SUDDIKSHANA KANNADA NEWS/ DAVANAGERE/ DATE:14_07_2025
ದಾವಣಗೆರೆ: 2023-24 ಮತ್ತು 2024-25ನೇ ಸಾಲಿನಲ್ಲಿ ತೇರ್ಗಡೆಯಾದ ಪದವಿ, ಸ್ನಾತಕೋತ್ತರ ಹಾಗೂ ಡಿಪ್ಲೋಮಾ ಅರ್ಹತೆ ಹೊಂದಿದವರು ಯುವನಿಧಿ ಯೋಜನೆಯ ನಿರುದ್ಯೋಗಿ ಭತ್ಯೆ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
Read Also This Story: ಡಿಜಿಟಲ್ ಸಾಲ ನೀಡುವ ಅಪ್ಲಿಕೇಶನ್‌ನಿಂದ ವೈಯಕ್ತಿಕ ಸಾಲ ಪಡೆಯುತ್ತೀರಾ: 5 ಎಚ್ಚರಿಕೆ ಪಾಲಿಸ್ಲೇಬೇಕು!
ಅರ್ಜಿ ಸಲ್ಲಿಸಲು ಆಗಸ್ಟ್ 7 ಕೊನೆಯ ದಿನವಾಗಿರುತ್ತದೆ. ಯುವನಿಧಿ ವಿಶೇಷ ನೋಂದಣಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ಜಿಲ್ಲೆಯಾದ್ಯಂತ ಇರುವ ಪದವಿ ಕಾಲೇಜುಗಳು
ಹಾಗೂ ಡಿಪ್ಲೋಮಾ ಕಾಲೇಜುಗಳು ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ವಿಶೇಷ ನೋಂದಣಿ ಕೌಂಟರ್ ತೆರೆಯಲಾಗಿದೆ. ಅಲ್ಲದೇ ಗ್ರಾಮಒನ್, ಕರ್ನಾಟಕಒನ್, ದಾವಣಗೆರೆಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲೂ ನಿರಂತರವಾಗಿ ಯುವನಿಧಿ ನೋಂದಣಿ ಮಾಡಲಾಗುತ್ತದೆ.
ನಿರುದ್ಯೋಗಿ ಯುವಕ-ಯುವತಿಯರು ಈ ಯುವನಿಧಿ ವಿಶೇಷ ನೋಂದಣಿ ಅಭಿಯಾನದ ಸದುಪಯೋಗವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ದಾವಣಗೆರೆ ಹಾಗೂ
ದೂರವಾಣಿ ಸಂಖ್ಯೆ: 9611396106 ನ್ನು ಸಂಪರ್ಕಿಸಲು ಉದ್ಯೋಗಾಧಿಕಾರಿ ರವೀಂದ್ರ ತಿಳಿಸಿದ್ದಾರೆ.