Home ದಾವಣಗೆರೆ ಬುದ್ಧ, ಬಸವಣ್ಣ ತತ್ವಗಳು, ಅಂಬೇಡ್ಕರ್ ರ ಹೋರಾಟದ ರಕ್ತ ನನ್ನಲ್ಲಿದೆ, ಆರ್‌ಎಸ್‌ಎಸ್‌ನವರ ಬಳಿ ಕಲಿಯಲು ಏನಿದೆ?: ಪ್ರಿಯಾಂಕ್ ಖರ್ಗೆ ಸಿಡಿಮಿಡಿ
ದಾವಣಗೆರೆನವದೆಹಲಿಬೆಂಗಳೂರು

ಬುದ್ಧ, ಬಸವಣ್ಣ ತತ್ವಗಳು, ಅಂಬೇಡ್ಕರ್ ರ ಹೋರಾಟದ ರಕ್ತ ನನ್ನಲ್ಲಿದೆ, ಆರ್‌ಎಸ್‌ಎಸ್‌ನವರ ಬಳಿ ಕಲಿಯಲು ಏನಿದೆ?: ಪ್ರಿಯಾಂಕ್ ಖರ್ಗೆ ಸಿಡಿಮಿಡಿ

Share
Share

ಬೆಂಗಳೂರು: ಹೆದರಿಸುವುದು, ಬೆದರಿಸುವುದು, ಕೋರ್ಟ್‌ಗೆ ಹೋಗುವುದು ಆರ್‌ಎಸ್‌ಎಸ್‌ ತಂತ್ರ. ಆರ್‌ಎಸ್‌ಎಸ್‌ ಒಂದು ನೋಂದಣಿಯಾಗದ, ನಿಯಮಗಳಿಗೆ ಒಳಪಡದ ಮತ್ತು ಅಸಾಂವಿಧಾನಿಕ ಸಂಘಟನೆ. ಅವರಿಗೇಕೆ ನಾನು ಹೆದರಬೇಕು? ಬುದ್ಧ, ಬಸವಣ್ಣನವರ ತತ್ವಗಳು, ಅಂಬೇಡ್ಕರ್ ಅವರ ಹೋರಾಟದ ರಕ್ತ ನನ್ನಲ್ಲಿದೆ. ಆರ್‌ಎಸ್‌ಎಸ್‌ನವರ ಬಳಿ ಕಲಿಯಲು ಏನಿದೆ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಸಂಘಟನೆಯನ್ನು ನೋಂದಾಯಿಸಿಕೊಳ್ಳಲು ಆರ್‌ಎಸ್‌ಎಸ್‌ ಹಿಂಜರಿಯುತ್ತಿರುವುದು ಏಕೆ? ಅವರಿಗೆ ಇಷ್ಟೊಂದು ದೇಣಿಗೆ ಎಲ್ಲಿಂದ ಬರುತ್ತಿದೆ? ಗೃಹ ಸಚಿವರು, ವಿದೇಶಾಂಗ ಸಚಿವರಿಗೆ ಸಿಗುವಂತಹ ಎಎಸ್‌ಎಲ್‌ ಭದ್ರತೆ ಮೋಹನ್ ಭಾಗವತ್ ಅವರಿಗೆ ಏಕೆ? ಇವರು ಯಾರೂ ತೆರಿಗೆ ಕಟ್ಟುವವರಲ್ಲ. ಆದರೆ ತೆರಿಗೆ ಪಾವತಿದಾರರ ಹಣವನ್ನು ಇವರ ಭದ್ರತೆಗೆ ಏಕೆ ದುಂದು ವೆಚ್ಚ ಮಾಡಲಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ.

ನಾವು ಇಂತಹ ಪ್ರಶ್ನೆಗಳನ್ನು ಕೇಳುತ್ತಿರುವುದಕ್ಕಾಗಿ ನಮ್ಮ ವಿರುದ್ಧ ಮಾನಹಾನಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಇಡೀ ದೇಶದ ತುಂಬಾ ಅವರು ಕೇಸ್‌ಗಳನ್ನು ದಾಖಲಿಸಿದರೂ ನಮ್ಮ ದನಿಯನ್ನು ಅಡಗಿಸಲು ಸಾಧ್ಯವಿಲ್ಲ. ನಾವು ಸತ್ಯದ ಪರವಾಗಿ ಇರುವವರು. ಆರ್‌ಎಸ್‌ಎಸ್‌ನ ಸತ್ಯ ಇಂದಲ್ಲ, ನಾಳೆ ಹೊರಬರಲೇಬೇಕು. 100 ವರ್ಷದಿಂದ ಸಂಘಟನೆ ಇದೆ ಎಂದ ಮಾತ್ರಕ್ಕೆ ಇನ್ನೂ 100 ವರ್ಷ ನಡೆಸಲು ಮಾನ್ಯತೆ ಇದೆ ಎಂದಲ್ಲ. ಯಾವುದೇ ಸಂಘಟನೆಯಾದರೂ ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.

Share

Leave a comment

Leave a Reply

Your email address will not be published. Required fields are marked *