SUDDIKSHANA KANNADA NEWS/ DAVANAGERE/ DATE:23-01-2024
ದಾವಣಗೆರೆ (Davanagere): ಲೋಕಸಭೆ ಚುನಾವಣೆಗೆ ಉಳಿದಿರುವುದು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ. ಅಭ್ಯರ್ಥಿಗಳ ಘೋಷಣೆ ಸ್ವಲ್ಪ ದಿನಗಳಲ್ಲಿಯೇ ಆಗುತ್ತದೆ. ನಾನು ಡಿಸೆಂಬರ್ 18ರಿಂದ ಪಾದಯಾತ್ರೆ ನಡೆಸುತ್ತಿದ್ದೇನೆ. ದಾವಣಗೆರೆ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಉತ್ಸುಹಕನಾಗಿದ್ದೇನೆ. ನನ್ನ ಹೆಸರು ದೆಹಲಿಗೆ ಹೋಗಿದೆ. ಟಿಕೆಟ್ ಸಿಗುವ ಅವಕಾಶ ಇದೆ. ಇಲ್ಲಿಂದ ಎರಡು ಹೆಸರು ಹೋಗಿವೆ. ಹಾಗಾಗಿ, ನಿಮ್ಮ ಕೂಗು ದೆಹಲಿ ಹಾಗೂ ಬೆಂಗಳೂರಿನ ವರಿಷ್ಠರಿಗೆ ಕೇಳಿಸಬೇಕು. ಆಗ ಮಾತ್ರ ನಮಗೆ ಅವಕಾಶ ಸಿಗಲಿದೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಹಾಗೂ ಇನ್ಸೈಟ್ಸ್ ಐಎಎಸ್ ಸಂಸ್ಥಾಪಕರು ಹಾಗೂ ನಿರ್ದೇಶಕರಾದ ಜಿ. ಬಿ. ವಿನಯ್ ಕುಮಾರ್ ಕರೆ ನೀಡಿದರು.
ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿರಡೋಣಿ ಗ್ರಾಮದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ಕಾರ್ಯವೈಖರಿ ರಾಜ್ಯ ಹಾಗೂ ರಾಷ್ಟ್ರದ ಕಾಂಗ್ರೆಸ್ ನಾಯಕರ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ನೀವು ತೋರುತ್ತಿರುವ ಪ್ರೀತಿ, ವಿಶ್ವಾಸ ಕಾರಣ ಎಂದು ತಿಳಿಸಿದರು.

Read Also This Story: ಧೂಳೆಬ್ಬಿಸುತ್ತಿದೆ ವಿನಯ ಪಾದಯಾತ್ರೆ, ಕಾಲ್ನಡಿಗೆಗೆ ಸಿಗುತ್ತಿದೆ ಜನರ ಭಾರೀ ಸ್ಪಂದನೆ, ಪ್ರೀತಿ: ಕಾಂಗ್ರೆಸ್ ಯುವ ನಾಯಕ ಬೆಳೆದು ಬಂದ ರೋಚಕ ಸ್ಟೋರಿ…!
ದಾವಣಗೆರೆ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸಲು ನನ್ನ ಹೆಸರು ಮುಂಚೂಣಿಯಲ್ಲಿದೆ ಎಂಬ ಮಾಹಿತಿ ನನಗೆ ಸಿಕ್ಕಿದೆ. ದೆಹಲಿ ಹಾಗೂ ರಾಜ್ಯ ನಾಯಕರ ಕಡೆಯಿಂದ ಈ ವಿಷಯ ಗೊತ್ತಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೂ ಆದ್ಯಕೆ ಕೊಡಲಾಗುತ್ತಿದೆ. ನಾನು ಹೋದ ಕಡೆಗಳಲ್ಲಿ ತುಂಬಾ ಪ್ರೀತಿಯ ಸ್ವಾಗತ ಕೋರಲಾಗುತ್ತಿದೆ. ನೀವು ಬರಲೇಬೇಕು ಎಂದು ಒತ್ತಾಯ ಹೇರಿದ್ದರಿಂದ ಚಿರಡೋಣಿಗೆ ಬಂದಿದ್ದೇನೆ. ನೀವು ತೋರಿದ ಅದ್ಧೂರಿ ಸ್ವಾಗತ, ಪ್ರೀತಿಗೆ ಚಿರಋಣಿಯಾಗಿದ್ದೇನೆ ಎಂದರು.
ಪಾದಯಾತ್ರೆಗೆ ಭಾರೀ ಬೆಂ”ಬಲ”
ಜನರಿಗಾಗಿ, ಜನರಿಗೋಸ್ಕರ ಪಾದಯಾತ್ರೆ ಮಾಡುತ್ತಿದ್ದೇವೆ. 590ಕಿಲೋಮೀಟರ್ ಕಾಲ್ನಡಿಗೆ ಮೂಲಕ ಸಂಚರಿಸಿದ್ದೇನೆ. 300ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಡಿಸೆಂಬರ್ 18ರಿಂದ ಶುರುವಾದ ಪಾದಯಾತ್ರೆಯು ಹರಪನಹಳ್ಳಿ, ಹರಿಹರ, ಹೊನ್ನಾಳಿ, ಜಗಳೂರು, ಚನ್ನಗಿರಿಯಲ್ಲಿ ನಡೆಸಿದ ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಸುತ್ತಮುತ್ತಲಿನ ಹಳ್ಳಿಗಳಿಗೆ ಭೇಟಿ ನೀಡಿ ಜನರೊಂದಿಗೆ ಸಂವಾದ ನಡೆಸುತ್ತಿದ್ದೇನೆ. ಪರಿಚಯ ಮಾಡಿಕೊಡುತ್ತಿದ್ದೇನೆ. ವಿನಯ ನಡಿಗೆ ಹಳ್ಳಿ ಕಡೆಗೆ ಆಂದೋಲನ
ಶುರು ಮಾಡಿದ್ದೇನೆ. ದಾವಣಗೆರೆ, ಬೆಂಗಳೂರಿನಲ್ಲಿ ಕುಳಿತು ಹೇಳಿಕೆ ನೀಡುವುದು ಜನಪ್ರತಿನಿಧಿ ಲಕ್ಷಣ ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೊದಲು ನಾನು ಯಾರು, ವ್ಯಕ್ತಿತ್ವ, ಏನು ಸಾಧನೆ ಮಾಡಿದ್ದೇನೆ, ಕ್ಷೇತ್ರಕ್ಕೆ ಏನು ಮಾಡುತ್ತೇನೆ ಎಂಬುದನ್ನು ಜನರಿಗೆ ತಿಳಿಸಿಕೊಡಬೇಕು. ಆಗ ಜನರ ಸಂಕಷ್ಟ ಆಲಿಸಲು ಸುಲಭವಾಗುತ್ತದೆ ಎಂದು ಜಿ. ಬಿ. ವಿನಯ್ ಕುಮಾರ್ ವಿವರಿಸಿದರು.
ಬಡವರ ಮಕ್ಕಳು ಕಲಿಬೇಕು
ಐಎಎಸ್, ಕೆಎಎಸ್, ಐಪಿಎಸ್ ತರಬೇತಿ ನೀಡುತ್ತಿದ್ದೇನೆ. ಈಗಾಗಲೇ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಐಎಸ್, ಐಪಿಎಸ್ ಅಧಿಕಾರಿಗಳು ತಯಾರಾಗಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿಯೂ ನನ್ನ ವಿದ್ಯಾರ್ಥಿಗಳು ಡಿಸಿ, ಎಸ್ಪಿ ಆಗಿದ್ದಾರೆ. ಕೆಲವರು ಬೇರೆ ಬೇರೆ ವಿಭಾಗಗಳಲ್ಲಿಯೂ ಉನ್ನತ ಸಾಧನೆ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಡವರ ಮಕ್ಕಳು ಇಂಥ ಹುದ್ದೆಗೇರಬೇಕು ಎಂಬ ನಿಟ್ಟಿನಲ್ಲಿ ನಮ್ಮ ಇನ್ಸೈಟ್ಸ್ ಐಎಎಸ್ ಸಂಸ್ಥೆ ಶ್ರಮಿಸುತ್ತಿದೆ ಎಂದು ಹೇಳಿದರು.
ನಾನು ನವೋದಯ ಶಾಲೆಯಲ್ಲಿ ಓದಿದವನು. ಐಎಎಸ್ ಎರಡು ಬಾರಿ ಪಾಸ್ ಮಾಡಿದ್ದೇನೆ. ಆದ್ರೆ, ಕೊನೆ ಕ್ಷಣದಲ್ಲಿ ನನ್ನ ಆಯ್ಕೆ ಆಗಲಿಲ್ಲ. ಮೈಸೂರಿನಲ್ಲಿ ಎರಡು ವರ್ಷ ಪಿಡಿಒ ಆಗಿ ಕೆಲಸ ನಿರ್ವಹಿಸಿದ್ದೇನೆ. ಅಲ್ಲಿನ ಭ್ರಷ್ಟಾಚಾರಕ್ಕೆ ಬೇಸತ್ತು ಐಎಎಸ್ ಪಾಸ್ ಮಾಡಬೇಕು ಎಂದು ಹೊರಬಂದೆ. ಆದ್ರೆ, ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುತ್ತಿದ್ದೇನೆ. 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇದು ಶಿಕ್ಷಣ ಕ್ಷೇತ್ರಕ್ಕೆ ನಾನು ಕೊಡುತ್ತಿರುವ ಸೇವೆ ಜೊತೆಗೆ ದಾವಣಗೆರೆಗೆ
ಕೊಟ್ಟ ದೊಡ್ಡ ಹೆಗ್ಗಳಿಕೆ ಎಂದರು.
ಸಿದ್ಧರಾಮಯ್ಯರ ಸಿದ್ಧಾಂತ ಫಾಲೋ
ಸಿಎಂ ಸಿದ್ದರಾಮಯ್ಯ ಅವರು ಲೋಹಿಯಾ ಸಿದ್ಧಾಂತ ಅನುಸರಿಸುತ್ತಾರೆ. ಅವರ ದಾರಿಯಲ್ಲಿಯೇ ನಾನು ಹೋಗುತ್ತಿದ್ದೇನೆ. ನಾನು ಪುಸ್ತಕ ಓದುವ ಹುಚ್ಚು ಬೆಳೆಸಿಕೊಂಡೆ. ಪುಸ್ತಕ ಓದು ಶುರು ಮಾಡಿದಾಗಿನಿಂದ ಬೇರೆ ಬೇರೆ ದೇಶಗಳು, ಮಹನೀಯರು, ಸಾಧಕರು, ವಿಶ್ವದ ಹಲವು ವಿಚಾರಗಳು ಗೊತ್ತಾಗುತ್ತವೆ. ನಾನು ಪುಸ್ತಕಗಳನ್ನು ಓದಿದ ಬಳಿಕ ನಾನು ಆರರಿಂದ ಏಳು ವರ್ಷ ಕಠಿಣ ಅಭ್ಯಾಸ ಮಾಡಿದೆ. ಈಗ ಅದು ಸಾಧ್ಯವಾಗಿದೆ ಎಂದು ಜಿ. ಬಿ. ವಿನಯ್ ಕುಮಾರ್ ಹೇಳಿದರು.
ಬೀಸುತ್ತಿದೆ ಬದಲಾವಣೆ ಗಾಳಿ
2014ರಲ್ಲಿ ಆರಂಭವಾದ ನಮ್ಮ ಸಂಸ್ಥೆಯು ಲಖ್ನೋ, ಹೈದರಾಬಾದ್, ಜಮ್ಮು ಕಾಶ್ಮೀರದಲ್ಲಿ ಬ್ರಾಂಚ್ ತೆರೆದಿದ್ದೇವೆ. ಎಲ್ಲರಿಗೂ ಅವಕಾಶ ಸಿಗದಿದ್ದಾಗ ಬಡವರ ಮಕ್ಕಳಿಗೂ ಅವಕಾಶ ಕಲ್ಪಿಸಬೇಕು, ಸೃಷ್ಟಿಸಬೇಕು ಎಂಬ ಕಾರಣಕ್ಕೆ ಶ್ರಮಿಸುತ್ತಿದ್ದೇನೆ. ಹೋರಾಟದ ಫಲವಾಗಿ ಕಾಂಗ್ರೆಸ್ ಪಕ್ಷದಲ್ಲಿ ನನ್ನ ಹೆಸರು ಲೋಕಸಭೆ ಚುನಾವಣೆಗೆ ಮುಂಚೂಣಿಯಲ್ಲಿದೆ. ಪ್ರದೀಪ್ ಈಶ್ವರ್ ಗೆದ್ದ ಬಳಿಕ ರಾಜಕಾರಣದಲ್ಲಿ ಬದಲಾಗುತ್ತಿದೆ. ಬದಲಾವಣೆಯ ಗಾಳಿ ಬೀಸುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರ ಹೆಸರು ಕೇಳಿ ಬರುತ್ತಿವೆ. ರಾಜಕಾರಣದಲ್ಲಿಯೂ ಮಾನ್ಯತೆ ಸಿಗಲಾರಂಭಿಸಿದೆ. ದಾವಣಗೆರೆ ಕ್ಷೇತ್ರದಲ್ಲಿ ಜಿಲ್ಲೆಯ ಯುವಕರು ಪದವಿ ಪಾಸ್ ಆದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಬೇಕು ಎಂಬ ಉದ್ದೇಶ ಇದೆ. ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿಯೂ ಕೇಂದ್ರ ಆರಂಭಿಸುತ್ತೇವೆ ಎಂದು ಘೋಷಿಸಿದರು.
ಭರವಸೆ ಮಾತ್ರವಲ್ಲ, ಈಡೇರಿಸುತ್ತೇನೆ
ನಾನು ರಾಜಕಾರಣಕ್ಕೆ ಬಂದಿರಬಹುದು. ಕೇವಲ ಭರವಸೆ ಮಾತ್ರ ಕೊಡುವುದಿಲ್ಲ, ಈಡೇರಿಸಲು ಪ್ರಯತ್ನಿಸುತ್ತೇನೆ. ಎಷ್ಟೇ ಕಷ್ಟವಾದರೂ ಶಿಕ್ಷಣಕ್ಕೆ ಬಂಡವಾಳ ಹಾಕಿ. ಹೊಟ್ಟೆಗೆ ಊಟ ಇಲ್ಲ ಎಂದಾಗಲೂ ನನಗೆ ಹಲವರುಸಹಾಯ ಮಾಡಿದ್ದಾರೆ. ಎಂಬಿಬಿಎಸ್ ಓದಿ ಡಾಕ್ಟರ್ ಆಗಬೇಕಿತ್ತು. ಆದ್ರೆ, ಆಗಲಿಲ್ಲ. ನನ್ನ ತಂದೆ ಒಳ್ಳೆ ಕಾಲೇಜಿನಲ್ಲಿ ಓದಿಸಿದರು. ಅಂದು ಕಾರು ಹತ್ತಿಲ್ಲ, ಸೈಕಲ್ ಹತ್ತಿರಲಿಲ್ಲ. ಈಗ ನನ್ನ ಜೀವನ ಶೈಲಿಯೇ ಬದಲಾಗಿದೆ. ಮೈಸೂರು, ಬೆಂಗಳೂರು, ದಾವಣಗೆರೆಯಲ್ಲಿ ಕಾರಿನಲ್ಲಿ ನಾನು ಓಡಾಡುತ್ತಿರುವುದನ್ನು ನೋಡಿದರೆ ಪೋಷಕರಷ್ಟೇ ಅಲ್ಲ, ಎಲ್ಲರೂ ಅಚ್ಚರಿಯಿಂದ ನೋಡುತ್ತಾರೆ. ಇದಕ್ಕೆ ಸಾಧ್ಯವಾಗಿದ್ದು ಪುಸ್ತಕ, ಕಂಪ್ಯೂಟರ್. ಪೋಷಕರು ಮಕ್ಕಳ ಶಿಕ್ಷಣಕ್ಕೆ ಬಂಡವಾಳ ಹೂಡಿದರೆ ಮುಂದೊಂದು ದಿನ ಲಾಭ ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ಪೋಷಕರು ಆಲೋಚಿಸಬೇಕು ಎಂದು ಸಲಹೆ ನೀಡಿದರು.
ಕಡುಬಡವರ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುತ್ತೇವೆ. ಐಎಎಸ್, ಕೆಎಎಸ್ ಮಾಡುವುದನ್ನ ಹೇಳಿಕೊಡುತ್ತೇನೆ. ಅವರಿಗಾಗಿ ವೈಯಕ್ತಿಕ ನೆರವನ್ನೂ ನೀಡುತ್ತೇನೆ ಎಂದು ಜಿ. ಬಿ. ವಿನಯ್ ಕುಮಾರ್ ಭರವಸೆ ನೀಡಿದರು.
ಜನರಿಗೆ ಹತ್ತಿರವಾಗ್ತಿದ್ದೇನೆಂಬ ಸಂತೃಪ್ತಿ ಇದೆ
ಯಾವುದೇ ಪಕ್ಷವಿರಲಿ, ಮೊದಲು ಜನರ ಬಳಿಗೆ ಬರಬೇಕು. ಆಕಾಂಕ್ಷಿಗಳ ಸಂಪೂರ್ಣ ಪರಿಚಯ ಜನರಿಗೆ ಆಗಬೇಕು. ಇಂಥವರೇ ಅಭ್ಯರ್ಥಿಯಾಗೇಕು ಎಂದು ದೆಹಲಿ, ಬೆಂಗಳೂರುವರೆಗೆ ತಲುಪುವಂತೆ ಒತ್ತಡ ಬರಬೇಕು. ನಿಮ್ಮ ಮಾತು, ಅಭಿಪ್ರಾಯ ಪರಿಗಣನೆಗೆ ಬರಬೇಕು. ಇದು ಇಲ್ಲದೇ ಟಿಕೆಟ್ ಪಡೆದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥ ಬರುವುದಾದರೂ ಹೇಗೆ? ಹಳ್ಳಿ ಜನರು ಸ್ವಾಭಿಮಾನಿಗಳು, ಸ್ವಾಭಿಮಾನ ಬಿಟ್ಟು ಹೋಗುವುದಿಲ್ಲ. ಆಯ್ಕೆ ಮಾಡುವ ಜನಪ್ರತಿನಿಧಿಗಳ ಜೊತೆ ನಿಮ್ಮ ಉತ್ತಮ ಬಾಂಧವ್ಯ ಇದ್ದರೆ ಕೆಲಸವೂ ಸುಸೂತ್ರವಾಗುತ್ತದೆ. ಪಾದಯಾತ್ರೆ ಮಾಡಿ ಜನರ ಬಳಿಗೆ ಹೋಗುತ್ತಿದ್ದೇನೆ. ಟಿಕೆಟ್ ಸಿಗುತ್ತೋ ಇಲ್ಲವೋ ಮುಖ್ಯವಲ್ಲ. ಜನರ ಜೊತೆಗೆ ಸಂವಾದ ನಡೆಸಿ, ಸಮಸ್ಯೆಗಳನ್ನು ಸಂಕಷ್ಟ ಆಲಿಸುವ ಮೂಲಕ ಹತ್ತಿರವಾಗಿದ್ದೇನೆ ಎಂಬ ಸಂತೃಪ್ತಿ ಇದೆ ಎಂದರು.