Home ದಾವಣಗೆರೆ ಬೀದಿ ನಾಯಿಗಳ ಹಾವಳಿ ಹೆಚ್ಚಳ: ಎಚ್ಚೆತ್ತ ಪಾಲಿಕೆಯಿಂದ ಬೀದಿನಾಯಿಗಳ ಪೋಷಿಸಲು ಆಸಕ್ತರಿಂದ ಅರ್ಜಿ ಆಹ್ವಾನ
ದಾವಣಗೆರೆಬೆಂಗಳೂರು

ಬೀದಿ ನಾಯಿಗಳ ಹಾವಳಿ ಹೆಚ್ಚಳ: ಎಚ್ಚೆತ್ತ ಪಾಲಿಕೆಯಿಂದ ಬೀದಿನಾಯಿಗಳ ಪೋಷಿಸಲು ಆಸಕ್ತರಿಂದ ಅರ್ಜಿ ಆಹ್ವಾನ

Share
Share

ದಾವಣಗೆರೆ: ಸರ್ವೋಚ್ಛ ನ್ಯಾಯಾಲಯದ ಸ್ವ-ಪ್ರೇರಿತ ರಿಟ್ ಪಿಟಿಷನ್ ಅನ್ವಯ ಸಾರ್ವಜನಿಕ ಸುರಕ್ಷತೆ, ಆರೋಗ್ಯ ಹಾಗೂ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ, ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಕ್ರೀಡಾ ಸಮುದಾಯ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣದಂತಹ ಸಾಂಸ್ಥಿಕ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬೀದಿ ನಾಯಿಗಳನ್ನು ಗುರುತಿಸಿ ಆಶ್ರಯ ತಾಣಗಳಲ್ಲಿ ಆರೈಕೆ ಮತ್ತು ಪೋಷಣೆಗೆ ಆದೇಶಿಸಲಾಗಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ, ಸಂಘ-ಸಂಸ್ಥೆಗಳು ಬೀದಿ ನಾಯಿಗಳನ್ನು ದತ್ತು ತೆಗೆದುಕೊಂಡು ಪೋಷಿಸಲು ಆಸಕ್ತರಿದ್ದಲ್ಲಿ, ಅಥವಾ ಪಾಲಿಕೆಯಿಂದ ನಿರ್ಮಿಸಲಾಗುವ ನಾಯಿಗಳ ಆಶ್ರಯ ತಾಣಗಳನ್ನು ನಿರ್ವಹಿಸಲು ಆಸಕ್ತರಿದ್ದಲ್ಲಿ ಡಿಸೆಂಬರ್ 12 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.

ಆಯುಕ್ತರು, ದಾವಣಗೆರೆ ಮಹಾನಗರ ಪಾಲಿಕೆ ಇವರಿಗೆ ಖುದ್ದಾಗಿ ತಮ್ಮ ಪ್ರಸ್ತಾವನೆಯೊಂದಿಗೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ https://awbi.gov.in/Document/general%20guidelines ವೀಕ್ಷಿಸಲು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *