Home ಕ್ರೈಂ ನ್ಯೂಸ್ ದಾವಣಗೆರೆಯ ಪಿ. ಬಿ. ರಸ್ತೆ, ಎವಿಕೆ ಕಾಲೇಜು, ಬಾಪೂಜಿ ಆಸ್ಪತ್ರೆ ವ್ಯಾಪ್ತಿಯಲ್ಲಿ ತಂಬಾಕು ದಾಳಿ: ತಂಬಾಕು ಮಾರಾಟ ಮಾಡಿದಂತೆ ಎಚ್ಚರಿಕೆ
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ದಾವಣಗೆರೆಯ ಪಿ. ಬಿ. ರಸ್ತೆ, ಎವಿಕೆ ಕಾಲೇಜು, ಬಾಪೂಜಿ ಆಸ್ಪತ್ರೆ ವ್ಯಾಪ್ತಿಯಲ್ಲಿ ತಂಬಾಕು ದಾಳಿ: ತಂಬಾಕು ಮಾರಾಟ ಮಾಡಿದಂತೆ ಎಚ್ಚರಿಕೆ

Share
Share

ದಾವಣಗೆರೆ: ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ, ಪಿ.ಬಿ ರಸ್ತೆ, ಎವಿಕೆ ಕಾಲೇಜು ರಸ್ತೆ, ಬಾಪೂಜಿ ಆಸ್ಪತ್ರೆಯ ವ್ಯಾಪ್ತಿಯಲ್ಲಿ ಕೋಟ್ಪಾ ಕಾಯ್ದೆನ್ವಯ ಹಾಗೂ ಟಿ.ವಿ.ಎಲ್ ಅನುಷ್ಠಾನದ ಕುರಿತು ತಂಬಾಕು ದಾಳಿ ಕೈಗೊಳ್ಳಲಾಯಿತು.

ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ತಂಬಾಕು ದಾಳಿ ಕೈಗೊಂಡು ಬಾಪೂಜಿ ಆಸ್ಪತ್ರೆಯ ಮುಂಭಾಗದಲ್ಲಿ ಬರುವ ಎಲ್ಲಾ ಹೊಟೇಲ್ ಅಂಗಡಿಗಳಿಗೆ ಭೇಟಿ ನೀಡಿ ಕಡ್ಡಾಯವಾಗಿ ಆಹಾರ ಪದಾರ್ಥಗಳ ಜೊತೆಗೆ ತಂಬಾಕು ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಯಿತು. ಇದನ್ನು ಹೊರತುಪಡಿಸಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿದಲ್ಲಿ ಕೋಟ್ಪಾ-2003 ಕಾಯ್ದೆಯ ಅನುಸಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

ಸೆಕ್ಷನ್-4 ಅಡಿಯಲ್ಲಿ 23 ಪ್ರಕರಣ ದಾಖಲಿಸಿ ರೂ. 4400/- ಹಾಗೂ ಸೆಕ್ಷನ್-6ಬಿ ಅಡಿಯಲ್ಲಿ 6 ಪ್ರಕರಣ ದಾಖಲಿಸಿ 1100/- ದಂಡ ವಿಧಿಸಿ ಒಟ್ಟು 29 ಪ್ರಕರಣ ದಾಖಲಿಸಿ ರೂ.5500/- ದಂಡ ವಿಧಿಸಲಾಯಿತು.

ದಾಳಿಯಲ್ಲಿ ಜಿಲ್ಲಾ ಸಲಹೆಗಾರರಾದ ಸತೀಶ್ ಕಲಹಾಳ್, ಸಮಾಜ ಕಾರ್ಯಕರ್ತರಾದ ಶೈಲಾ ಶಾಮನೂರು, ತಾಲ್ಲೂಕಿನ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಯಾದ ವೆಂಕಟಾಚಲಕುಮಾರ ಟಿ.ಎಸ್. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ, ಉಮಾಪತಿ, ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕರಾದ ನಿಖಿಲ್ ಜೆ.ಹೆಚ್ ದಫೇದರ್ ತ್ರಿಮೂರ್ತಿ ಮತ್ತು ಬಡಾವಣೆ ಪೊಲೀಸ್ ಠಾಣೆಯ ಸಿಬ್ಬಂದಿ ವಿರೇಶ್ ಕುಮಾರ್ ಇದ್ದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles