SUDDIKSHANA KANNADA NEWS/ DAVANAGERE/ DATE:06-01-2024
ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯ ವತಿಯಿಂದ ವಿಕಲಚೇತನ ಫಲಾನುಭವಿಗಳು ಆನ್‍ಲೈನ್ ಮೂಲಕ 5 ಫಲಾನುಭವಿ ಆಧಾರಿತ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಸೇವಾಸಿಂಧು, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಸಿಟಿಜೆನ್ಸ್ (Sevasindhu: URL:https://sevasindhu.karnataka.gov.in/) ಫೊರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜ.30 ಕೊನೆಯದಿನವಾಗಿರುತ್ತದೆ. ಈ ಯೋಜನೆಗಳನ್ನು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಒನ್ ಮೂಲಕ ವಿಕಲಚೇತನರಿಂದ ಅರ್ಜಿ ಸಲ್ಲಿಸಲು ವಿ.ಆರ್.ಡಬ್ಲ್ಯೂಗಳಿಗೆ ನಗರ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಯು.ಆರ್.ಡಬ್ಲ್ಯೂಗಳಿಗೆ ಅರ್ಜಿ ಸಲ್ಲಿಸಬಹುದು.
5 ಫಲಾನುಭವಿ ಆಧಾರಿತ ಆನ್‍ಲೈನ್ ವೇದಿಕೆಯಲ್ಲಿ ಅಳವಡಿಸಲಾಗಿರುವ ಯೋಜನೆಗಳ ಪಟ್ಟಿ : ಎಸ್.ಎಸ್.ಎಲ್.ಸಿಯಲ್ಲಿ ಮತ್ತು ನಂತರ ಓದುತ್ತಿರುವ ದೃಷ್ಠಿದೋಷವುಳ್ಳ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಯೋಜನೆ, ದೈಹಿಕವಾಗಿ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಮೋಟಾರೀಕೃತ ದ್ವಿಚಕ್ರ ವಾಹನ ಯೋಜನೆ, ದೃಷ್ಠಿದೋಷವುಳ್ಳ ವ್ಯಕ್ತಿಗಳಿಗಾಗಿ ಬ್ರೈಲ್ ಕಿಟ್, ಶ್ರವಣದೋಷವುಳ್ಳ ಸ್ವಯಂ ಉದ್ಯೋಗಿಗಳಿಗೆ ಹೊಲಿಗೆ ಯಂತ್ರಗಳು, ಸಾಧನಗಳು ಮತ್ತು ಉಪಕರಣಗಳನ್ನು ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಸಹಾಯವಾಣಿ ಕೇಂದ್ರ 08192-263939 ಹಾಗೂ ಹೊನ್ನಾಳಿ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ಶೈಲಜಾ ಕೆ.ಎಂ. ಮೊ.ಸಂ: 9886366809, ಚನ್ನಗಿರಿ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಕೆ ಸುಬ್ರಮಣ್ಯಂ ಮೊ.ಸಂ: 9945738141, ಜಗಳೂರು ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಎಂ ಕೆ ಶಿವನಗೌಡ ಮೊ.ಸಂ: 9902105734, ಹರಿಹರ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಶಶಿಕಲಾ ಟಿ. ಮೊ.ಸಂ: 9945458058, ದಾವಣಗೆರೆ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಚನ್ನಪ್ಪ. ಬಿ ಮೊ.ಸಂ: 9590829024 ಸಂಪರ್ಕಿಸಲು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ. ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ.