SUDDIKSHANA KANNADA NEWS/ DAVANAGERE/ DATE:18-09-2023
ಲಖನೌ: ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಅಪರಾಧ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ಕೆಲಸ ಮುಂದುವರಿದಿದೆ. ಅದರಲ್ಲಿಯೂ ಆದಿತ್ಯನಾಥ ಯೋಗಿ (Yogi Adityanath) ಸಿಎಂ ಆದ ಬಳಿಕ ಉತ್ತರ ಪ್ರದೇಶದಲ್ಲಿ ಕ್ರೈ ರೇಟ್ ತಗ್ಗಿದೆ. ಮುಖ್ಯವಾಗಿ ರೌಡಿ ಚಟುವಟಿಕೆಗಳು, ಹತ್ಯೆ ಸೇರಿದಂತೆ ಅನೇಕ ರೀತಿಯ ಅಕ್ರಮಗಳಿಗೆ ಕಡಿವಾಣ ಹಾಕಲಾಗಿದೆ.
ಈ ಸುದ್ದಿಯನ್ನೂ ಓದಿ:

Bangalore: ಸುಲಭವಾಗಿ ಕನ್ನಡ ಕಲಿಯಬೇಕಾ? ಕನ್ನಡ ಡಿಸ್ಕೋ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ ಬೆಂಗಳೂರಿನ 17 ವರ್ಷದ ಪೋರ…!
ಈಗ ಮಹಿಳೆಯರು ಮತ್ತು ಯುವತಿಯರ ರಕ್ಷಣೆ ಬಗ್ಗೆ ವಿಶೇಷ ಕಾಳಜಿ ವಹಿಸಿರುವ ಉತ್ತರ ಪ್ರದೇಶ ಸರ್ಕಾರ, ದೇವರ ಸ್ಥಾನ ನೀಡಿರುವ ಸ್ತ್ರೀ ಕುಲಕ್ಕೆ ಕಿರುಕುಳ ನೀಡುವಂಥ ದುಷ್ಟಶಕ್ತಿಗಳಿಗೆ ಯಮ ಕಾದು ಕುಳಿತಿರುತ್ತಾನೆ ಹುಷಾರ್ ಎಂದು ಖಡಕ್
ಎಚ್ಚರಿಕೆ ನೀಡಿದೆ.
ಉತ್ತರ ಪ್ರದೇಶ ಸಿಎಂ ಆದಿತ್ಯನಾಥ ಯೋಗಿ (Yogi Adityanath) ಮಹಿಳೆಯರು, ಯುವತಿಯರಿಗೆ ಕಿರುಕುಳ ಕೊಟ್ಟರೆ ಸಹಿಸುವ ಪ್ರಶ್ನೆಯೇ ಇಲ್ಲ. ಇದಕ್ಕೆ ಸರ್ಕಾರ ತಕ್ಕ ಉತ್ತರ ಕೊಡುತ್ತದೆ. ಇದು ವಿಪರೀತವಾದರೆ ಎನ್ ಕೌಂಟರ್ ಮಾಡಲು ಮುಂದಾಗಬೇಕಾಗುತ್ತದೆ
ಎಂಬರ್ಥದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಸಮಾಜಘಾತುಕ, ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಹಾಗೂ ಗಂಭೀರ ಕ್ರಿಮಿಲ್ ಅಪರಾಧ ಪ್ರಕರಣಗಳ ಆರೋಪಿಗಳನ್ನು ಎನ್ ಕೌಂಟರ್ ಮೂಲಕ ಉತ್ತರ ಕೊಡುವುದು, ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡಿದರೆ ಆರೋಪಿಗಳ ಮನೆಗಳಿಗೆ ಬುಲ್ಡೋಜರ್ ನುಗ್ಗಿಸಿ ಧ್ವಂಸ ಮಾಡುವಂಥ ಶಿಕ್ಷೆ ಕೊಡುತ್ತಿದ್ದ ಆದಿತ್ಯನಾಥ ಯೋಗಿ (Yogi Adityanath) ನೇತೃತ್ವದ ಸರ್ಕಾರವು, ಕ್ರಿಮಿನಲ್‌ಗಳಿಗೆ, ಪುಂಡರಿಗೆ ಹೆಣ್ಣುಮಕ್ಕಳ ತಂಟೆಗೆ ಹೋದರೆ, ಅವರನ್ನು ಮುಟ್ಟಿದರೆ ಯಮರಾಜ ನಿಮಗಾಗಿ ಕಾಯುತ್ತಿರುತ್ತಾ ಎಂದು ಹೇಳುವ ಮೂಲಕ ಮತ್ತೊಂದು ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ಬಾಲಕಿಯೊಬ್ಬಳನ್ನು ಶಹಾಬಾಜ್ ಮತ್ತು ಆತನ ಸಹೋದರ ಅರ್ಬಾಜ್ ಇಬ್ಬರು ಯುವಕರು ಚುಡಾಯಿಸಿ ಆಕೆಯ ದುಪ್ಪಟ್ಟವನ್ನು ಎಳೆದಾಗ ಆಕೆ ನೆಲಕ್ಕೆ ಬಿದ್ದಿದ್ದಳು. ಈ ವೇಳೆ ಫೈಸಲ್ ಎಂಬ ಯುವಕ ಬೈಕ್ ನಲ್ಲಿ ಪಾಸಾಗುತ್ತಿದ್ದ ವೇಳೆ ಯುವತಿಯ ತಲೆಯ ಮೇಲೆ ಬೈಕ್ ಹತ್ತಿಸಿದ್ದು ಪರಿಣಾಮ ಆಕೆ ಮೃತಪಟ್ಟಿದ್ದಾಳೆ. ತಕ್ಷಣ ಕ್ರಮ ತೆಗೆದುಕೊಂಡಿರುವ ಯುಪಿ ಸರ್ಕಾರ ಇಬ್ಬರ ಕಾಲಿಗೆ ಗುಂಡು ಹಾರಿಸಿ ಅವರಿಬ್ಬರನ್ನು ಬಂಧಿಸಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಮೊದಲ ಆದ್ಯತೆ. ಹೆಣ್ಣು ಮಕ್ಕಳಿಗೆ ರಾಜ್ಯದಲ್ಲಿ ಯಾರಾದರೂ ಕಿರುಕುಳ ನೀಡುವುದು, ಚುಡಾಯಿಸುವುದು, ಲೈಂಗಿಕ ಕಿರುಕುಳ ನೀಡುವುದನ್ನು ಸಹಿಸುವ ಪ್ರಶ್ನೆಯೇ ಇಲ್ಲ.ಮುಂಬರುವ ದಿನಗಳಲ್ಲಿ ಯಮರಾಜ ಅಂಥವರಿಗೋಸ್ಕರ ಕಾದು ಕುಳಿತಿದ್ದಾನೆ. ಅಪರಾಧಿಗಳಿಗೆ ಕ್ಷಮೆ ಎನ್ನುವುದಿಲ್ಲ. ಕಠಿಣ ಕ್ರಮ ಖಚಿತ, ಶಿಕ್ಷೆಯೂ ಗ್ಯಾರಂಟಿ ಎಂದು ಆದಿತ್ಯನಾಥ ಯೋಗಿ ತಿಳಿಸಿದ್ದಾರೆ.