Home ದಾವಣಗೆರೆ ರಾಜಕೀಯ ನಿಶ್ಯಕ್ತಿ ನನ್ನಲ್ಲಿ ಹಿಂದೆಯೂ ಇರಲಿಲ್ಲ, ಮುಂದೆಯೂ ಇರಲ್ಲ: ವಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ!
ದಾವಣಗೆರೆನವದೆಹಲಿಬೆಂಗಳೂರು

ರಾಜಕೀಯ ನಿಶ್ಯಕ್ತಿ ನನ್ನಲ್ಲಿ ಹಿಂದೆಯೂ ಇರಲಿಲ್ಲ, ಮುಂದೆಯೂ ಇರಲ್ಲ: ವಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ!

Share
ಸಿದ್ದರಾಮಯ್ಯ
Share

SUDDIKSHANA KANNADA NEWS/DAVANAGERE/DATE:19_12_2025

ಬೆಳಗಾವಿ: ರಾಜಕೀಯ ನಿಶ್ಯಕ್ತಿ ನನ್ನಲ್ಲಿ ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ಮುಂದೆಯೂ ಇರೋಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿಪಕ್ಷಗಳಿಗೆ ಸಖತ್ ತಿರುಗೇಟು ನೀಡಿದ್ದಾರೆ.

ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ಆಡಳಿತ ಪಕ್ಷದವರು 7 ಗಂಟೆ 13 ನಿಮಿಷಗಳ ಕಾಲ 15 ಜನ ಬಿಜೆಪಿಯವರು ಮಾತನಾಡಿದ್ದಾರೆ. 6 ಗಂಟೆ 69 ನಿಮಿಷಗಳ ಕಾಲ ಮಾತನಾಡಿದ್ದಾರೆ. ಜೆಡಿಎಸ್ 1ಗಂಟೆ 59 ನಿಮಿಷ, ಯತ್ನಾಳ್ 1ಗಂಟೆ 4 ನಿಮಿಷ ಮಾತನಾಡಿದ್ದಾರೆ. 17 ಗಂಟೆ 2 ನಿಮಿಷ ಮಾತನಾಡಿದ್ದಾರೆ ಎಂದು ತಿಳಿಸಿದರು.

ಕೆಲವರು ಉತ್ತಮ ಸಲಹೆಗಳನ್ನು ಕೊಟ್ಟಿದ್ದಾರೆ. ಕೆಲವರು ಟೀಕೆಗಳನ್ನು ಮಾಡಿದ್ದಾರೆ.ಅಧಿವೇಶನ ಪ್ರಾರಂಭವಾದ ಎರಡನೇ ದಿನವೇ ಉತ್ತರ ಕನ್ನಡದ ಬಗ್ಗೆ ಮಾತಮಾಡಿರುವುದು ಈ ಬಾರಿಯ ವಿಶೇಷ ಎಂದರು.

ರಾಜಕೀಯ ನಿಶ್ಯಕ್ತಿ ನಾನಲ್ಲಿ ಹಿಂದೆ ಇರಲಿಲ್ಲ, ಇಂದೂ ಇಲ್ಲ ಮುಂದೆಯೂ ಇರುವುದಿಲ್ಲ. ಹಾಗೇನಾದರೂ ವಿರೋಧಪಕ್ಷಗಳು ಭಾವಿಸಿದ್ದರೆ ಅದು ತಪ್ಪು ಮಾಹಿತಿ ಎಂದು ಮುಖ್ಯಮಂತ್ರಿಗಳು ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರ ಹೇಳಿಕೆಗೆ ಉತ್ತರಿಸಿದರು.

39 ಜನ ಸದಸ್ಯರು ಉತ್ತರ ಕರ್ನಾಟಕದ ಬಗ್ಗೆ ಮಾತನಾಡಿದ್ದಾರೆ. ಉತ್ತರ ಕರ್ನಾಟಕ ಹಿಂದುಳಿದಿದೆ ಎಂಬ ಕಾರಣಕ್ಕಾಗಿಯೇ 2001 ರಲ್ಲಿ ನಂಜುಂಡಪ್ಪ ಅವರ ಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಯಿತು. ಅವರು ಅಧ್ಯಯನ ಮಾಡಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಅಧ್ಯಯನ ಮಾಡಿ 2002 ರಲ್ಲಿ ವರದಿ ಕೊಡುತ್ತಾರೆ. 39 ತಾಲ್ಲೂಕುಗಳು ಅತ್ಯಂತ ಹಿಂದುಳಿದವು.40 ತಾಲ್ಲೂಕುಗಳು ಅತಿ ಹಿಂದುಳಿದವು. 35 ತಾಲ್ಲೂಕುಗಳು ಹಿಂದುಳಿದಿವೆ. ಒಟ್ಟು 114 ತಾಲ್ಲೂಕುಗಳು ಹಿಂದುಳಿದಿವೆ ಎಂದು ಗುರುತಿಸಿದ್ದಾರೆ. 8 ವರ್ಷಗಳಲ್ಲಿ 31000 ಕೋಟಿ ರೂಗಳನ್ನು ಸರ್ಕಾರ ವೆಚ್ಚ ಮಾಡಬೇಕು. ಈ ಪೈಕಿ 15,000 ಕೋಟಿ ಸಾಮಾನ್ಯವಾಗಿ ಬರುತ್ತದೆ. ಜೊತೆಗೆ 16000 ಕೋಟಿಗಳನ್ನು 8ವರ್ಷಗಳಲ್ಲಿ ವೆಚ್ಚ ಮಾಡಬೇಕು ಎಂದು ಶಿಫಾರಸ್ಸು ಮಾಡಿದ್ದರು. ಪ್ರಸ್ತುತ 31000 ಕೋಟಿಗಳಿಗಿಂತ ಹೆಚ್ಚು ವೆಚ್ಚ ಮಾಡಲಾಗಿದೆ. ನಮ್ಮ ಸಾಕಾರ ಅಧಿಕಾರಕ್ಕೆ ಬಂದ ನಂತರ 3000 ಕೋಟಿ ವಿಶೇಷ ಅಭಿವೃದ್ಧಿ ಯೋಜನೆಯಡಿ ವೆಚ್ಚ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಅಸಮತೋಲನ ಎಷ್ಟರ ಮಟ್ಟಿಗೆ ನಿವಾರಣೆಯಾಗಿದೆ. ವರದಿಯ ಪರಿಣಾಮಗಳೇನು , ಇನ್ನೂ ಉತ್ತರ ಕರ್ನಾಟಕ ಹಿಂದುಳಿದಿವೆ. 39 ರಲ್ಲಿ 27 ತಾಲ್ಲೂಕುಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರುತ್ತವೆ. 31000 ಕೋಟಿ ವೆಚ್ಚ ಮಾಡಿದರೂ ಪ್ರಾದೇಶಿಕ ಅಸಮತೋಲನ ಇನ್ನೂ ನಿವಾರಣೆಯಾಗಿಲ್ಲ ಎಂದು ಪ್ರಸ್ತಾಪಿಸಲಾಗಿದೆ.

ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲಿಯೇ FIRST:

ವಿರೋಧ ಪಕ್ಷದ ನಾಯಕರು ತಲಾ ಆದಾಯದ ಬಗ್ಗೆ ಮಾತನಾಡಿದ್ದು, ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳ ಬಗ್ಗೆ ಘೋಷಣೆ ಮಾಡಿದ ದಿನದಿಂದ ಇಂದಿನವರೆಗೆ ಮಾತನಾಡುತ್ತಿದ್ದಾರೆ.ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಮೇಲೆ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲಿಯೇ ಮೊದಲನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles