ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಇನ್ನು ಎರಡು ದಿನ ಅವಕಾಶ ರೈತರಿಗೆ ನೀಡಲಾಗಿದ್ದು ಕಳೆದ 6ನೇ ತಾರೀಕು ಕೊನೆಯ ದಿನಾಂಕ ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು ಅದಾದ ನಂತರ ಇನ್ನೂ ಬಹಳಷ್ಟು ರೈತರು ತಮ್ಮ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವುದನ್ನು ಕಂಡು ಮತ್ತೆ ಅದನ್ನು ಹತ್ತನೇ ತಾರೀಖಿನವರೆಗೆ ಮುಂದೂಡಲಾಗಿದೆ ಈಗಾಗಲೇ ಲಿಂಕ್ ಆಗಿದ್ದರೆ ನೀವು ಲಿಂಕ್ ಮಾಡುವುದು ಅವಶ್ಯಕತೆ ಇಲ್ಲ ಒಂದು ವೇಳೆ ಲಿಂಕ್ ಮಾಡದಿದ್ದರೆ ಅಥವಾ ಈ ಮಾಹಿತಿ ನಿಮಗೆ ಗೊತ್ತಾಗದೆ ಇದ್ದರೆ ತಕ್ಷಣವಾಗಿ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಹೋಗಿ ಲಿಂಕ್ ಮಾಡಿಸಬೇಕು.
ಮುಂದಿನ ಸರ್ಕಾರದ ಸೌಲಭ್ಯ ಪಡೆಯಬೇಕಾದರೆ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿದೆ
ಅದಕ್ಕಾಗಿ ನೀವು ಈಗ ತಕ್ಷಣವಾಗಿ ನಿಮ್ಮ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಬಹಳಷ್ಟು ಜನರು ಇದನ್ನು ಅಷ್ಟೊಂದು ಕಠಿಣವಾಗಿ ತೆಗೆದುಕೊಂಡಿಲ್ಲ ಒಂದು ವೇಳೆ ಸರ್ಕಾರದಿಂದ ಡಿ ಬಿ ಟಿ ಹಣ ವರ್ಗಾವಣೆಗೂ ಇದು ಕಡ್ಡಾಯವಾಗಿ ಮಾಡಿದರೆ ತುಂಬಾ ಕಷ್ಟಕರವಾಗುತ್ತದೆ ಮತ್ತು ಸರ್ಕಾರದಿಂದ ರಾಜ್ಯದಲ್ಲಿರುವ 60 ಪರ್ಸೆಂಟ್ ಜನರಿಗೆ ಸರ್ಕಾರದ ಹಣವೇ ಜಮಾ ಆಗುವುದಿಲ್ಲ ಅದಕ್ಕಾಗಿ ಕೂಡಲೇ ಇದನ್ನು ಸರಿಪಡಿಸಿಕೊಳ್ಳಬೇಕು.
ಈಗಾಗಲೇ ಉಚಿತವಾಗಿ ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ವಿಸಿಟ್ ಮಾಡಿ ನಿಮ್ಮ ಗ್ರಾಮ ಲೆಕ್ಕಾಧಿಕಾರಿಗಳು ನಿಮ್ಮ ನಿಮ್ಮ ಗ್ರಾಮ ಪಂಚಾಯಿತಿಗಳಿಗೆ ತಿರುಗಾಡುತ್ತಿದ್ದಾರೆ ಅವರಿಗೆ ಈ ಲಿಂಕ್ ಮಾಡುವುದು ಕಡ್ಡಾಯವಾಗಿ ಸರ್ಕಾರ ಆದೇಶ ನೀಡಿದ್ದು ಅವರು ಈಗಲೇ ಇದನ್ನು ಬೇಗ ಬೇಗ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ ಹೀಗಾಗಿ ಈ ಕೆಲಸ ಕಾರ್ಯಗಳಲ್ಲಿ ನೀವು ಕೂಡ ಬೇಗನೆ ಲಿಂಕ್ ಮಾಡಿಸಿದರೆ ಮುಂದೆ ನೀವು ಅಡ್ಡಾಡುವುದು ತಪ್ಪುತ್ತದೆ ಅದರ ಜೊತೆಗೆ ನಿಮ್ಮ ಕೆಲಸ ಆಗುತ್ತದೆ ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳು ಸಹ ನಿಮಗೆ ದೊರೆಯುತ್ತವೆ.
ಲಿಂಕ್ ಆಗಿರುವುದನ್ನು ಈಗಾಗಲೇ ಚೆಕ್ ಮಾಡಿಕೊಳ್ಳಲು ಆನ್ಲೈನ್ ನಲ್ಲಿ ಅವಕಾಶ ಮಾಡಿಕೊಟ್ಟಿದೆ?
https://landrecords.karnataka.gov.in/service4 ಈ ಲಿಂಕ್ ಅನ್ನು ನೀವು ಬಳಸಿಕೊಂಡು ನಿಮ್ಮ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದನ್ನು ತಿಳಿದುಕೊಳ್ಳಬಹುದು ಮೊದಲಿಗೆ ಲಿಂಕ್ ಓಪನ್ ಮಾಡಿ ಮೊಬೈಲ್ ನಂಬರ್ ಹಾಕಿ ಓಟಿಪಿ ಬರುತ್ತದೆ ಓಟಿಪಿಯನ್ನು ನಮೂದಿಸಿ ಓಟಿಪಿ ಆದ ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ ಇನ್ನೊಂದು ಪೇಜ್ ನಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಕಿ ಆಧಾರ ಸಂಖ್ಯೆ ಹಾಕಿದ ನಂತರ ಆಧಾರ್ ಕಾರ್ಡ್ ನಲ್ಲಿರುವ ಹೆಸರನ್ನು ಸಹ ಹಾಕಿ ಹೆಸರನ್ನು ಹಾಕಿದ ನಂತರ ಕೆಳಗಡೆ ವೆರಿಫೈ ಬಟನ್ ಕಾಣಿಸುತ್ತದೆ ಕ್ಲಿಕ್ ಮಾಡಿ ಯಶಸ್ವಿಯಾಗಿ ಪರಿಶೀಲಿಸಲಾಗಿದೆ ಎಂದು ಬಂದರೆ ಮತ್ತೆ ಕೆಳಗಡೆ ಆಧಾರ್ ಅಧಿಕೃತ ಓಟಿಪಿ ಬರುತ್ತದೆ ಓಟಿಪಿಯನ್ನು ನಮೂದಿಸಿ ನಂತರ ಸರ್ವೆ ನಂಬರ್ ಆಯ್ಕೆ ಮಾಡಿ ಸರ್ವೇ ನಂಬರ್ ಆಯ್ಕೆ ಮಾಡಿದ ತಕ್ಷಣ ನಿಮ್ಮ ಪಹಣಿ ಪತ್ರಿಕೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂದು ಈಗಾಗಲೇ ತೋರಿಸುತ್ತದೆ ಒಂದು ವೇಳೆ ಆಗದಿದ್ದರೆ ಲಿಂಕ್ ತನ್ನಿಂದ ತಾನೇ ಆಗುತ್ತದೆ.
ಮೇಲೆ ಈ ಒಂದು ಐದು ನಿಮಿಷಗಳ ಕೆಲಸದಿಂದಾಗಿ ಸರ್ಕಾರದಿಂದ ನೀವು ಪಡೆಯುವ ಸೌಲಭ್ಯಗಳಿಂದ ವಂಚಿತರಾಗಬಾರದು ಎಂದು ನಮ್ಮೆಲ್ಲರ ಅಭಿಪ್ರಾಯ ಹೀಗಾಗಿ ಬೇಗನೆ ಈ ಕೆಲಸವನ್ನು ಮಾಡಿಬಿಡಿ ನಂತರ ಮುಂದಿನ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಿ.