SUDDIKSHANA KANNADA NEWS/DAVANAGERE/DATE:19_12_2025
ದಾವಣಗೆರೆ: ದಾವಣಗೆರೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 2025 ನೇ ಸಾಲಿನಲ್ಲಿ ಸ್ವತು ಕಳವು ಪ್ರಕರಣಗನ್ನು ಪತ್ತೆ ಮಾಡಿ ವಶಪಡಿಸಿಕೊಂಡಿದ್ದ ಅಂದಾಜು 20.38 ಕೋಟಿ ರೂ ಮೌಲ್ಯದ ಮಾಲುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.
READ ALSO THIS STORY: ಅಡಿಕೆ ಬೆಳೆಗಾರರಿಗೆ ಶಾಕ್: ಕೇವಲ ಒಂದೇ ತಿಂಗಳಿಗೆ ಕ್ವಿಂಟಲ್ ಗೆ 10 ಸಾವಿರ ರೂ. ಧಾರಣೆ ಕುಸಿತ!
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 2025ರ ನವೆಂಬರ್ 30ರವರೆಗೆ ವರದಿಯಾಗಿದ್ದ ಸ್ವತ್ತು ಕಳವು ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ತಂಡ ಕಾರ್ಯಚರಣೆ ನಡೆಸಿ ಪ್ರಕರಣಗಳನ್ನು ಬೇಧಿಸಿ ಆರೋಪಿತರುಗಳನ್ನು ಪತ್ತೆ ಮಾಡಿತ್ತು. ಬಂಧಿತ ಆರೋಪಿತರಿಂದ ಸ್ವತ್ತು ಕಳವು ಪ್ರರಕಣಗಳಲ್ಲಿ ಕಳುವಾಗಿದ್ದ ವಸ್ತುಗಳನ್ನು ಪತ್ತೆ ಮಾಡಿ ವಶಪಡಿಸಿಕೊಂಡಿತ್ತು.
ಈ ಸ್ವತ್ತು ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತನ್ನು ನ್ಯಾಯಾಲಯದ ಅನುಮತಿ ಮೇರೆಗೆ ಸದರಿ ಸ್ವತ್ತನ್ನು ವಾರಸುದಾರರು ಮತ್ತು ಮಾಲಿಕರಿಗೆ ಹಿಂದಿರುಗಿಸುವ ಸಂಬಂಧ ಇಂದು ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದ ಆವರಣದಲ್ಲಿ ಪೂರ್ವ ಪೊಲೀಸ್ ಮಹಾನಿರೀಕ್ಷಕ ಡಾ. ಬಿ. ಆರ್. ರವಿಕಾಂತೇಗೌಡ ಅವರ ನೇತೃತ್ವದಲ್ಲಿ ಪ್ರಾಪರ್ಟಿ ರಿಟರ್ನ್ ಪೆರೇಡ್ ನಡೆಸಲಾಯಿತು.
ಈ ಪ್ರಾಪರ್ಟಿ ಪರೇಡ್ನಲ್ಲಿ 2025 ಸಾಲಿನಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ಕಾರ್ಯಚರಣೆ ನಡೆಸಿ ಒಟ್ಟು 173 ಪ್ರಕರಣಗಳನ್ನು ಪತ್ತೆ ಮಾಡಿದ್ದು, ಈ ಪ್ರಕರಣಗಳಲ್ಲಿನ ಅಂದಾಜು 19,64,52,459/- ರೂಪಾಯಿ ಮೌಲ್ಯದ ಸುಮಾರು 24 ಕೆಜಿ 726 ಗ್ರಾಂ ತೂಕದ ಬಂಗಾರ ಆಭರಣ ಮತ್ತು 24,35,362 ರೂ ಮೌಲ್ಯದ 26 ಕೆಜಿ 672 ಗ್ರಾಂ ತೂಕದ ಬೆಳ್ಳಿಯ ಆಭರಣಗಳು, 85,68,938 ನಗದು ಹಣ, 46,28,517 ರೂ ಮೌಲ್ಯದ 90 ವಿವಿಧ ಮಾದರಿ ವಾಹನಗಳು, 73,80,000 ರೂ ಮೌಲ್ಯದ 492 ವಿವಿಧ ಮಾದರಿಯ ಮೊಬೈಲ್ ಗಳು ಹಾಗೂ 16,81,000 ರೂಪಾಯಿ ಮೌಲ್ಯದ ಕೃಷಿ ಉಪಕರಣಗಳು, ಇತರೆ ವಸ್ತುಗಳು ಒಟ್ಟು 20,38,32,459 ರೂ ಮೌಲ್ಯದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗಿಸ್, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ಬಿ. ಎಸ್., ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್ಪಿ ಶರಣಬಸವೇಶ್ವರ ಬಿ., ಡಿಎಆರ್ ಡಿವೈಎಸ್ಪಿ ಪಿ. ಬಿ. ಪ್ರಕಾಶ್ ಹಾಗೂ ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ಅಪರಾಧ ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.





Leave a comment