ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಡಾ. ರಾಜಕುಮಾರ್ ಪುತ್ರಿ ಪೂರ್ಣಿಮಾ, ಮೊಮ್ಮಗಳು ಧನ್ಯಾ ರಾಮ್ ಕುಮಾರ್ ರನ್ನ ಮನೆ ಕೆಲಸದವರಿಗೆ ಪರಿಚಯಿಸಿದ ಡಾ. ಪ್ರಭಾ ಮಲ್ಲಿಕಾರ್ಜುನ್

On: March 9, 2024 6:11 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:09-03-2024

ದಾವಣಗೆರೆ: ಮನೆಗೆ ಬಂದಿದ್ದ ವರನಟ ಡಾ. ರಾಜಕುಮಾರ್ ಪುತ್ರಿ ಪೂರ್ಣಿಮಾ ರಾಮ್ ಕುಮಾರ್ ಹಾಗೂ ಮೊಮ್ಮಗಳಾದ ಧನ್ಯ ರಾಮ್ ಕುಮಾರ್ ಅವರನ್ನು ತಮ್ಮ ಮನೆ ಕೆಲಸದವರಿಗೆ ಪರಿಚಯ ಮಾಡಿಸುವ ಮೂಲಕ ಶಾಸಕ ಶಾಮನೂರು ಶಿವಶಂಕರಪ್ಪರ ಸೊಸೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸರಳತೆ ಮೆರೆದರು.

ಸಿನಿಮಾ ನಟರು ಎಂದರೆ ಎಂಥವರಿಗೂ ಕುತೂಹಲ ಅದರಲ್ಲೂ ಡಾ ರಾಜಕುಮಾರ್ ಕುಟುಂಬ ಎಂದರೆ ಇನ್ನು ಹೇಳಬೇಕೇ. ಇಂದು ಡಾ. ರಾಜಕುಮಾರ್ ರವರ ಪುತ್ರಿ ಪೂರ್ಣಿಮಾ ರಾಮ್ ಕುಮಾರ್ ಹಾಗೂ
ಮೊಮ್ಮಗಳು ಧಾನ್ಯ ರಾಮ್ ಕುಮಾರ್ ಹಾಗೂ ಸೂರಜ್ ರೇವಣ್ಣ ಅವರು ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು.

ನಂತರ ಡಾ. ಪ್ರಭಾ ಮಲ್ಲಿಕಾರ್ಜುನ್ ರವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ರಾಜಕುಮಾರ್ ಪುತ್ರಿ ಹಾಗೂ ಮೊಮ್ಮಗಳು ಬಂದಿದ್ದಾರೆಂದು ಕುತೂಹಲದಿಂದ ವೀಕ್ಷಿಸುತ್ತಿದ್ದ ತಮ್ಮ ಮನೆ ಕೆಲಸದವರನ್ನು ಕಂಡ
ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಅವರನ್ನು ಕರೆದು ಪೂರ್ಣಿಮಾ ಹಾಗೂ ಧನ್ಯಾ ಅವರಿಗೆ ಪರಿಚಯ ಮಾಡಿಸಿ, ಅವರ ಜೊತೆ ತಾವು ಫೋಟೋ ತೆಗೆಸಿಕೊಂಡಿದ್ದು ವಿಶೇಷವಾಗಿತ್ತು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment