SUDDIKSHANA KANNADA NEWS/ DAVANAGERE/ DATE:28-01-2024
ದಾವಣಗೆರೆ: ಪಾದಯಾತ್ರೆ ನಡೆಸುವ ಮೂಲಕ ಗ್ರಾಮೀಣ ಭಾಗ ಮಾತ್ರವಲ್ಲ, ಜಿಲ್ಲೆಯಲ್ಲಿ ಚಿರಪರಿಚಿತವಾಗಿರುವ ಕಾಂಗ್ರೆಸ್ ಯುವ ನಾಯಕ ಹಾಗೂ ಭಾರತೀಯ ಯುವ ಕಾಂಗ್ರೆಸ್ ಔಟ್ರೀಚ್ ವಿಭಾಗದ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಚಿತ್ರದುರ್ಗದಲ್ಲಿ ಮಾತುಕತೆ ನಡೆಸಿದರು.
ಕರ್ನಾಟಕ ಶೋಷಿತ ಜಾತಿ-ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಚಿತ್ರದುರ್ಗದಲ್ಲಿ ಆಯೋಜಿಸಿದ್ದ “ಶೋಷಿತರ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರ ಜೊತೆ ವಿನಯ್ ಕುಮಾರ್ ಸಮಾಲೋಚನೆ ನಡೆಸಿದರು. ವೇದಿಕೆಯಲ್ಲಿ ಕುಳಿತಿದ್ದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ವಿನಯ್ ಕುಮಾರ್ ಅವರು, ತಮ್ಮ ಪಾದಯಾತ್ರೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಈ ವೇಳೆ ಪಾದಯಾತ್ರೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರು, ಒಳ್ಳೆಯ ಕೆಲಸ ಮಾಡುತ್ತಿದ್ದೀಯಾ. ಜನರ ಸಂಕಷ್ಟ ಅರಿಯುವುದು ನಾಯಕನ ಲಕ್ಷಣ. ಈ ಕೆಲಸ ಮಾಡಿದ ನಿನಗೆ ಒಳ್ಳೆಯದಾಗುತ್ತೆ ಎಂದು ಆಶೀರ್ವದಿಸಿದರು.
Read Also This Story: ಇಂಥವರಿಗೆ ಟಿಕೆಟ್ ನೀಡಬೇಡಿಯೆಂದು ಎಲ್ಲಿಯೂ ಹೇಳಿಲ್ಲ, ವಾಸ್ತವಾಂಶ ಮನವರಿಕೆ ಮಾಡಿಕೊಟ್ಟಿದ್ದೇವೆ: ಎಂ. ಪಿ. ರೇಣುಕಾಚಾರ್ಯ
ದಾವಣಗೆರೆ ಜಿಲ್ಲೆಯಲ್ಲಿ ಪಾದಯಾತ್ರೆ ನಡೆಸುವ ಮೂಲಕ ಗ್ರಾಮ ಗ್ರಾಮಗಳ, ನಗರ ಪ್ರದೇಶದ ಜನರ ಪ್ರೀತಿ, ವಿಶ್ವಾಸ ಸಂಪಾದನೆ ಮಾಡಿರುವ ವಿನಯ್ ಕುಮಾರ್ ಈಗ ಎಲ್ಲರಿಗೂ ಚಿರಪರಿಚಿತ. ನೂರಾರು ಹಳ್ಳಿಗಳಿಗೆ ಹೋಗಿ ಜನರ ಸಮಸ್ಯೆ
ಆಲಿಸಿ ಪರಿಹರಿಸುವ ಹಾಗೂ ತನ್ನ ಧ್ಯೇಯೋದ್ದೇಶಗಳನ್ನು ತಿಳಿಸಿಕೊಡುವ ಮೂಲಕ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದರು. ಪಾದಯಾತ್ರೆ ಯಾವಾಗ ಆರಂಭಿಸಿ, ಎಷ್ಟು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ತೆರಳಲಾಯಿತು. ಜನರ ಸ್ಪಂದನೆ ಹೇಗಿತ್ತು? ಪಕ್ಷ ಸಂಘಟನೆ ಕುರಿತಂತೆ ಸಿಎಂಗೆ ಮಾಹಿತಿ ನೀಡಿದರು. ವಿನಯ್ ಕುಮಾರ್ ಹೇಳುತ್ತಿದ್ದಂತೆ ಕೇಳುತ್ತಿದ್ದ ಸಿದ್ದರಾಮಯ್ಯ ಅವರು, ವಿನಯ್ ಕುಮಾರ್ ಕಾರ್ಯಕ್ಕೆ ಅಭಿನಂದಿಸಿದರು.
ಎಸ್. ಎಸ್., ಎಸ್ಎಸ್ಎಂ ಜೊತೆ ಚರ್ಚೆ:
ದಾವಣಗೆರೆ ಜಿಲ್ಲೆಯ ಎಲ್ಲಾ ಮುಖಂಡರ ವಿಶ್ವಾಸ ಗಳಿಸುವ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದೇನೆ. ಅವರೂ ಸಹ ಉತ್ತಮವಾಗಿ ಪ್ರತಿಕ್ರಿಯಿಸಿದ್ದು, ಸೂಕ್ತ ಸ್ಪಂದನೆ ನೀಡಿದ್ದಾರೆ ಎಂಬ ಮಾಹಿತಿಯನ್ನು ಸಿಎಂಗೆ ವಿನಯ್ ಕುಮಾರ್ ತಿಳಿಸಿದರು.
ಭಾರತೀಯ ಯುವ ಕಾಂಗ್ರೆಸ್ ಔಟ್ರೀಚ್ ವಿಭಾಗದ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕುರಿತಂತೆಯೂ ಮಾಹಿತಿ ನೀಡಿದ ವಿನಯ್ ಕುಮಾರ್ ಅವರು ಪಾದಯಾತ್ರೆ ನನಗೆ ಹೊಸ ಅನುಭವ ನೀಡಿತು. ನೀವು ಪಾದಯಾತ್ರೆ
ನಡೆಸಿದ್ದು ನನಗೆ ಪ್ರೇರಣೆ. ರಾಹುಲ್ ಗಾಂಧಿ ಅವರ ಭಾರತ್ ಜೊಡೋ ಯಾತ್ರೆಯೂ ಸ್ಪೂರ್ತಿ ಕೊಟ್ಟಿತು. ಪಾದಯಾತ್ರೆಯುದ್ದಕ್ಕೂ ಹೊಸ ಹೊಸ ವಿಚಾರಗಳು ಗಮನಕ್ಕೆ ಬಂದವು, ಜನರು ತೋರಿದ ಪ್ರೀತಿ ನನಗೆ ಹೊಸ ಉತ್ಸಾಹ ತಂದಿದೆ ಎಂದು ಸಿದ್ದರಾಮಯ್ಯರಿಗೆ ಹೇಳಿದರು.
ಮಹಾದೇವಪ್ಪ ಜೊತೆ ಚರ್ಚೆ:
ಇನ್ನು ಪಕ್ಕದಲ್ಲಿ ಕುಳಿತಿದ್ದ ಸಚಿವ ಹೆಚ್. ಸಿ. ಮಹಾದೇವಪ್ಪ ಅವರೂ ಸಹ ವಿನಯ್ ಕುಮಾರ್ ಅವರ ಮೆಚ್ಚುಗೆ ಮಾತನಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ವಿನಯ್ ಕುಮಾರ್ ಪಾದಯಾತ್ರೆ ನಡೆಸುವ ಮೂಲಕ ಜನಪ್ರಿಯರಾಗಿದ್ದಾರೆ.
ಈ ಹುಡುಗ ಒಳ್ಳೆಯ ಕೆಲಸ ಮಾಡುತ್ತಿದ್ದಾನೆ. ಪಾದಯಾತ್ರೆ ಮೂಲಕ ಎಲ್ಲರನ್ನೂ ಸೆಳೆದಿದ್ದಾರೆ ಎಂಬ ಮಾಹಿತಿಯನ್ನೂ ಸಿದ್ದರಾಮಯ್ಯರಿಗೆ ಸ್ವತಃ ಮಹಾದೇವಪ್ಪ ಅವರೇ ನೀಡಿದರು. ಆ ಬಳಿಕ ವಿನಯ್ ಕುಮಾರ್ ಜೊತೆ ಮಾತುಕತೆಯನ್ನೂ ನಡೆಸಿದರು.
ಭೈರತಿ ಸುರೇಶ್ ರೊಂದಿಗೆ ಮಾತುಕತೆ:
ಇನ್ನು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಜೊತೆಯೂ ವಿನಯ್ ಕುಮಾರ್ ಮಾತುಕತೆ ನಡೆಸಿದರು. ಪಕ್ಷ ಸಂಘಟನೆ ಹಾಗೂ ಪಾದಯಾತ್ರೆ ಕುರಿತಂತೆ ಮಾಹಿತಿ ನೀಡಿದರು. ಭೈರತಿ ಸುರೇಶ್ ಅವರೂ ಸಹ ಪಾದಯಾತ್ರೆ ಬಗ್ಗೆ ಮೆಚ್ಚುಗೆಯ ಮಾತು ಆಡಿದರು. ಮಾತ್ರವಲ್ಲ, ವಿನಯ್ ಕುಮಾರ್ ಜೊತೆ ಸಮಾಲೋಚನೆ ನಡೆಸಿದರು.
ಇನ್ನು ಸಮಾವೇಶಕ್ಕೆ ತೆರಳಿದ್ದ ವಿನಯ್ ಕುಮಾರ್ ಅವರನ್ನು ಗುರುತಿಸುವಂತೆ ಮಾಡಿದ್ದು ಪಾದಯಾತ್ರೆ. ಕಾಂಗ್ರೆಸ್ ಮುಖಂಡರು, ಸಚಿವರು, ಶಾಸಕರೆಲ್ಲರೂ ವಿನಯ್ ಕುಮಾರ್ ಅವರ ಪಾದಯಾತ್ರೆ ಕುರಿತಂತೆ ಮಾತನಾಡಿದ್ದು ವಿಶೇಷವಾಗಿತ್ತು.
ಮಾತ್ರವಲ್ಲ, ವಿನಯ್ ಕುಮಾರ್ ಎದುರು ಸಿಕ್ಕಾಗ ಕೂಡ ಪ್ರಶಂಸೆಯ ಮಾತುಗಳನ್ನಾಡುವ ಮೂಲಕ ಕೊಂಡಾಡಿದರು.
ಪಾದಯಾತ್ರೆ ಸ್ಪೆಷಾಲಿಟಿ ಏನು…?
ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಹಳ್ಳಿಗಳಲ್ಲಿ ಸುತ್ತಾಡಿ ಜನರ ನಾಡಿಮಿಡಿತ, ಗ್ರಾಮೀಣ ಸಮಸ್ಯೆಗಳನ್ನು ಅರಿಯುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬರುತ್ತಿರುವ ವಿನಯ್ ಕುಮಾರ್ ಅವರು ಪಾದಯಾತ್ರೆ ಶುರು ಮಾಡಿದ್ದು ಡಿಸೆಂಬರ್ 18ರಂದು.
ವಿನಯ ಮಾರ್ಗ ಟ್ರಸ್ಟ್ ವತಿಯಿಂದ ಜಗಳೂರು ತಾಲ್ಲೂಕಿನ ಚಿಕ್ಕ ಉಜ್ಜಿನಿ ಗಡಿ ಗ್ರಾಮದಿಂದ ‘ ಏನಯ ನಡಿಗೆ ಹಳ್ಳಿ ಕಡೆಗೆ ವಿನೂತನ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದರು. ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಾಡಾ ಸಮೀಪದ ಕೊಗ್ಗನೂರು ಗ್ರಾಮದಲ್ಲಿ ಜ. 29ಕ್ಕೆ ಮುಕ್ತಾಯವಾಗಲಿದೆ.
ವಿನಯ್ ಕುಮಾರ್ ಏನಂದ್ರು…?
ಇನ್ನು ಸುದ್ದಿಕ್ಷಣ ಮೀಡಿಯಾ ಜೊತೆ ಮಾತನಾಡಿದ ವಿನಯ್ ಕುಮಾರ್ ಅವರು, ಚಿತ್ರದುರ್ಗದಲ್ಲಿ ಸಿಎಂ ಸಿದ್ದರಾಮಯ್ಯರ ಅವರ ಬಳಿ ಚರ್ಚಿಸಿದೆ. ಪಾದಯಾತ್ರೆ ಕುರಿತಂತೆ ಮಾಹಿತಿ ನೀಡಿದೆ ಎಂದು ತಿಳಿಸಿದರು.
ಆಗ ಸಿದ್ದರಾಮಯ್ಯ ಅವರು ಶಹಬ್ಬಾಸ್ ಗಿರಿ ನೀಡಿದರು. ಮಹಾದೇವಪ್ಪ ಅವರೂ ಪ್ರಶಂಸೆ ವ್ಯಕ್ತಪಡಿಸಿದರು. ನಾಡಿನ ದೊರೆಯೇ ಈ ಬಗ್ಗೆ ಖುಷಿ ವ್ಯಕ್ತಪಡಿಸಿದ್ದು, ಮೆಚ್ಚುಗೆಯ ಮಾತನಾಡಿದ್ದು ತುಂಬಾ ಸಂತೋಷ ತಂದಿದೆ. ಪಾದಯಾತ್ರೆ ನಡೆಸಿದ್ದರಿಂದ ಹೊಸ ಅನುಭವ ನೀಡಿತಲ್ಲದೇ, ಸಮಸ್ಯೆಗಳು ಅನಾವರಣಗೊಂಡವು. ಸಿದ್ದರಾಮಯ್ಯರು, ಮಹಾದೇವಪ್ಪ, ಭೈರತಿ ಸುರೇಶ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು. ಇದು ನನಗೆ ಖುಷಿಯ ಕ್ಷಣ ಎಂದು ಪ್ರತಿಕ್ರಿಯೆ ನೀಡಿದರು.