SUDDIKSHANA KANNADA NEWS/DAVANAGERE/DATE:24_11_2025
ಮುಂಬೈ: ಪತ್ನಿಯ ಆತ್ಮಹತ್ಯೆ ಪ್ರಕರಣ ಸಂಬಂಧ ಮಹಾರಾಷ್ಟ್ರ ಸಚಿವೆ ಪಂಕಜಾ ಮುಂಡೆ ಅವರ ಆಪ್ತ ಸಹಾಯಕನನ್ನು ಮುಂಬೈನಲ್ಲಿ ವರ್ಲಿ ಪೊಲೀಸರು ಬಂಧಿಸಿದ್ದಾರೆ.
READ ALSO THIS STORY: ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗಳು: ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿಗೆ ಚಾಂಪಿಯನ್ ಪಟ್ಟ
ಅನಂತ್ ಗಾರ್ಜಿ ಬಂಧಿತ ಆರೋಪಿ. ಕಳೆದ ಫೆಬ್ರವರಿ ತಿಂಗಳಿನಲ್ಲಿ ಅನಂತ್ ಗಾರ್ಜಿ ಮತ್ತು ಗೌರಿ ಗಾರ್ಜೆ ಮದುವೆಯಾಗಿತ್ತು. ಆಪ್ತ ಸಹಾಯಕ ಅನಂತ್ ಗಾರ್ಜೆ ಅವರು ಕಿರುಕುಳ ನೀಡಿ ಪುತ್ರಿಯನ್ನು ಕೊಲೆ ಮಾಡಿದ್ದಾರೆ. ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಮೃತಳ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಸೋಮವಾರ ಮುಂಜಾನೆ ವರ್ಲಿ ಪೊಲೀಸರು ಅನಂತ್ ಗಾರ್ಜೆ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕೌಟುಂಬಿಕ ಕಲಹದ ನಂತರ ಅನಂತ್ ಗಾರ್ಜೆ ಅವರ ಪತ್ನಿ ಮಧ್ಯ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದರು. ಶನಿವಾರ ಸಂಜೆ ವರ್ಲಿ ಪ್ರದೇಶದ ತಮ್ಮ ಮನೆಯಲ್ಲಿ ಗೌರಿ ಗಾರ್ಜೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಗೌರಿ ಪಾಲ್ವೆ ಗಾರ್ಜೆ ನಾಗರಿಕ ಆಡಳಿತದ ಕೆಇಎಂ ಆಸ್ಪತ್ರೆಯ ದಂತ ವಿಭಾಗದಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದರು. ಅವರ ವಿವಾಹ ಸಮಾರಂಭದಲ್ಲಿ ರಾಜ್ಯ ಸಚಿವೆ ಪಂಕಜಾ ಮುಂಡೆ ಮತ್ತು ಮಾಜಿ ಸಂಸದ ಪ್ರೀತಮ್ ಮುಂಡೆ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಅನಂತ್ ಗಾರ್ಜೆ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಪಾಲ್ವೆ ಅವರ ಕುಟುಂಬ ಆರೋಪಿಸಿದೆ, ಮೊಬೈಲ್ ಫೋನ್ನಲ್ಲಿ ಇನ್ನೊಬ್ಬ ಮಹಿಳೆಯೊಂದಿಗೆ ಚಾಟ್ ಮಾಡುವಾಗ ಪಾಲ್ವೆ ಸಿಕ್ಕಿಬಿದ್ದಿದ್ದ. ಈ ವಿಚಾರ ಪತಿ ಮತ್ತು ಪತ್ನಿ ನಡುವೆ ಆಗಾಗ್ಗೆ ಜಗಳವಾಗುತಿತ್ತು. ಅನಂತ್ ಆಗಾಗ್ಗೆ ಪತ್ನಿಗೆ ಬೆದರಿಕೆ ಹಾಕುತ್ತಿದ್ದ ಎಂಬ ಆರೋಪವೂ ಕೇಳಿ ಬಂದಿದೆ.
ಗೌರಿ ಪಾಲ್ವೆ ಚಿಕ್ಕಪ್ಪ ಮಾತನಾಡಿದ್ದು, ಆಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ, ಇದು ಕೊಲೆ ಪ್ರಕರಣ ಎಂದು ಆರೋಪಿಸಿದ್ದಾರೆ. ಗಾರ್ಜೆ ಮತ್ತು ಕುಟುಂಬ ಸದಸ್ಯರ ಕಿರುಕುಳವೇ ಆಕೆ ಸಾವಿಗೆ ಕಾರಣ ಎಂದು ದೂರಿದ್ದಾರೆ.






Leave a comment