SUDDIKSHANA KANNADA NEWS/ DAVANAGERE/ DATE:16-03-2025
ದಾವಣಗೆರೆ: ಬ್ಯಾಂಕ್ ದರೋಡೆ ಮಾಡಿ ತಪ್ಪಿಸಿಕೊಳ್ಳುತ್ತಿದ್ದ ಮೂವರು ಖತರ್ನಾಕ್ ಅಸಾಮಿಗಳು ಬಂಧನವಾಗಿರುವುದು ಇದೇ ಮೊದಲು. ದೇಶದ ವಿವಿಧ ರಾಜ್ಯಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಆದ್ರೆ, ದಾವಣಗೆರೆ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ಸೆರೆಸಿಕ್ಕಿದ್ದಾರೆ.
ಕರ್ನಾಟಕದಲ್ಲಿ 2014 ರಿಂದ 2024ರವರೆಗೆ ಕರ್ನಾಟಕ ರಾಜ್ಯದ ಹಲವು ಕಡೆ ಬ್ಯಾಂಕ್ ಗಳು ಸೇರಿದಂತೆ ಇತರೆ ಸ್ವತ್ತಿನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕ ರಾಜ್ಯವಲ್ಲದೇ ಹೊರ ರಾಜ್ಯಗಳಾದ ತಮಿಳುನಾಡು, ಉತ್ತರ ಪ್ರದೇಶ,
ಆಂದ್ರಪ್ರದೇಶ, ತೆಲಂಗಾಣ, ಮದ್ಯಪ್ರದೇಶ, ದೆಹಲಿ ಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ – ನ್ಯಾಮತಿ ತಾಲೂಕಿನ ಹೆಚ್. ಕಡದಕಟ್ಟೆ ಬಳಿ ನ್ಯಾಮತಿ, ಹೊನ್ನಾಳಿ, ಡಿಸಿಆರ್ ಬಿ ಘಟಕದ ಪೊಲೀಸರ ಆಪರೇಷನ್ ನಲ್ಲಿ ಬಂಧಿಸಲಾಗಿದೆ. ಉತ್ತರ ಪ್ರದೇಶ ರಾಜ್ಯದ ಗುಡ್ಡು ಅಲಿಯಾಸ್ ಗುಡ್ಡು ಕಾಲಿಯಾ, ಅಸ್ಲಾಂ ಅಲಿಯಾಸ್ ಟನ್, ಕಮರುದ್ದೀನ್ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಂಧನ ಆಗಿದ್ದಾರೆ.
ಉತ್ತರ ಪ್ರದೇಶದ ಬಾದಾಯ್ ಜಿಲ್ಲೆಯ ದಾಟಗಂಜ್ ತಾಲೂಕಿನ ಕಕ್ರಾಳ ಗ್ರಾಮದ ಹಣ್ಣಿನ ವ್ಯಾಪಾರಿ ಗುಡ್ಡು ಅಲಿಯಾಸ್ ಗುಡ್ಡು ಕಾಲಿಯಾ ಎಂಬಾತನ ಕಾಲಿಗೆ ಪಿಸ್ತೂಲ್ ನಿಂದ ಗುಂಡು ಹೊಡೆದಿದ್ದಾರೆ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ಈತನಿಗೆ ಪಾಠ ಕಲಿಸಿದ್ದಾರೆ.
ಈ ಘಟನೆ ನಡೆಯುತ್ತಲೇ ನ್ಯಾಮತಿ ಪೊಲೀಸ್ ಇನ್ ಸ್ಪೆಕ್ಟರ್ ಅವರು ಗಾಯಗೊಂಡ ಆರೋಪಿ ಮತ್ತು ಠಾಣಾ ಸಿಬ್ಬಂದಿ ಆನಂದ ರವರನ್ನು ನ್ಯಾಮತಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿಕೊಟ್ಟಿದ್ದರು. ನಂತರ ಹಿಡಿದುಕೊಂಡಿದ್ದ
ಉಳಿದ ಆಸಾಮಿಗಳು ಹೆಸರು ವಿಳಾಸ ವಿಚಾರಿಸಲಾಗಿ ಆರೋಪಿಗಳು ಎಲ್ಲಿಯವರು ಎಂಬುದು ತಿಳಿದು ಬಂದಿದೆ.
ಉತ್ತರ ಪ್ರದೇಶ ರಾಜ್ಯದ ಕಕ್ರಾಳ ಗ್ರಾಮದವರಾದ ಹಣ್ಣಿನ ವ್ಯಾಪಾರಿ ಹಜರತ್ ಅಲಿ (50), ಅಸ್ಲಾಂ ಅಲಿಯಾಸ್ ಟನ್ ( 55), ಬರಲಿ ಮಂಡೆಲ್ ತಾಲೂಕಿನ ಕಮರುದ್ದೀನ್ ಅಲಿಯಾಸ್ ಬಾಬು (40) ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿ ಆಗಿದ್ದಾರೆ.
ಸ್ಥಳದಲ್ಲಿದ್ದ ಕಾರುಗಳನ್ನು ಪರೀಶಿಲಿಸಿದಾಗ ಯುಪಿ-24-ಎಯು-1365 ನೇ ನೊಂದಣಿ ಸಂಖ್ಯೆಯ ಬಿಳಿ ಬಣ್ಣದ ಮಾರುತಿ ಸುಜುಕಿ ಕಂಪನಿಯ ಯರಟೀಗಾ ಕಾರು ಆಗಿದ್ದರೆ, ಮತ್ತೊಂದು ಯುಪಿ-16-ಎಎಸ್-5712 ನೇ ನೊಂದಾಣಿ ಸಂಖ್ಯೆಯ ಗ್ರೇ ಬಣ್ಣದ ಮಹಿಂದ್ರಾ ಕಂಪನಿಯ XUV 500 ಮಾಡಲ್ ನ ಕಾರು ಆಗಿದೆ.
ನಾಪತ್ತೆಯಾಗಿರುವ ಆರೋಪಿಗಳು ಬದಾಯೂ ಜಿಲ್ಲೆಯ ಬಚೌರ ಗ್ರಾಮದ ರಾಜಾರಾಮ್, ನೌಲಿ ಗ್ರಾಮದ ಬಾಬುಷಾ, ಕೋಲಾರ ಜಿಲ್ಲೆಯ ಮಾಲೂರು ಗ್ರಾಮದವನು ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಬಂಧಿತ ಆರೋಪಿತರುಗಳನ್ನು ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ಮಾಡಿದಾಗ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ಆರೋಪಿತರು ಈ ಹಿಂದೆ ಬೇರೆ ಬೇರೆ ರಾಜ್ಯಗಳಲ್ಲಿ ಹಾಗೂ ಕರ್ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಬ್ಯಾಂಕ್ ಗಳನ್ನು
ದರೋಡೆ ಮಾಡಿದ್ದು, ಮತ್ತೆ ಬ್ಯಾಂಕ್ ಗಳನ್ನು ದರೋಡೆ ಮಾಡಲು ವಾರದ ಹಿಂದೆ ಕರ್ನಾಟಕ ರಾಜ್ಯಕ್ಕೆ ಬಂದಿದ್ದಾರೆ. ದಾವಣಗೆರೆ ಬಳಿ ಅಲ್ಲಿ ಇಲ್ಲಿ ಉಳಿದುಕೊಂಡು ದರೋಡೆ ಮಾಡಲು ಬ್ಯಾಂಕ್ ಗಳನ್ನು ಹುಡುಕಿದ್ದಾರೆ. ಕಳೆದ ಎರಡು ದಿನಗಳಿಂದ ಸವಳಂಗ ಗ್ರಾಮದಲ್ಲಿರುವ ಎಸ್ ಬಿ ಐ ಬ್ಯಾಂಕ್ ಬಳಿ ತಿರುಗಾಡಿ ಮಾಹಿತಿಯನ್ನು ತಿಳಿದುಕೊಂಡು ಈ ದಿನ ರಾತ್ರಿ ಸವಳಂಗ ಗ್ರಾಮದ ಎಸ್ ಬಿ ಐ ಬ್ಯಾಂಕ್ ನ್ನು ದರೋಡೆ ಮಾಡಲು ಪೂರ್ವ ತಯಾರು ಮಾಡಿಕೊಂಡು ಹರಿಹರ-ಶಿವಮೊಗ್ಗ ರಸ್ತೆಯಲ್ಲಿ ಎರಡು ಕಾರಿನಲ್ಲಿ ಬಂದಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾರೆ.
ಆರೋಪಿತರಿಂದ ಕೃತ್ಯವೆಸಗಲು ಬಳಸಿದ್ದ ಎರಡು ಕಾರುಗಳು 4 ಜೀವಂತ ಗುಂಡುಗಳು, 1 ಆಕ್ಸಿಜನ್ ಸಿಲೆಂಡರ್ ರೇಗ್ಯೂಲೇಟರ್, 3 ಕಬ್ಬಿಣದ ರಾಡ್, 5 ಪಾಕೆಟ್ ಕಾರದ ಪುಡಿ, 5 ಮಂಕಿ ಕ್ಯಾಪ್, 5 ಜೊತೆ ಹ್ಯಾಂಡ್ ಗ್ಲೌಜ್, ಒಂದು ಮಚ್ಚುನ್ನು ವಶಪಡಿಸಿಕೊಂಡಿದ್ದಾರೆ.