿ ಅವರು ಮಾಡಿದ್ದು ದಾಖಲೆಗಳ ಸಂಗ್ರಹವನ್ನಲ್ಲ,

ಬದಲಿಗೆ ತಮ್ಮದೇ ಪಿಸ್ತೂಲ್‌ನಿಂದ ಎದೆಗೆ ಗುಂಡು ಹಾರಿಸಿಕೊಂಡರು. ಕಚೇರಿ ಸಿಬ್ಬಂದಿ ತಕ್ಷಣ ಅವರನ್ನು ಎಚ್‌ಎಸ್‌ಆರ್ ಲೇಔಟ್‌ನ ನಾರಾಯಣ ಆಸ್ಪತ್ರೆಗೆ ಕೊಂಡೊಯ್ದರಾದರೂ, ಅವರು ಅದಾಗಲೇ ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿ ಕಾನೂನು
ಪ್ರಕ್ರಿಯೆಗಳ ನಂತರ, ಮರಣೋತ್ತರ ಪರೀಕ್ಷೆಗಾಗಿ ಅವರ ಪಾರ್ಥಿವ ಶರೀರವನ್ನು ಬೋರಿಂಗ್ ಆಸ್ಪತ್ರೆಗೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗಿದೆ. ಈ ದುರಂತ ಸಂಭವಿಸಿದಾಗ ಅವರ ಕುಟುಂಬ ವಿದೇಶದಲ್ಲಿದ್ದು, ಅವರು ಬೆಂಗಳೂರಿಗೆ ಹಿಂದಿರುಗುವ ಮುನ್ನವೇ ಈ ಅನಾಹುತ ನಡೆದುಹೋಗಿದೆ.

Share

Leave a comment

Leave a Reply

Your email address will not be published. Required fields are marked *