ದಾವಣಗೆರೆ: ಪ್ರೀತಿಸಿದ ಪ್ರಿಯಕರನ ಜೊತೆ ಪರಾರಿಯಾಗಿದ್ದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದ ಪತಿ ಹರೀಶ್ ಹಾಗೂ ಸೋದರ ಮಾವನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನವವಿವಾಹಿತೆಯನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಸರಸ್ವತಿ ಬಂಧಿತ ಆರೋಪಿ. ದಾವಣಗೆರೆ ತಾಲೂಕಿನ ಸಂಬಂಧಿಕರ ಮನೆಯಲ್ಲಿ ಇದ್ದ ಸರಸ್ವತಿಯನ್ನು ಅಲ್ಲಿಂದಲೇ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ. ಸರಸ್ವತಿಯನ್ನು ಬಂಧಿಸಿ ಗ್ರಾಮಾಂತರ ಠಾಣೆಗೆ ಕರೆ ತಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯ ಡಿವೈಎಸ್ಪಿ ಬಸವರಾಜ್ ನೇತೃತ್ವದಲ್ಲಿ ಸರಸ್ವತಿಯನ್ನು ವಿಚಾರಣೆ ನಡೆಸಲಾಗುತ್ತಿದೆ.
ಪ್ರಿಯಕರ ನಾಪತ್ತೆ:
ಇನ್ನು ಶಿವಕುಮಾರ್ ಅಲಿಯಾಸ್ ಕುಮಾರ್ ಎಂಬಾತನ ಜೊತೆ ಸರಸ್ವತಿ ಓಡಿ ಹೋಗಿದ್ದಳು. ಆತನ ಮೇಲೆ ಮೃತ ಹರೀಶ್ ಸಂಬಂಧಿಕರು ಮತ್ತು ಕುಟುಂಬಸ್ಥರು ಆರೋಪ ಮಾಡಿದ್ದರು. ಮದುವೆಗೆ ಮುಂಚೆ ಪ್ರೀತಿ ಮಾಡುತ್ತಿದ್ದ ಸರಸ್ವತಿಯನ್ನು
ಕುಮಾರ್ ಕಾರಿನಲ್ಲಿ ಬಂದು ಕರೆದುಕೊಂಡು ಹೋಗಿದ್ದ. ಮದುವೆಯಾದ ದಿನದಿಂದಲೂ ಹರೀಶ್ ಗೆ ಸರಸ್ವತಿ ಕಿರುಕುಳ ನೀಡುತ್ತಿದ್ದಳು. ಸಂಸಾರ ಸರಿಯಾಗಿ ನಡೆಸಿರಲಿಲ್ಲ. ಪ್ರಿಯಕರನ ಜೊತೆಗೆ ಸಲುಗೆ ಮುಂದುವರಿಸಿ, ಗಂಡನಿಗೆ ಹಿಂಸೆ ಕೊಟ್ಟಿದ್ದಳು. ಮಾತ್ರವಲ್ಲ, ಕುಮಾರ್ ಎಂಬಾತನು ಸರಸ್ವತಿ ಬಿಡದಿದ್ದರೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದ ಎಂದು ಗ್ರಾಮಾಂತರ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಆರೋಪಿಸಲಾಗಿತ್ತು.
ಸೋದರ ಮಾವ, ಚಿಕ್ಕಮ್ಮನೂ ಎಸ್ಕೇಪ್:
ಕುಮಾರ್ ಜೊತೆಗೆ ಪ್ರಿಯಕರ ಶಿವಕುಮಾರ್, ಸೋದರ ಮಾವ ಗಣೇಶ್ ಮತ್ತು ಸರಸ್ವತಿ ಚಿಕ್ಕಮ್ಮ ನಾಪತ್ತೆಯಾಗಿದ್ದಾರೆ. ಈ ಮೂವರ ವಿರುದ್ಧವೂ ಹರೀಶ್ ಕುಟುಂಬಸ್ಥರು ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಆರೋಪ ಮಾಡಿದ್ದರು. ಹರೀಶ್ ತನ್ನ ಡೆತ್ ನೋಟ್ ನಲ್ಲಿ ಈ ಮೂವರ ವಿರುದ್ಧವೂ ಆರೋಪ ಮಾಡಿದ್ದರು. ಇವರು ನೀಡಿದ ಕಿರುಕುಳ, ಮಾನಸಿಕ ಹಿಂಸೆ, ಜೀವ ಬೆದರಿಕೆ ಹಾಕಿದ್ದರಿಂದ ನೊಂದು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಡೆತ್ ನೋಟ್ ನಲ್ಲಿ ಹರೀಶ್ ಬರೆದಿದ್ದರು.
ಎಲ್ಲಿ ಹೋದ ಶಿವಕುಮಾರ್?
ಶಿವಕುಮಾರ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಆದರೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. ಕೇಸ್ ದಾಖಲಾಗುತ್ತಿದ್ದಂತೆ ದಾವಣಗೆರೆಯಿಂದ ಕಾಲ್ಕಿತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಾಪತ್ತೆಯಾಗಿರುವ ಶಿವಕುಮಾರ್ ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. ಶಿವಕುಮಾರ್ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಅಟ್ರಾಸಿಟಿ ಕೇಸ್ ಸಹ ದಾಖಲಿಸಲಾಗಿದೆ. ಹರೀಶ್ ತಂದೆ ಮಹಾರುದ್ರಪ್ಪ ಅವರ ಕಡೆಯಿಂದ
ಒಂದು ಅಟ್ರಾಸಿಟಿ ಕೇಸ್ ಆಗಿದ್ದು, ಮೃತ ರುದ್ರೇಶ್ ಪತ್ನಿ ಪೂರ್ಣಿಮಾ ಅವರಿಂದಲೂ ಒಂದು ಅಟ್ರಾಸಿಟಿ ದೂರು ದಾಖಲಾಗಿದೆ.
ಜೈಲಿಗೆ ಸರಸ್ವತಿ:
ಇನ್ನು ಸರಸ್ವತಿ ಬಂಧಿಸಿರುವ ಪೊಲೀಸರು ಪ್ರಾಥಮಿಕ ವಿಚಾರಣೆ ನಂತರ ಮೆಡಿಕಲ್ ಚೆಕ್ ಅಪ್ ಗೆ ಕರೆದುಕೊಂಡು ಹೋಗಿದ್ದಾರೆ. ಮೆಡಿಕಲ್ ಟೆಸ್ಟ್ ನಂತರ ಶಿವಮೊಗ್ಗ ಅಥವಾ ಚಿತ್ರದುರ್ಗ ಮಹಿಳಾ ಸೆಲ್ ಗೆ ಕರೆದೊಯ್ಯುವ ಸಾಧ್ಯತೆ ಇದೆ.
ಠಾಣೆ ಮುಂದೆ ಜಮಾಯಿಸಿದ ಸಂಬಂಧಿಕರು:
ಹರೀಶ್ ಸಾವಿಗೂ ಮುನ್ನ ಬರೆದಿರುವ ಡೆತ್ ನೋಟ್ ನಲ್ಲಿ ಆರೋಪ ಮಾಡಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲೇಬೇಕು. ಸಾವಿಗೆ ಕಾರಣವಾದವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಡೆತ್ ನೋಟ್ ನಲ್ಲಿಯೂ ಹರೀಶ್ ಇದನ್ನೇ ಬರೆದಿದ್ದಾನೆ. ಶಿಕ್ಷೆಯಾಗಲೇಬೇಕು ಎಂದು ಹರೀಶ್ ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರು ಒತ್ತಾಯಿಸಿದ್ದಾರೆ.
ಏನಿದು ಪ್ರಕರಣ:
ಪತ್ನಿ ಅಕ್ರಮ ಸಂಬಂಧಕ್ಕೆ ಬೇಸತ್ತು ಮದುವೆಯಾದ ಎರಡೂವರೆ ತಿಂಗಳಿಗೆ ನವವಿವಾಹಿತ ಗ್ರಾಮದ ಜಮೀನಿಗೆ ಹೋಗುವ ರಸ್ತೆಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ತಾಲೂಕಿನ ಗುಮ್ಮನೂರು ಗ್ರಾಮದಲ್ಲಿ ನಡೆದಿತ್ತು. ಈತನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನವವಿವಾಹಿತೆಯ ಸೋದರ ಮಾವ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು.
ಗುಮ್ಮನೂರು ಗ್ರಾಮದ ಹರೀಶ್ (32) ಮೃತಪಟ್ಟ ದುರ್ದೈವಿ. ನವವಿವಾಹಿತೆಯ ಸೋದರ ಮಾವ ರುದ್ರೇಶ್ ಸಾವಿನ ಸುದ್ದಿ ಕುಟುಂಬಸ್ಥರು ಸಂಬಂಧಿಕರಲ್ಲಿ ಆಘಾತ, ನೋವು ತಂದಿತ್ತು.
ಘಟನೆ ಹಿನ್ನೆಲೆ:
ಕಳೆದ ಎರಡೂವರೆ ತಿಂಗಳ ಹಿಂದೆಯಷ್ಟೇ ರುದ್ರೇಶ್ ಅವರೇ ಮುಂದೆ ನಿಂತು ಹರೀಶ್ ಮತ್ತು ಸರಸ್ವತಿ ಎಂಬಾಕೆಯ ಜೊತೆ ವಿವಾಹ ಮಾಡಿಸಿದ್ದರು. ಆದರೆ ಸರಸ್ವತಿ ಮಾತ್ರ ಮತ್ತೊಬ್ಬನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಮದುವೆಯಾಗಿದ್ದರೂ ಮುಂದುವರಿದಿತ್ತು. ಈ ಬಗ್ಗೆ ಸಣ್ಣದಾದ ಅನುಮಾನವೂ ಹರೀಶ್ ಗೆ ಬಂದಿರಲಿಲ್ಲ. ಆದರೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಸರಸ್ವತಿಯು ಕುಮಾರ್ ಎಂಬಾತನ ಜೊತೆ ಓಡಿ ಹೋಗಿದ್ದಳು ಎನ್ನಲಾಗಿದೆ.
ಇದರಿಂದ ಬೇಸತ್ತ ಹರೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಡೆತ್ ನೋಟ್ ಸಹ ಬರೆದಿಟ್ಟಿದ್ದಾರೆ. ಹರೀಶ್ ಸಾವಿನ ತಿಳಿಯುತ್ತಲೇ ಸರಸ್ವತಿಯ ಸೋದರ ಮಾವ ರುದ್ರೇಶ್ ಸಹ ವಿಷ ಸೇವಿಸಿದ್ದಾರೆ. ತಾಲೂಕಿನ ಆನೆಕೊಂಡದ ನಿವಾಸಿಯಾಗಿದ್ದ ರುದ್ರೇಶ್ ತುಂಬಾ ಸ್ನೇಹಜೀವಿಯಾಗಿದ್ದರು. ಈ ವಿಚಾರ ಕೇಳಿ ಬರಸಿಡಿಲು ಬಡಿದಂತಾಗಿತ್ತು. ತಾನೇ ಮುಂದೆ ನಿಂತು ಮಾಡಿಸಿದ್ದ ಮದುವೆ ಈ ರೀತಿ ಆಯ್ತಲ್ಲಾ, ಹರೀಶ್ ಸಾವಿಗೆ ನಾನೇ ಕಾರಣನಾದೆ ಎಂದು ನೊಂದು ರುದ್ರೇಶ್ ಸಹ ಸಾವಿಗೆ ಶರಣಾಗಿದ್ದಾರೆ. ಈ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
- Davanagere crime news
- Davanagere rural police
- Davanagere suicide case
- Death Note
- extra marital affair tragedy
- Gummanuru death case
- Harish suicide case
- illicit affair suicide
- love affair tragedy.
- newlywed woman arrested
- Rudresh suicide
- Saraswathi arrest
- ಅಕ್ರಮ ಸಂಬಂಧ ಸಾವು
- ಕೌಟುಂಬಿಕ ಕಲಹ
- ಗುಮ್ಮನೂರು ಆತ್ಮಹತ್ಯೆ ಪ್ರಕರಣ
- ಡೆತ್ ನೋಟ್
- ದಾವಣಗೆರೆ ಆತ್ಮಹತ್ಯೆ ಪ್ರಕರಣ
- ದಾವಣಗೆರೆ ಕ್ರೈಮ್ ನ್ಯೂಸ್
- ದಾವಣಗೆರೆ ಗ್ರಾಮಾಂತರ ಪೊಲೀಸ್
- ನವವಿವಾಹಿತೆ ಬಂಧನ
- ಪ್ರಿಯಕರನ ಜೊತೆ ಪರಾರಿ
- ರುದ್ರೇಶ್ ಆತ್ಮಹತ್ಯೆ
- ಸರಸ್ವತಿ ಬಂಧನ
- ಹರೀಶ್ ಆತ್ಮಹತ್ಯೆ ಕೇಸ್






Leave a comment