Home ದಾವಣಗೆರೆ ಗುರು-ಲಿಂಗ ಜಂಗಮ ಆರಾಧಕರು, ಬೀಗದೆ ಬಾಗುವ ಶಾಮನೂರು ಶಿವಶಂಕರಪ್ಪನವರ ಅಗಲುವಿಕೆ ನಿಜಕ್ಕೂ ದುಃಖಕರ: ಸಿರಿಗೆರೆ ಶ್ರೀ ಸಂತಾಪ
ದಾವಣಗೆರೆನವದೆಹಲಿಬೆಂಗಳೂರು

ಗುರು-ಲಿಂಗ ಜಂಗಮ ಆರಾಧಕರು, ಬೀಗದೆ ಬಾಗುವ ಶಾಮನೂರು ಶಿವಶಂಕರಪ್ಪನವರ ಅಗಲುವಿಕೆ ನಿಜಕ್ಕೂ ದುಃಖಕರ: ಸಿರಿಗೆರೆ ಶ್ರೀ ಸಂತಾಪ

Share
ಶಾಮನೂರು ಶಿವಶಂಕರಪ್ಪ
Share

SUDDIKSHANA KANNADA NEWS/DAVANAGERE/DATE:15_12_2025

ಸಿರಿಗೆರೆ: ನಮ್ಮ ಮಠದ ಶಿಷ್ಯರು, ಕರ್ನಾಟಕ ವಿಧಾನಸಭೆಯ ಹಿರಿಯ ಶಾಸಕರು, ಮಾಜಿ ಸಚಿವರೂ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆದ ಶಾಮನೂರು ಶಿವಶಂಕರಪ್ಪ ಅವರು ತಮ್ಮ 95ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಕೊನೆಯುಸಿರೆಳೆದಿದ್ದಾರೆ. ಶಾಮನೂರು ಶಿವಶಂಕರಪ್ಪರ ನಿಧನಕ್ಕೆ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ‌ದ ಪೀಠಾಧಿಪತಿ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಂತಾಪ ಸೂಚಿಸಿದ್ದಾರೆ.

READ ALSO THIS STORY: ದಾವಣಗೆರೆ ಧಣಿ ಶಾಮನೂರು ಶಿವಶಂಕರಪ್ಪರು ರಾಜ್ಯ ರಾಜಕಾರಣದಲ್ಲಿ ಸೋಲಿಲ್ಲದ ಸರದಾರರಾಗಿದ್ದು ಹೇಗೆ? ಇಂಟ್ರೆಸ್ಟಿಂಗ್ ಸ್ಟೋರಿ

ಸಮಾಜದ ಏಳಿಗೆಗಾಗಿ ಶ್ರಮಿಸಿದ, ಕೊಡಗೈದಾನಿಗಳಾಗಿದ್ದ ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಮತ್ತು ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಆ ಪರಶಿವನು ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ, ಹಿತೈಷಿಗಳಿಗೆ ನೀಡಲೆಂದು ಶ್ರೀ ತರಳಬಾಳು ಜಗದ್ಗುರುಗಳು ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾಗಿ, ವ್ಯಾಪಾರ ಉದ್ದಿಮೆಯಲ್ಲಿ ಕರ್ನಾಟಕದ ಮ್ಯಾಂಚೆಸ್ಟರ್ ಎನಿಸಿದ್ದ ದಾವಣಗೆರೆಯನ್ನು ಕರ್ನಾಟಕದ ಆಕ್ಸ್ ಫರ್ಡ್ ಆಗಿ ಮಾಡಿದವರು ಆವರು ಎಂದು ತಿಳಿಸಿದ್ದಾರೆ.

ದಶಕಗಳ ರಾಜಕೀಯ ಅನುಭವ :

ಕರ್ನಾಟಕದ ರಾಜಕೀಯದಲ್ಲಿ ಅಜಾತಶತ್ರು ಎಂದೇ ಗುರುತಿಸಿಕೊಂಡಿದ್ದ ಶಾಮನೂರು ಶಿವಶಂಕರಪ್ಪ ಅವರು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದರು. ಅವರು ಆರು ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ಸಂಸದರಾಗಿ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದ ವಿವಿಧ ಸರ್ಕಾರಗಳಲ್ಲಿ ಪ್ರಮುಖ ಖಾತೆಗಳನ್ನು ನಿಭಾಯಿಸುವ ಮೂಲಕ ಸಚಿವರಾಗಿ ಕೂಡ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶ್ರೀಗಳು ಹೇಳಿದ್ದಾರೆ.

ಸಮಾಜದ ಹಿರಿಯರು, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು, ಗುರು-ಲಿಂಗ ಜಂಗಮ ಆರಾಧಕರು, ಬೀಗದೆ ಬಾಗುವ ಶಾಮನೂರು ಶಿವಶಂಕರಪ್ಪನವರ ಅಗಲುವಿಕೆ ನಿಜಕ್ಕೂ ದುಃಖಕರ ಅವರ ತುಂಬು ಜೀವನ ಭವ್ಯ ಯಶೋಗಾಥೆ ಸದಾ ಸ್ಪೂರ್ತಿದಾಯಕ ಎಂದಿದ್ದಾರೆ.

ನಾಡಿನ ಪ್ರಮುಖ ಸಂಸ್ಥೆಯಾದ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಅವರು ಸಮುದಾಯದ ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೆ ಮಹತ್ತರ ಸೇವೆ ಸಲ್ಲಿಸಿದ್ದರು. ಅವರ ನಿಧನದಿಂದ ರಾಜ್ಯವು ಒಬ್ಬ ಅನುಭವಿ ರಾಜಕೀಯ ನಾಯಕನನ್ನು ಹಾಗೂ ಮಹತ್ವದ ಸಾಮಾಜಿಕ ಮುಖಂಡನನ್ನು ಕಳೆದುಕೊಂಡಂತಾಗಿದೆ ಎಂದು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *