ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಬ್ರೆಜಿಲ್‌ ಯುವ ಬಾಡಿಬಿಲ್ಡರ್‌ ಹೃದಯಾಘಾತದಿಂದ ಸಾವು!

On: September 4, 2024 4:33 PM
Follow Us:
---Advertisement---

ಬ್ರೆಜಿಲ್: ಬ್ರೆಜಿಲ್ ನ ಯುವ ದೇಹದಾರ್ಢ್ಯಪಟು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಭಾನುವಾರ (ಸೆ.01) ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮ್ಯಾಥ್ಯೂಸ್ ಪವ್ಲಾಕ್(19ವರ್ಷ) ಕೇವಲ ಐದು ವರ್ಷಗಳಲ್ಲಿ ತನ್ನ ದೇಹವನ್ನು ಕಟ್ಟುಮಸ್ತುಗೊಳಿಸಿ ಯುವ ದೇಹದಾರ್ಢ್ಯ ಪಟುವಾಗಿ ಬೆಳೆದಿದ್ದ. ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ Bodybuilding ವಲಯದಲ್ಲಿ ಯುವ ತಾರೆಯಾಗಿ ಗಮನ ಸೆಳೆದಿದ್ದರು.

2023ರಲ್ಲಿ ನಡೆದ U23 ಸ್ಪರ್ಧೆಯಲ್ಲಿ ಮ್ಯಾಥ್ಯೂ ವಿಜೇತನಾಗಿದ್ದರು. ಇತ್ತೀಚೆಗೆ ನಡೆದ ಬ್ರೆಜಿಲ್ ನ ಸ್ಥಳೀಯ ಸ್ಪರ್ಧೆಗಳಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು ಎನ್ನಲಾಗಿದೆ.

ಮ್ಯಾಥ್ಯೂ ತನ್ನ ಸ್ನಾಯು ಅಂಗಾಂಶದ ಬೆಳವಣಿಗೆ ಹೆಚ್ಚಿಸುವ ಮತ್ತು ಅಂಗ ಸೌಷ್ಠವ ಬಲಿಷ್ಠಗೊಳಿಸಲು ಅನಾಬೋಲಿಕ್ ಸ್ಟಿರಾಯ್ಡ್ ಅನ್ನು ನಿರಂತರವಾಗಿ ತೆಗೆದುಕೊಳ್ಳುತ್ತಿದ್ದು, ಇದು ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ಊಹಾಪೋಹಾ ವರದಿಯಾಗಿದೆ.

Join WhatsApp

Join Now

Join Telegram

Join Now

Leave a Comment