Home ಕ್ರೈಂ ನ್ಯೂಸ್ 9/11 ದಾಳಿ: 25 ವರ್ಷಗಳ ಬಳಿಕ ಬಯಲಾಯಿತು ಶಂಕಿತ ಒಮರ್ ಅಲ್-ಬಯೌಮಿ ಅಲ್-ಖೈದಾ ನಂಟು ಮತ್ತು ಸೌದಿ ನಂಟಿನ ರಹಸ್ಯ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

9/11 ದಾಳಿ: 25 ವರ್ಷಗಳ ಬಳಿಕ ಬಯಲಾಯಿತು ಶಂಕಿತ ಒಮರ್ ಅಲ್-ಬಯೌಮಿ ಅಲ್-ಖೈದಾ ನಂಟು ಮತ್ತು ಸೌದಿ ನಂಟಿನ ರಹಸ್ಯ!

Share
ಶಂಕಿತ
Share

ವಾಷಿಂಗ್ಟನ್: ಅಮೆರಿಕದ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿರುವ 25 ವರ್ಷಗಳ ಹಿಂದಿನ 9/11 (ಸೆಪ್ಟೆಂಬರ್ 11) ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಹೊಸ ಮತ್ತು ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.

ಈ ದಾಳಿಯ ಸಂಚಿನಲ್ಲಿ ಭಾಗಿಯಾಗಿದ್ದ ಶಂಕಿತ ಒಮರ್ ಅಲ್-ಬಯೌಮಿ ಎಂಬಾತನಿಗೆ ಸೌದಿ ಅರೇಬಿಯಾ ಸರ್ಕಾರದ ಉನ್ನತ ಅಧಿಕಾರಿಗಳು ಹಾಗೂ ಅಲ್-ಖೈದಾ ಉಗ್ರರ ಜೊತೆ ನೇರ ನಂಟಿರುವುದು ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (BBC) ತನಿಖೆಯಿಂದ ಬಹಿರಂಗಗೊಂಡಿದೆ.

ಏನಿದು ಹೊಸ ವೀಡಿಯೋ ಮತ್ತು ತನಿಖೆ?

ಬಿಬಿಸಿ ನಡೆಸಿದ ತನಿಖೆಯ ಪ್ರಕಾರ, ಎಫ್‌ಬಿಐ ಸಂಸ್ಥೆಯು 2001ರ ದಾಳಿಯ ಕೆಲವೇ ದಿನಗಳಲ್ಲಿ ವಶಪಡಿಸಿಕೊಂಡಿದ್ದ ಆದರೆ ಇದುವರೆಗೆ ಸಾರ್ವಜನಿಕವಾಗಿ ಬಿಡುಗಡೆಯಾಗದ ಕೆಲವು ದೃಶ್ಯಗಳು ಈಗ ಹೊರಬಂದಿವೆ. ಈ ವಿಡಿಯೋಗಳಲ್ಲಿ ಒಮರ್ ಅಲ್-ಬಯೌಮಿ, ಮುಂದೆ ಅಲ್-ಖೈದಾ ನಾಯಕನಾಗH ಬೆಳೆದ ಅನ್ವರ್ ಅಲ್-ಅವ್ಲಾಕಿ ಜೊತೆ ಅಪ್ಪಿಕೊಳ್ಳುತ್ತಿರುವುದು ಹಾಗೂ ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಂದಿಗೆ ಸ್ಯಾನ್ ಡಿಯಾಗೋ ಬಳಿ ಮಿಲಿಟರಿ ಶೈಲಿಯ ‘ಪೇಂಟ್‌ಬಾಲ್’ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿರುವುದು ದಾಖಲಾಗಿದೆ.

ವಿಮಾನದ ರೇಖಾಚಿತ್ರದ ‘ಸ್ಮೋಕಿಂಗ್ ಗನ್’ ಸಾಕ್ಷ್ಯ

2001ರ ಸೆಪ್ಟೆಂಬರ್ 21ರಂದು ಬ್ರಿಟನ್ ಪೊಲೀಸರು ಬರ್ಮಿಂಗ್‌ಹ್ಯಾಮ್‌ನಲ್ಲಿ ಬಯೌಮನನ್ನು ವಶಕ್ಕೆ ಪಡೆದಾಗ, ಆತನ ಬಳಿ ಸಾವಿರಾರು ದಾಖಲೆಗಳು ಮತ್ತು ವೀಡಿಯೊ ಟೇಪ್‌ಗಳು ಸಿಕ್ಕಿದ್ದವು. ಅದರಲ್ಲಿ ವಿಮಾನದ ರೇಖಾಚಿತ್ರ ಹಾಗೂ ಗುರಿಯೊಂದರ ಎತ್ತರ ಮತ್ತು ದೂರಕ್ಕೆ ಸಂಬಂಧಿಸಿದ ಗಣಿತದ ಲೆಕ್ಕಾಚಾರಗಳಿರುವ ನೋಟ್‌ಬುಕ್ ಪುಟ ಪತ್ತೆಯಾಗಿತ್ತು. ಆದರೆ ಬ್ರಿಟಿಷ್ ಮತ್ತು ಎಫ್‌ಬಿಐ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ಈ ಪ್ರಮುಖ ಸಾಕ್ಷ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗಿರಲಿಲ್ಲ. ಇದು 9/11 ದಾಳಿಯ ಮುಂಚಿತವಾದ ಸಂಚಿನ ಬಗ್ಗೆ ಬಯೌಮಿಗೆ ಸಂಪೂರ್ಣ ಅರಿವಿತ್ತು ಎಂಬುದನ್ನು ತೋರಿಸುತ್ತದೆ ಎಂದು ಫೆಡರಲ್ ನ್ಯಾಯಾಧೀಶರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಎಫ್‌ಬಿಐ ಏಕೆ ತನಿಖೆ ಮುಂದುವರಿಸಲಿಲ್ಲ?

ಸ್ಯಾನ್ ಡಿಯಾಗೋದ ಎಫ್‌ಬಿಐ ಏಜೆಂಟ್‌ಗಳು ಬ್ರಿಟನ್‌ನಲ್ಲಿ ವಶಪಡಿಸಿಕೊಂಡ ಸಾಕ್ಷ್ಯಗಳನ್ನು ಕೇಳಿದರೂ ಅವರಿಗೆ ಸೂಕ್ತ ಮಾಹಿತಿ ಸಿಕ್ಕಿರಲಿಲ್ಲ. ಸೌದಿ ಅಧಿಕಾರಿಗಳನ್ನು ಸಂದರ್ಶಿಸಲು ಮುಂದಾದ ತನಿಖಾಧಿಕಾರಿಗಳಿಗೆ ತಡೆ ಒಡ್ಡಲಾಗಿತ್ತು ಎಂದು ಮಾಜಿ ಎಫ್‌ಬಿಐ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಸೌದಿ ಅರೇಬಿಯಾ ಈ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದು, ಬಯೌಮಿ ಕೂಡ ತಾನು ಯಾವುದೇ ಉಗ್ರನಲ್ಲ ಎಂದು ಹೇಳುತ್ತಾ ಬಂದಿದ್ದಾನೆ. ಪ್ರಸ್ತುತ 9/11 ಸಂತ್ರೃತರ ಕುಟುಂಬಗಳು ಸೌದಿ ಅರೇಬಿಯಾ ವಿರುದ್ಧ ಹೂಡಿರುವ 1 ಟ್ರಿಲಿಯನ್ ಡಾಲರ್ ಮೊಕದ್ದಮೆಯಲ್ಲಿ ಈ ಹೊಸ ಸಾಕ್ಷ್ಯಗಳು ನಿರ್ಣಾಯಕ ತಿರುವು ಪಡೆದುಕೊಂಡಿವೆ.

Share

Leave a comment

Leave a Reply

Your email address will not be published. Required fields are marked *