SUDDIKSHANA KANNADA NEWS/ DAVANAGERE/ DATE:10-08-2024
ದಾವಣಗೆರೆ: ಜುಲೈ ತಿಂಗಳಿನಲ್ಲಿ ಅಬ್ಬರಿಸಿ ಬೊಬ್ಬಿರಿದದ್ದ ವರುಣ ಶಾಂತವಾಗಿದ್ದಾನೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಕಳೆದ ತಿಂಗಳು ಉತ್ತಮ ಮಳೆಯಾಗಿತ್ತು. ಆದ್ರೆ, ಕಳೆದ ವಾರದಿಂದೀಚೆಗೆ ಮಳೆ ಕುಸಿತ ಕಂಡಿದೆ. ಭದ್ರಾ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣವೂ ಕಡಿಮೆಯಾಗಿದ್ದು, ಹೊರ ಹರಿವು ಕುಂಠಿತವಾಗಿದೆ. ಜಲಾಶಯದ ಇಂದಿನ ನೀರಿನ ಮಟ್ಟ 180.5ಕ್ಕೇರಿದೆ.
ಭದ್ರಾ ಜಲಾಶಯಕ್ಕೆ ಒಳಹರಿವು 7468 ಕ್ಯೂಸೆಕ್ ಇದ್ದರೆ, ಹೊರ ಹರಿವು 6311 ಕ್ಯೂಸೆಕ್ ಇದೆ. ಭದ್ರಾ ಎಡದಂಡೆ ನಾಲೆಯಲ್ಲಿ 350 ಕ್ಯೂಸೆಕ್ ಹಾಗೂ ಬಲದಂಡೆ ನಾಲೆಯಲ್ಲಿ 2650 ಕ್ಯೂಸೆ್ ಇದ್ದು, ಒಟ್ಟು 3000 ಕ್ಯೂಸೆಕ್ ಅನ್ನು ಎಡದಂಡೆ ಹಾಗೂ ಬಲದಂಡೆ ನಾಲೆಯಲ್ಲಿ ಹರಿಸಲಾಗುತ್ತಿದೆ. ಕ್ರಸ್ಟ್ ಗೇಟ್ ನಿಂದ ಕೇವಲ 500 ಕ್ಯೂಸೆಕ್ ಮಾತ್ರ ನೀರು ಹರಿದು ಬಿಡಲಾಗುತ್ತಿದೆ. ಜಲಾಶಯದ ಕಳೆದ ವರ್ಷದ ನೀರಿನ ಮಟ್ಟ 166.9 ಅಡಿ ಇತ್ತು. ಒಳಹರಿವು 4118 ಕ್ಯೂಸೆಕ್ ಇತ್ತು.
ಭದ್ರಾ ಜಲಾಶಯದಿಂದ ನೀರು ಹೊರಗಡೆ ಬಿಡುತ್ತಿರುವ ಕಾರಣ ಜಲಾಶಯದ ನೀರಿನ ಮಟ್ಟ ನಿಧಾನವಾಗಿ ಏರುಮುಖವಾಗುತ್ತಿದೆ. ಕೃಷಿ ಚಟುವಟಿಕೆಗಳು ಒಂದೆಡೆ ಗರಿಗೆದರಿದ್ದರೆ, ಮತ್ತೊಂದೆಡೆ ಜಲಾಶಯಕ್ಕೆ ನೀರು ಹೆಚ್ಚು
ಬರಲಿ, ಮತ್ತಷ್ಟು ಸಂಗ್ರಹವಾಗಲಿ ಎಂಬ ಆಶಯ ರೈತರದ್ದಾಗಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಆಗಿದ್ದು, ಈ ಬಾರಿ ಭಾರೀ ಮಳೆಯಾದ ಪರಿಣಾಮ ಜಲಾಶಯವು ಜುಲೈ ತಿಂಗಳಿನಲ್ಲಿ ಭರ್ತಿಯಾಗಿತ್ತು. ಇದರಿಂದಾಗಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರ ಬಿಡಲಾಗಿತ್ತು. ಈಗ ಒಳಹರಿವು ಕಡಿಮೆ ಆಗಿದ್ದು, ಹೊರ ಹರಿವು ಕಡಿಮೆಯಾಗಿದೆ. ಇದರಿಂದಾಗಿ ತಲೆದೋರಿದ್ದ ಪ್ರವಾಹ ಭೀತಿ ದೂರವಾಗಿದೆ.
ಕಳೆದೊಂದು ವಾರದಿಂದ ಸ್ವಲ್ಪ ಕಡಿಮೆಯಾಗಿದ್ದು, ಜಲಾಶಯಕ್ಕೆ ಬರುತ್ತಿರುವ ಒಳಹರಿವಿಗಿಂತ ಹೊರ ಹರಿವು ಕಡಿಮೆ ಮಾಡಲಾಗಿದೆ. ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಸ್ವಲ್ಪ ಮಟ್ಟಿಗೆ ಏರಿಕೆ ಆಗಿದೆ. ಆದ್ರೆ, ಪೂರ್ತಿ ಪ್ರಮಾಣದಲ್ಲಿ
ಸದ್ಯಕ್ಕೆ ಪ್ರವಾಹ ಭೀತಿ ದೂರವಾಗಿದೆ.
ಈ ವರ್ಷ ಜುಲೈ ತಿಂಗಳ ಅಂತ್ಯದಲ್ಲಿಯೇ ಜಲಾಶಯ ಭರ್ತಿ ಆಗಿದ್ದು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಜನರು ಹಾಗೂ ರೈತರ ಸಂತಸಕ್ಕೆ ಕಾರಣವಾಗಿದೆ. ಜಲಾಶಯಕ್ಕೆ ಬರುತ್ತಿರುವ ಒಳಹರಿವು ಕಡಿಮೆ ಆಗಿದೆ. ಈ ಹಿನ್ನೆಲೆಯಲ್ಲಿ ಹೊರ ಹರಿವು ಕುಂಠಿತಗೊಂಡಿದೆ. ನದಿ ಪಾತ್ರದ ಜನರಲ್ಲಿ ತಲೆದೋರಿದ್ದ ಪ್ರವಾಹ ಭೀತಿ ದೂರವಾಗಿದೆ. ಮತ್ತೆ ಮಳೆ ಅಬ್ಬರಿಸಿ, ಬೊಬ್ಬಿರಿದರೆ ಜಲಾಶಯಕ್ಕೆ ಹೆಚ್ಚು ನೀರು ಹರಿದು ಬರುತ್ತದೆ. ಹೊರ ಹರಿವು ಜಾಸ್ತಿಯಾಗಲಿದ್ದು, ಆಗ ನೀರು ಹೆಚ್ಚು ಸಂಗ್ರಹವಾಗಲಿದೆ.
ಭದ್ರಾ ಡ್ಯಾಂ ನೀರಿನ ಮಟ್ಟ
-
ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ
-
ದಿನಾಂಕ: 10-08-2024
-
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 180.51 ಅಡಿ
-
ಕೆಪಾಸಿಟಿ: 64.752 ಟಿಎಂಸಿ
-
ಒಳಹರಿವು: 7468 ಕ್ಯೂಸೆಕ್
-
ಕ್ರಸ್ಟ್ ಗೇಟ್ ಹೊರಹರಿವು: 500 ಕ್ಯೂಸೆಕ್
-
ಭದ್ರಾ ಎಡದಂಡೆ ನಾಲೆ: 350 ಕ್ಯೂಸೆಕ್
-
ಭದ್ರಾ ಬಲದಂಡೆ ನಾಲೆ: 2650 ಕ್ಯೂಸೆಕ್
-
ಒಟ್ಟು ಹೊರ ಹರಿವು: 6311 ಕ್ಯೂಸೆಕ್
-
ಕಳೆದ ವರ್ಷ ಇದೇ ದಿನ ಡ್ಯಾಂ ನೀರಿನ ಮಟ್ಟ: 166.9 ಅಡಿ
-
ಕಳೆದ ವರ್ಷ ಇದೇ ದಿನ ಒಳಹರಿವು: 4118 ಕ್ಯೂಸೆಕ್