SUDDIKSHANA KANNADA NEWS, DAVANAGERE
DATE: 26-03-2023
ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ (NARENDRA MODI) ಅವರು ದಾವಣಗೆರೆ(DAVANAGERE) ಆಗಮನ ವೇಳೆ ಕಪ್ಪು ಬಾವುಟ ಪ್ರದರ್ಶಿಸಲು ಮುಂದಾದ ಕಾಂಗ್ರೆಸ್ (CONGRESS) ಯುವ ಘಟಕದ ಮುಖಂಡರನ್ನು ಪೊಲೀಸರು ಬಂಧಿಸಿದ ಘಟನೆ ನಗರದ ಜಯದೇವ ವೃತ್ತದಲ್ಲಿ (JAYADEVA CIRCAL) ನಡೆದಿದೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (RAHIL GANDHI)ಯವರ ಸಂಸತ್ ಸದಸ್ಯತ್ವ ಅನರ್ಹತೆ ಮಾಡಿರುವುದನ್ನು ಖಂಡಿಸಿ ಜಯದೇವ ವೃತ್ತದಲ್ಲಿ ಯುವ ಕಾಂಗ್ರೆಸ್ (CONGRESS) ವತಿಯಿಂದ ಭಾರೀ ಪ್ರತಿಭಟನೆ (PROTEST) ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಮಾತನಾಡಿ ದೇಶದಲ್ಲಿ ಸರ್ವಾಧಿಕಾರಿಯ ಆಡಳಿತ ನಡೆಯುತ್ತಿದೆ. ಇದು ದೇಶಕ್ಕೆ ಅಪಾಯಕಾರಿ. ಪ್ರಧಾನಿಯವರ ವಿರುದ್ಧ ಯಾರೂ ಸಹ ಪ್ರತಿಭಟನೆ ಮಾಡದ ರೀತಿಯ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೊಬ್ಬ ರಾಷ್ಟ್ರೀಯ ಯುವ ಕಾಂಗ್ರೆಸ್ (CONGRESS) ಸಂಚಾಲಕ ಶಾಂಜ್ ಖಾನ್ ಮಾತನಾಡಿ ದೇಶದಲ್ಲಿ ಹಿಟ್ಲರ್ ಆಡಳಿತ ಜಾರಿಯಲ್ಲಿದೆ. ಇದೆಲ್ಲರ ಅಂತ್ಯ ಸಮೀಪಿಸುತ್ತಿದೆ. ನಮ್ಮ ನಾಯಕರ ವಿರುದ್ಧದ ಷಡ್ಯಂತ್ರಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಇಡೀ ದೇಶದಲ್ಲಿ ಇದಕ್ಕೆ ಯುವ ಜನತೆ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಯುವ ಬ್ಲಾಕ್ ಘಟಕದ ಅಧ್ಯಕ್ಷ ನವೀನ್ ನಲವಾಡಿ ಮಾತನಾಡಿ ದೇಶದಲ್ಲಿ ಸದ್ಯ ಸತ್ಯ ಮಾತಾಡುವುದನ್ನು ನಿಷೇಧಿಸಿದ್ದಾರೆ, ಸತ್ಯ ಹೇಳಿದರೆ ಶಿಕ್ಷೆ ಅನ್ನೋ ಮಟ್ಟಿಗೆ ಈಗಿನ ಸರ್ಕಾರ ನಡೆದುಕೊಳ್ಳುತ್ತಿರುವುದು ನೋಡಿದರೆ ನಾವು ಯಾವ ಕಾಲಘಟ್ಟದಲ್ಲಿದ್ದೇವೆ ಎಂದು ಅರ್ಥವಾಗುತ್ತಿಲ್ಲ. ಇಂಥ ಸರ್ವಾಧಿಕಾರಿಗಳಿಗೆ ತಕ್ಕ ಪಾಠ ಕಲಿಸಲೇಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪ್ರಧಾನಿ ವಿರುಧ್ದ ಬಿತ್ತಿಪತ್ರ ಪ್ರದರ್ಶಿಸಲಾಯಿತು. ಪ್ರಧಾನಿ ಪ್ರತಿಕೃತಿ ದಹನಕ್ಕೆ ಪ್ರಯತ್ನಿಸಿದರು. ಆದರೆ ಪೊಲೀಸ್ ಇಲಾಖೆಯವರು ಅವಕಾಶ ಮಾಡಿಕೊಡದ ಕಾರಣ ಸ್ಥಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಯುವ ಕಾಂಗ್ರೆಸ್ ಮುಖಂಡರಾದ ಇಮಾಮ್ ಹುಸೇನ್, ವರುಣ್, ಫಜ್ಲೂರ್ ರಹಮಾನ್,ಶ್ರೀನಿವಾಸ್, ಕೃಷ್ಣ,ಹರೀಶ್,ಹರ್ಷ, ತಿಪ್ಪೇಸ್ವಾಮಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.