ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಅ. 26ಕ್ಕೆ “ಕುರುಬ ಸಮುದಾಯದವರಿಗಾಗಿ” ರಾಜ್ಯಮಟ್ಟದ “ನೀವೂ ನಾಯಕರಾಗಿ” ಚಿಂತನ ಮಂಥನ

On: October 24, 2025 5:40 PM
Follow Us:
ಕುರುಬ
---Advertisement---

ದಾವಣಗೆರೆ: ನಗರದ ಕನ್ನಡ ಭವನದಲ್ಲಿ “ಕುರುಬ ಸಮುದಾಯದವರಿಗಾಗಿ” ರಾಜ್ಯಮಟ್ಟದ “ನೀವೂ ನಾಯಕರಾಗಿ” ಎಂಬ ಚಿಂತನ-ಮಂಥನ ಹಾಗೂ ಕುರುಬರ ಎಸ್ಟಿ ಮೀಸಲಾತಿ ಮಾಹಿತಿ ಜಾಗೃತಿ ಸಭೆಯನ್ನು ಅಕ್ಟೋಬರ್ 26ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3ಗಂಟೆಯವರೆಗೆ ಆಯೋಜಿಸಲಾಗಿದೆ.

READ ALSO THIS STORY: ಸುಳ್ಳು ಕೇಸ್ ದಾಖಲಿಸಿರುವ ಚನ್ನಗಿರಿ ಇನ್ ಸ್ಪೆಕ್ಟರ್ ರವೀಶ್ ವಿರುದ್ಧ ಕ್ರಮ ಕೈಗೊಳ್ಳಬೇಕು: ಹೊನ್ನೆಮರದಹಳ್ಳಿ ಗ್ರಾಮಸ್ಥರ ಒಕ್ಕೊರಲ ಒತ್ತಾಯ!

ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲು ಇಚ್ಛಿಸುವವರಿಗಾಗಿ ಈ ಸಭೆ ಏರ್ಪಡಿಸಲಾಗಿದೆ ಎಂದು ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ರಾಜು ಮೌರ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್. ಪಕ್ಷಗಳ ಕಾರ್ಯಕರ್ತರು ಟಿಕೆಟ್ ಆಕಾಂಕ್ಷಿಗಳಾಗಿದ್ದರೆ ಅವರ ವಿವರಗಳನ್ನು ಒಟ್ಟಾಗಿ ಕ್ರೂಢೀಕರಿಸಿ, ಆಯಾ ಪಕ್ಷಗಳ ರಾಜ್ಯಾಧ್ಯಕ್ಷರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸುವುದು, ಚುನಾವಣೆಗಳ ತಯಾರಿ, ಸೋಷಿಯಲ್ ಮೀಡಿಯಾ, ಎಐ (ಆರ್ಟಿಫಿಷಿಯಲ್ ಇಂಟಿಜಿಯನ್ಸ್) ಬಳಕೆ ಹಾಗೂ ಕ್ಷೇತ್ರಗಳ ಸಮಸ್ಯೆಗಳು, ಮತದಾರರನ್ನು ತಲುಪುವ ಬಗ್ಗೆ, ರಾಜಕೀಯ ವಿಶ್ಲೇಷಕರಿಂದ ಸಂಬಂಧಪಟ್ಟಂತಹ ವಿಷಯಗಳ ಬಗ್ಗೆ ತಿಳಿಸಿ ಆತ್ಮಸ್ಥೆರ್ಯ ತುಂಬುವಂತಹ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.

ಕುರುಬ ಸಮುದಾಯದಲ್ಲಿನ ರಾಜಕೀಯ ನಾಯಕರ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಕಳೆದ ಬಾರಿ ವಿಧಾನಸಭೆ, ಲೋಕಸಭೆ ಟಿಕೆಟ್ ಆಕಾಂಕ್ಷಿಗಳಾಗಿದ್ದವರು, ಸ್ಪರ್ಧಿಸಿದ್ದಂತಹ ಅಭ್ಯರ್ಥಿಗಳು, ನೂತನವಾಗಿ ಕರ್ನಾಟಕ ಸರ್ಕಾರದ ನಿಗಮ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ವಿಜಯಪುರ ಮಹಾನಗರಪಾಲಿಕೆ ಮಹಾಪೌರರಿಗೆ ಆಹ್ವಾನ ನೀಡಲಾಗಿದ್ದು ಅವರಿಂದಲೂ ರಾಜಕೀಯ ಕ್ಷೇತ್ರದಲ್ಲಿನ ಏಳು ಬೀಳುಗಳು, ಅನುಭವಗಳು ಹಂಚಿಕೊಳ್ಳಲಾಗುತ್ತದೆ. ನಿಗಮ ಮಂಡಳಿಗಳಿಗೆ ನೇಮಕವಾಗಿರುವ ಅಧ್ಯಕ್ಷರು, ಉಪಾಧ್ಯಕ್ಷರು, ಮೇಯರ್‌ರವರಿಗೆ “ಅಭಿಮಾನದ ಅಭಿನಂದನೆ”ಯ ಮೂಲಕ ಗೌರವ ಸನ್ಮಾನಿಸಲಾಗುವುದು ಎಂದರು.

ರಾಜ್ಯದಲ್ಲಿ ಕುರುಬ ಸಮುದಾಯ ಎದುರಿಸುತ್ತಿರುವ ಮೊದಲ ಹಾಗೂ ಎರಡನೇ ಹಂತದ ರಾಜಕೀಯ ನಾಯಕತ್ವದ ಕೊರತೆಯನ್ನು ನೀಗಿಸಲು ಮುಂದಿನ ವಿಧಾನಸಭೆ ಹಾಗೂ ವಿಧಾನಪರಿಷತ್ತು ಚುನಾವಣೆಗಳಲ್ಲಿ ಸ್ಪರ್ಧಿಸಲು ಇಚ್ಛಿಸುವ ಆಕಾಂಕ್ಷಿಗಳಿಗೂ ಚುನಾವಣೆಗಳ ಬಗ್ಗೆ ರಾಜ್ಯಮಟ್ಟದಲ್ಲಿ ಸಭೆಗಳನ್ನು ಆಯೋಜಿಸಲು ರಾಜ್ಯಮಟ್ಟದಲ್ಲಿ ಹಾಲುಮತ ಮಹಾಸಭಾ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಸಿ. ವೀರಣ್ಣನವರು ವಹಿಸಲಿದ್ದಾರೆ ಎಂದು ತಿಳಿಸಿದರು.

ಅಂದು ಹಾಲುಮತ ಮಹಾಸಭಾದ ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರುಗಳ ನೇತೃತ್ವದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೆ “ಕುರುಬರ ಎಸ್. ಟಿ. ಮೀಸಲಾತಿಯ ಮಾಹಿತಿ – ಜಾಗೃತಿ ಸಭೆ’ಯನ್ನೂ ಆಯೋಜಿಸಲಾಗಿದ್ದು, ಎಸ್. ಟಿ. ಮೀಸಲಾತಿ ಪಟ್ಟಿಯಲ್ಲಿ ಕ್ರಮ ಸಂಖ್ಯೆ 28 ರಲ್ಲಿ ಕುರುಬ ಸೇರಿದಂತೆ ಗೊಂಡ, ಜೇನು ಕುರುಬ, ಕಾಡು ಕುರುಬ, ಬೆಟ್ಟ ಕುರುಬ, ಕುರುಮನ್ಸ್, ಕಾಟ್ಟುನಾಯಕನ್ 6 ಸಮನಾರ್ಥ ಪದಗಳು ಇದ್ದರೂ ಅಖಂಡ ಕರ್ನಾಟಕದ ಕುರುಬರಿಗೆ ಎಸ್. ಟಿ. ಮೀಸಲಾತಿ ವಿಸ್ತಾರವಾಗಬೇಕೆಂಬ ಹೋರಾಟದ ಕುರಿತಂತೆ ಚರ್ಚಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ಜಗದ್ಗುರುಗಳ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಕಳೆದ 10 ವರ್ಷಗಳಿಂದ ನಿರಂತರ ಹೋರಾಟ, ಸರ್ಕಾರಗಳ ಜೊತೆ ಮಾತುಕತೆಗಳಿಂದ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ 20-7-2023ರಂದು ಶಿಫಾರಸ್ಸು ಆಗಿದ್ದು, ಪ್ರಕ್ರಿಯೆಗಳು ನಡೆಯುತ್ತಿರುವ ಸಮಯದಲ್ಲಿ “ಕುರುಬರ ಎಸ್. ಟಿ. ಮೀಸಲಾತಿ ವಿಷಯದಲ್ಲಿ’ 1976, 1986, 1991 ರಲ್ಲಿ ಕೈ ತಪ್ಪಿದ್ದರ ಬಗ್ಗೆ, ಪ್ರಸ್ತುತ ಆಗುತ್ತಿರುವ ಬೆಳವಣಿಗೆಗಳು, ಮುಂದಿನ ಪ್ರಕ್ರಿಯೆಗಳು ಹಾಗೂ ಹೋರಾಟದ ಬಗ್ಗೆ ರಾಜ್ಯಾದ್ಯಂತ ‘ಮಾಹಿತಿ-ಜಾಗೃತಿ ಸಭೆ’ಗಳನ್ನು ನಡೆಸಲು ದಾವಣಗೆರೆಯಲ್ಲಿ ‘ಪೂರ್ವಭಾವಿ ಸಭೆ’ಯಲ್ಲಿ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿಯವರ ಅಧ್ಯಕ್ಷತೆಯಲ್ಲಿ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಯಲಿದೆ. ಕುರುಬ ಸಮಾಜದ ಎಲ್ಲಾ ಸಂಘ ಸಂಸ್ಥೆಗಳು ಈ ಸಭೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸಿ. ವೀರಣ್ಣ, ಕಾರ್ಯಾಧ್ಯಕ್ಷ ಚಂದ್ರು ದೀಟೂರು, ಉಪಾಧ್ಯಕ್ಷ ಜಿ. ಷಣ್ಮುಖಪ್ಪ, ಘನರಾಜ್, ಎಸ್. ಎಂ. ಸಿದ್ದಲಿಂಗಪ್ಪ, ಗಿರೀಶ್ ಮತ್ತಿತರರು ಹಾಜರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment