ದಾವಣಗೆರೆ: ಪೂಜಾ ಸಾಮಗ್ರಿ ಪೂರೈಕೆ ಮಾಡಿದ್ದ ಬಾಕಿ ಹಣ ಕೇಳಿದ್ದಕ್ಕೆ ತ್ರಿಶೂಲದಿಂದ ಚುಚ್ಚಿ ಹತ್ಯೆಗೆ ಯತ್ನಿಸಿದ ಘಟನೆ ನಗರದ ಕೆ. ಆರ್. ಮಾರುಕಟ್ಟೆಯಲ್ಲಿ ನಡೆದಿದೆ.
READ ALSO THIS STORY: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟಿಕೆಟ್ ಕೇಳಲು ಎಲ್ಲರಿಗೂ ಹಕ್ಕಿದೆ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ: ಶಿವಗಂಗಾ ಬಸವರಾಜ್
ಗಾಯಗೊಂಡ ವ್ಯಕ್ತಿಯನ್ನು ಗಣೇಶ್ ಎಂದು ಗುರುತಿಸಲಾಗಿದೆ. ತ್ರಿಶೂಲದಿಂದ ಚುಚ್ಚಿದ ಆರೋಪಿ ಫೈಜಾನ್ ಎಂದು ತಿಳಿದು ಬಂದಿದೆ.
ಫೈಜಾನ್ ಅಂಗಡಿಗೆ ರಾತ್ರಿ ವೇಳೆ ಬಂದಿದ್ದ ಗಣೇಶ್ ಪೂಜಾ ಸಾಮಗ್ರಿ ಪೂರೈಸಿದ್ದ ಬಾಕಿ ಹಣ ಇದೆ. ಈಗಲೇ ನೀಡಿ ಎಂದು ಕೇಳಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಫೈಜಾನ್ ಅಲ್ಲಿಯೇ ಇದ್ದ ತ್ರಿಶೂಲ ತೆಗೆದುಕೊಂಡು ಗಣೇಶ್ ಗೆ ಚುಚ್ಚಿದ್ದಾನೆ. ಗಾಯಗೊಂಡ ಗಣೇಶ್ ಅವರನ್ನು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಬಸವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.





Leave a comment