SUDDIKSHANA KANNADA NEWS/ DAVANAGERE/ DATE:12-06-2023
ಮಂಗಳೂರು (Mangalore): ತುಳುನಾಡಿನ ಜನರಿಗೆ ಜಾತಿಗಿಂತ ತುಳು ಸಂಸ್ಕೃತಿ ಮುಖ್ಯ. ದೇಶ ವಿದೇಶಕ್ಕೂ ಹೋದರೂ ತುಳು ಸಂಸ್ಕೃತಿಯನ್ನು ಮರೆಯಬಾರದು. ಆದರೆ ತುಳು ಭಾಷೆಯನ್ನು ಎಂಟನೇ ಪರೀಚ್ಛೇಧದಲ್ಲಿ ಸೇರಿಸುವಲ್ಲಿ ಈ ತನಕವೂ ಆಗದೇ ರಾಜಕಾರಣಿಗಳು ಕೇವಲ ಬಂಡಲ್ ಬಿಡುವಲ್ಲೇ ಕಾಲ ಕಳೆದರು ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಖೇದ ವ್ಯಕ್ತಪಡಿಸಿದರು.
ಜೈ ತುಳುನಾಡ್(ರಿ) ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಶ್ರೀಕ್ಷೇತ್ರ ಕೇಮಾರಿನಲ್ಲಿ ‘ಟೆಲಿಬರವು’ ಎಂಬ ಆಪ್ ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಈ ಸುದ್ದಿಯನ್ನೂ ಓದಿ:
Police: ಕುಟುಂಬ ನೋಡಿಕೊಳ್ಳಬೇಕು ವೈಯಕ್ತಿಕ ಕೋರಿಕೆಗಿಲ್ಲ ಮಣೆ, ವರ್ಗಾವಣೆಗಿಲ್ಲ ಅವಕಾಶ: ರಾಜ್ಯ ಸರ್ಕಾರದ ಇಬ್ಬಗೆ ನೀತಿಗೆ ಇದಕ್ಕಿಂತ ಸಾಕ್ಷಿ ಬೇಕಾ…?
ಈ ವೇಳೆ ‘ಟೆಲಿಬರವು’ ತಂತ್ರಾಂಶದ ರಚನೆಕಾರರಾದ ಜ್ಙಾನೇಶ ದೇರಳಕಟ್ಟೆ ಇವರನ್ನು ಸನ್ಮಾನಿಸಲಾಯಿತು. ಈ ತಂತ್ರಾಂಶದಲ್ಲಿ ಕನ್ನಡದಲ್ಲಿ ಬರೆದಂತಹ ಅಕ್ಷರಗಳು ತುಳು ಲಿಪಿಗೆ ಪರಿವರ್ತನೆಯಾಗುತ್ತದೆ ಎಂದು ಸನ್ಮಾನಿತರಾದ ಜ್ಞಾನೇಶ್ ಹೇಳಿದರು.
ಜೈ ತುಳುನಾಡು ಸಂಘಟನೆಯ ಅಧ್ಯಕ್ಷ ವಿಶು ಶ್ರೀಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಐಕಳ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ರಾಜೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜೈ ತುಳುನಾಡು ಸಂಘಟನೆಯ ಉಪಾಧ್ಯಕ್ಷ ಉದಯ್ ಪೂಂಜಾ ಉಪಸ್ಥಿತರಿದ್ದರು. ಕಿರಣ್ ತುಲುವೆ ಕಾರ್ಯಕ್ರಮ ನಿರೂಪಿಸಿದರು.
Mangalore program
Mangalore news
Mangalore today news
Mangalore Latest news